Maleya dayamado

Composer: Shri Helavanakatte Giriyamma

By Smt.Shubhalakshmi Rao

ಮಳೆಯ ದಯಮಾಡೊ ಶ್ರೀರಂಗ ನಿಮ್ಮ
ಕರುಣ ತಪ್ಪಿದರೆ ಉಳಿಯದೀ ಲೋಕ ||ಪ||

ಪಶುಜಾತಿ ಹುಲ್ಲೆ ಸಾರಂಗ ಮೃಗಗಳು ಬಹಳ
ಹಸಿದು ಬಾಯಾರಿ ಬತ್ತಿದ ಕೆರೆಗೆ ಬಂದು
ತೃಷೆಯಡಗದೆ ತಲ್ಲಣಿಸಿ ಮೂರ್ಛೆಯಗೊಂಡು
ದೆಸೆದೆಸೆಗೆ ಬಾಯಿ ಬಿಡುತಿಹವಯ್ಯ ಹರಿಯೆ ||೧||

ಧಗೆಯಾಗಿ ಇನ್ನು ದ್ರವಗುಂದದ ಬಾವಿಯ ನೀರು
ಮಗಿ ಮಗಿದು ಪಾತ್ರೆಯಲಿ ನಾರಿಯರು
ಹಗಲೆಲ್ಲ ತರುತಿಹರು ಯೋಚನೆಯ ಮಾಡುತ
ಬೇಗದಿಂದಲಿ ತರಿಸೊ ವೃಷ್ಟಿಯನು ಹರಿಯೆ ||೨||

ಬಂದು ಪೋದವು ಜ್ಯೇಷ್ಠ ಆಷಾಢ ಶ್ರಾವಣ
ಬಂದಿದೆ ಭಾದ್ರಪದ ಮಾಸವೀಗ
ಇಂದು ಪುರಂದರಗೆ ಹೇಳಿ ವೃಷ್ಟಿಯ ತರಿಸೊ
ಸಂದೇಹವಿನ್ಯಾಕೆ ಹೆಳವನಕಟ್ಟೆ ರಂಗ ||೩||


maLeya dayamADo shrIraMga nimma
karuNa tappidare uLiyadI lOka ||pa||

paSujAti hulle sAraMga mRugagaLu bahaLa
hasidu bAyAri battida kerege baMdu
tRuSheyaDagade tallaNisi mUrCeyagoMDu
desedesege bAyi biDutihavayya hariye ||1||

dhageyAgi innu dravaguMdada bAviya nIru
magi magidu pAtreyali nAriyaru
hagalella tarutiharu yOcaneya mADuta
bEgadiMdali tariso vRuShTiyanu hariye ||2||

baMdu pOdavu jyEShTha AShADha SrAvaNa
baMdide BAdrapada mAsavIga
iMdu puraMdarage hELi vRuShTiya tariso
saMdEhavinyAke heLavanakaTTe raMga ||3||

Leave a Reply

Your email address will not be published. Required fields are marked *

You might also like

error: Content is protected !!