Indire mandiradolu

Composer: Shri Vadirajaru

ಇಂದಿರೆ ಮಂದಿರದೊಳು ನಿಂದಿರೆ,
ಇಂದಿರೆ ನೀ ನಿಂದಿರೆ |ಪ|

ಇಂದಿರೆ ಹೊಂದಿದೆ ನಿನ್ನ ಮುದ-
ದಿಂದ ಪಾಲಿಸು ನಿತ್ಯಾ ಎನ್ನ |ಆಹಾ|
ಗಂಧ ತುಳಸಿ ಅರವಿಂದ ಮಲ್ಲಿಗೆ ಪುಷ್ಪ-
ದಿಂದ ಪೂಜಿಸುವೆನು ಕುಂದುಗಳೆಣಿಸದೆ |
ಇಂದಿರೆ ನೀ ನಿಂದಿರೆ |

ಘಲು ಘಲು ಗೆಜ್ಜೆಯ ನಾದದಿಂದ
ಫಳಫಳಿಸುವ ದಿವ್ಯಪಾದದೊಳು
ಪಿಲ್ಯ ಕಾಲುಂಗುರ ನಾದ ಅಂಘ್ರಿ
ಚಲಿಸುವ ದಿವ್ಯ ಸುಸ್ವಾದ |ಆಹಾ|
ಕಾಲಲಂದುಗೆ ಗೆಜ್ಜೆ ಝಳಪಿಸುತ ನ–
ಮ್ಮಾಲಯದೊಳು ನಿಲ್ಲೆ ಪಾಲವಾರಿಧಿ ಕನ್ಯೆ |೧|
ಇಂದಿರೆ ನೀ ನಿಂದಿರೆ |

ಹರಡಿ ಕಂಕಣ ವಂಕಿ ಡೋರ್ಯ
ಕೊರಳೊಳಗೆ ನಾನಾ ವಿಧದ್-ಹಾರ
ಬಾಯಲಿರುವೋ ಕರ್ಪೂರ ವೀಳ್ಯ ಸಾರೆ
ಸುರಭಿ ನಾಸಿಕ ಚಂಪಕ ಪುಷ್ಪದ್ಹಾರ |ಆಹಾ|
ಎರಳೆ ಗಂಗಳೆ ಸಿರಿ ಅರಳೆಲೆ ಕುಂಕುಮ
ಹೆರಳಗೊಂಡ್ಯೆ ಗಳಿಂದ ಹರಿಯ ಮೋದಿಸುವೆ |೨|
ಇಂದಿರೆ ನೀ ನಿಂದಿರೆ |

ಜಯ ಜಯ ಜಯ ವಿಜಯ ಸಂಪೂರ್ಣೆ ಭಕ್ತ
ಭಯನಿವಾರಣೆ ಎಣೆಗಾಣೆ, ಎನ್ನ
ಕಾಯುವರನ್ಯರ ಕಾಣೆ, ಶೇಷ–
ಶಯನನ್ನ ತೋರೆ ಸುಶ್ರೇಣೆ |ಆಹಾ|
ಕೈಯ್ಯ ಪಿಡಿದು ಭವಭಯವ ಪರಿಹರಿಸೆ, ಸಿರಿ
ಹಯವದನನ ದಯವ ಪಾಲಿಸೆ ಲಕ್ಷ್ಮೀ |೩|
ಇಂದಿರೆ ನೀ ನಿಂದಿರೆ |


iMdire maMdiradoLu niMdire,
iMdire nee niMdire |pa|

iMdire hoMdide ninna muda-
diMda pAlisu nityA enna |AhA|
gaMdha tuLasi araviMda mallige puShpa-
diMda pUjisuvenu kuMdugaLeNisade |
iMdire nee niMdire |

Galu Galu gejjeya nAdadiMda
PaLaPaLisuva divyapAdadoLu
pilya kAluMgura nAda aMGri
calisuva divya susvAda |AhA|
kAlalaMduge gejje JaLapisuta na–
mmAlayadoLu nille pAlavAridhi kanye |1|
iMdire nee niMdire |

haraDi kaMkaNa vaMki DOrya
koraLoLage nAnA vidhad-hAra
bAyaliruvO karpUra vILya sAre
suraBi nAsika caMpaka puShpad~hAra |AhA|
eraLe gaMgaLe siri araLele kuMkuma
heraLagoMDye gaLiMda hariya mOdisuve |2|
iMdire nee niMdire |

jaya jaya jaya vijaya saMpUrNe Bakta
BayanivAraNe eNegANe, enna
kAyuvaranyara kANe, SESha–
Sayananna tOre suSrENe |AhA|
kaiyya piDidu BavaBayava pariharise, siri
hayavadanana dayava pAlise lakShmI |3|
iMdire nee niMdire |

Leave a Reply

Your email address will not be published. Required fields are marked *

You might also like

error: Content is protected !!