Binnahake baayilla

Composer : Shri Jayesha vittala

Shri Anantharam Kalya

ಬಿನ್ನಹಕೆ ಬಾಯಿಲ್ಲ ಭೂತನಾಥ [ಪ]
ನಿನ್ನ ಪದರಜ ಸ್ನಾನ ನೀಡೆನ್ನ ಉದ್ಧರಿಸು [ಅ.ಪ]

ಹೀನ ಯೋಗ್ಯತೆಗಿನ್ನು ಏನು ಮಾಡಲೊ ಸ್ವಾಮಿ
ಧೇನು ವತ್ಸನ ತೆರದಿ ಪಾಲಿಸೆನ್ನ
ವೇಣುಗೋಪಾಲನಾ ಧ್ಯಾನ ನಿಲ್ಲದು ಮನದಿ
ನಾನು ನನ್ನದು ಬಿಡದು ಎನಗಾವ ಗತಿಯಿನ್ನು [೧]

ನೀಲಕಂಠನೆ ನಿನ್ನ ನೀಳಪಾದದ ಧೂಳಿ
ಮೂರ್ಲೋಕದಘ ತೂಲಕಗ್ನಿ ಸತತ
ಫಾಲಾಕ್ಷ ಪತಿತ ಪರಿಪಾಲಕನು ನೀನೊಬ್ಬ
ಹಾಲಲ್ಲಿ ಅದ್ದೆನ್ನ ಹರಿಭಕ್ತರ ಬಂಧು [೨]

ಮನಕರಣ ತನು ವಿಷಯ ಘನಪಾಶದಲಿ ಸಿಕ್ಕಿ
ಉಣಿಸುವುವು ಮಹದುಃಖ ಎನ್ನ ಮೀರಿ
ಮನೋ ಹೃದಯದಲಿ ದೋಷ ತುಂಬಿ ತುಳುಕುವುದಯ್ಯ
ಎನಿತು ನಿನ್ನಲಿ ನಿಂದು ಪೊರೆಯೆಂದು ಮೊರೆ ಇಡಲಿ [೩]

ದುಷ್ಟವಾಸನೆ ಶಕ್ತಿ ಮೆಟ್ಟಿ ಆಳುವುದೆನ್ನ
ವೃಷ್ಟೀಶನಲಿ ಎನ್ನ ಪೋಗಬಿಡದೊ
ದುಷ್ಟ ನಕ್ರಗೆ ಸಿಕ್ಕ ಕರಿಯಂತೆ ಬಾಯ್-ಬಿಡುವೆ
ಕಷ್ಟ ಪರಿಹರಿಸಯ್ಯ ಹರಿ ನಿಷ್ಠ ಧ್ಯಾನವನಿತ್ತು [೪]

ಶತಕೋಟಿ ಶ್ರುತಿಯಲಿ ಜಯೇಶವಿಠಲ
ನತಬಂಧು ಎಂತೆಂದು ಸಾರುತಿಹುದು
ಹಿತಭಕ್ತ ನೀ ಹರಿಗೆ ಹರಿಮೀರ ನಿನ್ನುಕ್ತಿ
ಪತಿತಪಾವನ ನನ್ನ ಹರಿಭಕ್ತನ ಮಾಡು [೫]


binnahake bAyilla BUtanAtha [pa]
ninna padaraja snAna nIDenna uddharisu [a.pa]

hIna yOgyateginnu Enu mADalo svAmi
dhEnu vatsana teradi pAlisenna
vENugOpAlanA dhyAna nilladu manadi
nAnu nannadu biDadu enagAva gatiyinnu [1]

nIlakaMThane ninna nILapAdada dhULi
mUrlOkadaGa tUlakagni satata
PAlAkSha patita paripAlakanu nInobba
hAlalli addenna hariBaktara baMdhu [2]

manakaraNa tanu viShaya GanapASadali sikki
uNisuvuvu mahaduHKa enna mIri
manO hRudayadali dOSha tuMbi tuLukuvudayya
enitu ninnali niMdu poreyeMdu more iDali [3]

duShTavAsane Sakti meTTi ALuvudenna
vRuShTISanali enna pOgabiDado
duShTa nakrage sikka kariyaMte bAy-biDuve
kaShTa pariharisayya hari niShTha dhyAnavanittu [4]

SatakOTi Srutiyali jayESaviThala
natabaMdhu eMteMdu sArutihudu
hitaBakta nI harige harimIra ninnukti
patitapAvana nanna hariBaktana mADu [5]

Leave a Reply

You might also like

error: Content is protected !!