Composer: Shri Gurupranesha dasaru
ಸುಖದ ಸುಂದರ ವಿಠ್ಠಲರಾಯಾ |
ಭಕುತರ ಪಾಲಿಸೊ ಜೀಯಾ || ಪ. ||
ಸುಖತೀರ್ಥರ ಶಾಸ್ತ್ರಕೆ ಸಮ್ಮತವಾಗಿ |
ಪ್ರಕಟಿಸಿದೆನನ್ನಿಂದ ಕೀರ್ತನೆಯ ||
ಸಕಲ ಜನರು ಕೇಳಿ ಪಠಿಸುತಲಿರದು |
ಮುಕುತಿಗೆ ಸತ್ಪಥವಾಗಿರಲಿ || ೧ ||
ಆಯುರಾರೋಗ್ಯವು ಹೆಚ್ಚುತಲಿರಲಿ |
ಮಾಯಾಮೋಹಗಳು ದೂರಾಗಲಿ ||
ಶ್ರೇಯಸ್ಸೆಂಬುದು ಕರಗತವಾಗಲಿ |
ವಾಯುದೇವರು ಸುಪ್ರೀತರಾಗಲಿ || ೨ ||
ಕರುಣಾಕರ ನೀನೆಂಬುದು |
ಮರೆಯದ್~ ಹಾಂಗೆ ಮಾಡೊ ಕರಿವರದಾ ||
ಗುರು ಪ್ರಾಣೇಶ ವಿಠ್ಠಲ ಕರವ ಪಿಡಿದು |
ಶರಣರ ಪೊರೆಯ ಬೇಕೊ ವಿಠ್ಠಲ || ೩ ||
suKada suMdara viThThalarAyA |
Bakutara pAliso jIyA || pa. ||
suKatIrthara SAstrake sammatavAgi |
prakaTisidenanniMda kIrtaneya ||
sakala janaru kELi paThisutaliradu |
mukutige satpathavAgirali || 1 ||
AyurArOgyavu heccutalirali |
mAyAmOhagaLu dUrAgali ||
SrEyasseMbudu karagatavAgali |
vAyudEvaru suprItarAgali || 2 ||
karuNAkara nIneMbudu |
mareyad~ hAMge mADo karivaradA ||
guru prANESa viThThala karava piDidu |
SaraNara poreya bEko viThThala || 3 ||
Leave a Reply