Composer: Shri Shyamasundara dasaru
ದೇವಾ ಹನುಮ ಶೆಟ್ಟಿ | ರಾಯಾ ಜಗಜಟ್ಟಿ |
ಕಾವೋದು ಭಾವಿ ಪರಮೇಷ್ಠಿ ||ಪ||
ಪಾವನ ಚರಿತ ಸಂಜೀವನ ಗಿರಿಧರ |
ಪಾವಮಾನಿ ಕರುಣಾವ- ಲೋಕನದಿ |
ನೀ ಒಲಿಯುತ ಸದಾವಕಾಲ ತವ |
ತಾವರೆ ಪದಯುಗ ಸೇವೆಯ ಕರುಣಿಸೋ ||ಅ.ಪ||
ವಾನರ ಕುಲನಾಯಕ| ಜಾನಕಿಶೋಕ
ಕಾನನ ತೃಣಪಾವಕ |
ಹೀನ ಕೌರವ ನಾಶಕ ಸನ್ಮೌನಿ ತಿಲಕ |
ಆನಂದತೀರ್ಥ ನಾಮಕ ||
ಕ್ಷೋಣಿಯೊಳಗೆ ಎಣೆಗಾಣೆ ನಿನಗೆ ಎನ್ನ |
ಮಾಣದೆ ಅನುದಿನ ಪಾಣಿ ಪಿಡಿದು ಪೊರೆ |
ಸ್ಥಾಣುಜನಕ ಗೀರ್ವಾಣ ವಿನುತ
ಜಗತ್ ಪ್ರಾಣ ರಮಣ ಕಲ್ಯಾಣ ಮೂರುತಿ ||೧||
ಮರುತ ನಂದನ ಹನುಮ|
ಪುರಹರರೋಮ| ಪರಮ ಪುರುಷ ಶ್ರೀಭೀಮಾ |
ಕರುಣಾಸಾಗರ ಜಿತಕಾಮ |
ಸದ್ಗುಣ ಭೌಮ | ಪರವಾದಿ ಮತವ ನಿರ್ನಾಮ |
ಗಿರಿಸುತ ಪಾಲಕ ಜರಿಜ ವಿನಾಶಕ
ಹರಿಮತ ಸ್ಥಾಪಕ ದುರಿತ ವಿಮೋಚಕ |
ಶರಣ ಜನರ ಸುರತರು ಭಾರತಿವರ
ಮರೆಯದೆ ಪಾಲಿಸೋ ನಿರುಪಮ ಚರಿತ ||೨||
ದಿಟ್ಟ ಶ್ರೀ ಶ್ಯಾಮಸುಂದರ ವಿಠ್ಠಲ
ಕುವರ ದುಷ್ಟ ರಾವಣ ಮದಹರಾ |
ಜಿಷ್ಣು ಪೂರ್ವಜ ವೃಕೋದರ |
ರಣರಂಗ ಶೂರ | ಶಿಷ್ಟ ಜನರ ಉದ್ಧಾರ |
ನಿಷ್ಠೆಯಿಂದ ಮನಮುಟ್ಟಿ ನಿನ್ನ ಪದ |
ಥಟ್ಟನೆ ಪಾಡುವ ಶ್ರೇಷ್ಠ ಸುಜನರೊಳು |
ಇಟ್ಟು ಸಲಹೋ ಸದಾ ಸೃಷ್ಟಿ ಮಂಡಲದಿ |
ಪುಟ್ಟ ಗ್ರಾಮ ಬಲ್ಲಟಗಿಯ ವಾಸಾ ||೩||
dEvA hanuma SeTTi | rAyA jagajaTTi |
kAvOdu BAvi paramEShThi ||pa||
pAvana carita saMjIvana giridhara |
pAvamAni karuNAva- lOkanadi |
nI oliyuta sadAvakAla tava |
tAvare padayuga sEveya karuNisO ||a.pa||
vAnara kulanAyaka| jAnakiSOka
kAnana tRuNapAvaka |
hIna kaurava nASaka sanmouni tilaka |
AnaMdatIrtha nAmaka ||
kShONiyoLage eNegANe ninage enna |
mANade anudina pANi piDidu pore |
sthANujanaka gIrvANa vinuta
jagat prANa ramaNa kalyANa mUruti ||1||
maruta naMdana hanuma|
purahararOma| parama puruSha SrIBImA |
karuNAsAgara jitakAma |
sadguNa Bauma | paravAdi matava nirnAma |
girisuta pAlaka jarija vinASaka
harimata sthApaka durita vimOcaka |
SaraNa janara surataru BArativara
mareyade pAlisO nirupama carita ||2||
diTTa SrI SyAmasuMdara viThThala
kuvara duShTa rAvaNa madaharA |
jiShNu pUrvaja vRukOdara |
raNaraMga SUra | SiShTa janara uddhAra |
niShTheyiMda manamuTTi ninna pada |
thaTTane pADuva SrEShTha sujanaroLu |
iTTu salahO sadA sRuShTi maMDaladi |
puTTa grAma ballaTagiya vAsA || 3 ||
Leave a Reply