Composer: Shri Anantadreesharu
ಚಾರುಶ್ರೀ ಕುಶನದಿ ತೀರದಲಿ ಇರುತಿಹನ್ಯಾರೆ ಪೇಳಮ್ಮಯ್ಯ
ಸಾರ ಯತೀಶ್ವರ ಧೀರ ಸುಗುಣ ಗಂಭೀರ ವಿಷ್ಣು ತೀರ್ಥಾರ್ಯ ಕಾಣಮ್ಮ
ವೃಂದಾರಕ ವರ ವೃಂದದೊಳಗೆ ನವ ಇವನ್ಯಾರೆ ಪೇಳಮ್ಮಯ್ಯ
ವೃಂದಾವನದಲಿ ಬಂದಿರುವರು ಮತ್ತಲ್ಲೆ ನೋಡಮ್ಮಯ್ಯ
ಮುಂದೆ ಮುದ್ರೆ ಬಹು ಚಂದದ ನಾಮವು ಗಂದಾಕ್ಷತೆ ನೋಡಮ್ಮಯ್ಯ
ಸಾರ ಯತೀಶ್ವರ ಧೀರ ಸುಗುಣ ಗಂಭೀರ ವಿಷ್ಣು ತೀರ್ಥಾರ್ಯ ಕಾಣಮ್ಮ (೧)
ನೀರೆ ನಾಲ್ಕು ವರ ಮೂರ್ತಿಗಳ ಬೆನ್-ಹಿಂದೆ ನೋಡಮ್ಮಯ್ಯ
ನಾರಾಯಣ ತನ್ನ ನಾರಿಯ ಸಹಿತ ಇಹನು ನೋಡಮ್ಮಯ್ಯ
ನಾರಿ ಮಣಿಯೆ ಶ್ರೀ ನಾರಸಿಂಹನು ಚಾರು ಚಕ್ರ ಶಿರದಲ್ಲಿಹನಮ್ಮ
ಸಾರ ಯತೀಶ್ವರ ಧೀರ ಸುಗುಣ ಗಂಭೀರ ವಿಷ್ಣು ತೀರ್ಥಾರ್ಯ ಕಾಣಮ್ಮ (೨)
ಲೇಸು ಆದ ಕೂರ್ಮಾಸನ ವಿರುವುದು ಕೆಳಗೆ ನೋಡಮ್ಮಯ್ಯ
ಭಾಸುರ ಜಯಮುನಿ ಶೇಷನಾಗಿ ಇರುತಿಹ ಮ್ಯಾಲೆ ನೋಡಮ್ಮಯ್ಯ
ಧೀಶ ಅನಂತಾದ್ರೀಶ ನಿರುತ ಮೋದೇಶ್ವರಾಖ್ಯ ಪುರ ವಾಸ ಕಾಣಮ್ಮ
ಸಾರ ಯತೀಶ್ವರ ಧೀರ ಸುಗುಣ ಗಂಭೀರ ವಿಷ್ಣು ತೀರ್ಥಾರ್ಯ ಕಾಣಮ್ಮ (೩)
chArushrI kushanadi teeradali irutihanyAre pELammayya
sAra yateeshwara dheera suguNa gaMbhIra viShNu tIrthArya kANamma
vRuMdAraka vara vRuMdadoLage nava ivanyAre pELammayya
vRuMdAvanadali baMdiruvaru mattalle nODammayya
muMde mudre bahu chaMdada nAmavu gaMdAkShate nODammayya
sAra yateeshwara dheera suguNa gaMbhIra viShNu tIrthArya kANamma (1)
neere naalku vara mUrtigaLa ben-hiMde nODammayya
nArAyaNa tanna nAriya sahita ihanu nODammayya
nAri maNiye shrI nArasiMhanu chAru chakra shiradallihanamma
sAra yateeshwara dheera suguNa gaMbhIra viShNu tIrthArya kANamma (2)
lEsu Ada koormAsana viruvudu keLage nODammayya
bhAsura jayamuni shEShanAgi irutiha myAle nODammayya
dheesha anaMtAdreesha niruta mOdEshwarAkhya pura vAsa kANamma
sAra yateeshwara dheera suguNa gaMbhIra viShNu tIrthArya kANamma (3)
Leave a Reply