Pavana sambhuta olidu

Composer: Shri Gurupranesha vittala

ಪವನ ಸಂಭೂತ ಒಲಿದು ತವಕದಿ ಕಾಯಬೇಕು ||ಪ||
ಇವನಾರೋ ಏನೋ ಎಂದುದಾಸೀನ ಮಾಡದಲೆನ್ನ ||ಅಪ||

ಕಪಿಪ ಕಪಿ ಆಜ್ಞೆಯಂತೆ ಕಪಿಲನ ಪತ್ನಿಯನ್ನು,
ಕಪಿಗಳು ಹುಡುಕಿ ಮಿಡುಕಲು ಕಾಯ್ದೆ ಆಗಲು ||೧||

ಹರಿವೇಷಧರನೆ ನರಹರಿ ಭಕುತರ ಪೊರೆವುದಕ್ಕೆ,
ಹರಿಯಂತೆ ಒದಗುವಿಯೋ ನೀನು ಹರಿದಾಸನು ನಾನು ||೨||

ಅಜಪಿತನ ಶಾಪದಿಂದ ಅಜಗರನಾದವನ ಪಾದ,
ರಜದಿ ಪುನೀತನ ಮಾಡಿದನೇ ಅಜಪದವಿಗೆ ಬಹನೇ ||೩||

ಕಲಿಯುಗದಿ ಕವಿಗಳೆಲ್ಲ ಕಲಿ ಬಾಧೆಯಿಂದ ಬಳಲೆ,
ಕಲಿವೈರಿ ಮುನಿಯೆಂದೆನಿಸಿದೆ ಕಲಿಮಲವ ಕಳೆದಿ ||೪||

ಗುರು ಪ್ರಾಣೇಶ ವಿಠಲ ಹರಿಪರನೆಂಬೊ ಜ್ಞಾನ,
ಗುರುಮಧ್ವರಾಯ ಕರುಣಿಸೋ ದುರ್ಮತಿಗಳ ಬಿಡಿಸೋ ||೫||


pavana saMBUta olidu tavakadi kAyabEku ||pa||
ivanArO EnO eMdudAsIna mADadalenna ||apa||

kapipa kapi Aj~jeyaMte kapilana patniyannu,
kapigaLu huDuki miDukalu kAyde Agalu ||1||

harivEShadharane narahari Bakutara porevudakke,
hariyaMte odaguviyO nInu haridAsanu nAnu ||2||

ajapitana SApadiMda ajagaranAdavana pAda,
rajadi punItana mADidanE ajapadavige bahanE ||3||

kaliyugadi kavigaLella kali bAdheyiMda baLale,
kalivairi muniyeMdeniside kalimalava kaLedi ||4||

guru prANESa viThala hariparaneMbo j~jAna,
gurumadhvarAya karuNisO durmatigaLa biDisO ||5||

Leave a Reply

Your email address will not be published. Required fields are marked *

You might also like

error: Content is protected !!