Samkshipta srutiprakarana suladi – Purandara dasaru

ಸಂಕ್ಷಿಪ್ತ ಸೃಷ್ಟಿಪ್ರಕರಣ ಸುಳಾದಿ
ರಾಗ: ಭೈರವಿ

ಧ್ರುವತಾಳ

ಪ್ರಳಯೋದಕದಲ್ಲಿ ವಟಪತ್ರಶಯನನಾಗಿದ್ದ
ಕಾಲದಲ್ಲಿ ಶ್ರೀದೇವಿಯರು
ಶ್ರೀ ಭೂ ದುರ್ಗಾ ರೂಪದಿ ನಿಂದು
ದಕ್ಷಣಾಯಜ್ಞ ನಾಮದಿಂದ ವೇದಗಳಿಂದ
ಕೊಂಡಾಡುವ ಮುಖ್ಯಾಭಿಮಾನಿಯಾಗಿ
ವರ್ಣಾತ್ಮಕದಿಂದ ನಿತ್ಯ ನಿಗಮಾರ್ಥಗಳಿಂದ
ತುತಿಸುವಳು ಆ ಆ ಆ ತ್ರಿಪ್ರಕಾರ
ಮಿತಿಯೆಂದು ಬೊಮ್ಮನ ನೂರರೊಳೆಂಟುಭಾಗ –
ದೊಳೊಂದು ಭಾಗವೀ ಲಕುಮಿದೇವಿಗೆ
ತಾ ಪ್ರೇರಿಸಲಾಗಿ ತುತಿಸುವಂದದಿ
ಪ್ರೇರಕನಾಗಿ ಪ್ರಾರ್ಥನೆ ಕೈಕೊಂಡು
ತಮ ತಮ್ಮ ಸಾಧನಗಳು ಮಾಡಿಕೊಂಬಲ್ಲಿ
ನಿರೂಪಿಸಿದನು ಪುರಂದರವಿಟ್ಠಲ್ಲ || ೧ ||

ಮಟ್ಟತಾಳ

ನೂರು ವರುಷವು ಯಿಂದಾಯಿತೆನಲು
ಉದಯಕಾಲದಿ ಚತುರ್ದಶ ಭುವನಾತ್ಮಕವಾದ
ಕಮಲದಲ್ಲಿ ಚತುರ್ಮುಖ ಬೊಮ್ಮನ ಪಡದೆ ನೀನು
ಒಮ್ಮೆ ಬಂದು ನಿನ್ನ ಪ್ರಳಯೋದಕವನು
ಥೆರೆಗಳ ನೋಡಿ ಯೇನು ಕಾಣದೆ ಪೊಕ್ಕುನಾಳದಲ್ಲಿ
ಮತ್ತೊಮ್ಮೆ ಬರಲು ನಿನ್ನ ಘೋರವಾದ
ನಿನ್ನ ರೂಪವು ಕಂಡು ಅಂಜಿ ಮತ್ತೆ
ನಿನ್ನ ಮನವೇನೆಂದು ಬಂದದ ಕಂಡು ಉದರಪ್ರವೇಶವಾದ
ಒಂದು ಭಯವು ಎರಡು ಅಜ್ಞಾನವು
ನಿನ್ನ ವಿಷಯದಲಿ ಉಂಟಾದಡಾಗಲಿ
ಕಂತುಜನಕ ನೀನೆ ತಪತಪವೆನಲಾಗ
ತಪವನು ಮಾಡಿದ ಪುರಂದರವಿಟ್ಠಲನ್ನ
ಒಲಿಸಿ ಸೃಷ್ಟಿಯ ಮಾಡಿದ ಸರಸಿಜ ಸಂಭವನು || ೨ ||

ರೂಪಕತಾಳ

ಸೂಕ್ಷ್ಮರೂಪವಾದ ಯಿಪ್ಪತ್ತುನಾಲ್ಕು ತತ್ವಗಳ
ಹೊರಗೆ ಪಂಚಭೂತಗಳಿಗಭಿಮಾನಿಯಾದ
ಗಣೇಶ ಮೊದಲಾದ ಪಂಚಭೂತಗಳ ಸೃಜಿಸಿದನಾಗ
ಒಂದೊಂದು ವರ್ಣದ ಅಭಿಮಾನಿಗಳಿಂದ
ಮಹತತ್ವಕೀಶ ಅಹಂಕಾರಧೀಶನೆಂದು
ಬೊಮ್ಮಾಂಡವ ನಿರ್ಮಾಣವ ಮಾಡಿ
ಪೂರ್ವದಂತೆ ಆ ದೇವತೆಗಳ ಸೃಜಿಸಿ
ಬೊಮ್ಮಾಂಡವಾಧಾರವಾಗಿ ತನ್ನ
ದೇಹವ ಬೆಳಸಿದ ಚತುರ್ಮುಖನಾಗ
ಮೂಲರೂಪದಿಂದ ಪುರಂದರವಿಟ್ಠಲ ವಿ –
ರಾಟದಲ್ಲಿ ವಾಸವಾಗಿ ನಿಂದ ಜಗದಾಧಾರ || ೩ ||

ಝಂಪಿತಾಳ

ಹಳೆಯ ಬೊಮ್ಮಗ ಅಂದು ಅವ್ಯಾಕೃತದಲ್ಲಿ ವಿರಜೆಯಲಿ
ಮುಳುಗಿಸಿ ಉದರದಲ್ಲಿ ಪ್ರವೇಶ ಬೊಮ್ಮಾದಿ –
ಗಳು ಯಿರಲು ಕೆಲವು ಲೋಕಂಗಳು ಸೃಷ್ಟಿಯಾದ
ಬಳಿಕ ಶ್ವೇತದ್ವೀಪದಲಿ ಯಿದ್ದ ಮೂರುತಿಯ
ದರುಶನದಿ ಮುಕುತರೆನಿಸಿಕೊಂಡು ಐದಿದರು
ಪುರಂದರವಿಟ್ಠಲನ್ನ ಚರಣ ಕಮಲವ || ೪ ||

ತ್ರಿವಿಡಿತಾಳ

ಗಣನೆಯಿಲ್ಲದ ಅಪಾರ ರೂಪಂಗಳಲ್ಲಿ
ಒಂದು ರೂಪದಿ ಚತುರ್ಮುಖನಿಗೆ
ಸರ್ವಾಂಗ ಸಾಯುಜ್ಯವಿತ್ತ
ಮಂಗಳಾಂಗನು ಸಾಯುಜ್ಯವಿತ್ತ
ಪುರಂದರವಿಟ್ಠಲ ಭಕುತರೊಡಿಯ ನೀನು
ಭಕುತರಧಿಪ ನೀನು ಸಾಯುಜ್ಯವಿತ್ತ || ೫ ||

ಅಟ್ಟತಾಳ

ಶ್ವೇತದ್ವೇಪವು ಸುತ್ತಿದ ಉದಕವು
ಬಯಲಾದ ಮೇಲೆ ಅಂಧಂತಮಸು
ಏಳುಕೋಟಿ ಪರಿಮಿತವಾದ ನರಕವು
ಶುಕ್ಲ ಶೋಣಿತ ಮೂತ್ರ ಅಶುದ್ಧದಿಂದ
ಮಿಶ್ರವಾದ ತಮಸಿನೊಳು ಪೂರ್ಣಸಾಧನವನು
ಮಾಡಿದ ಜನರಿಗೆ ಹರಿದ್ವೇಷ ಭಕ್ತರಲ್ಲಿ
ಅನಾದಿಕಾಲದಿ ಮಾಡಿ ದುಃಖಭಾಜನರಾದ
ಪಾಪಿಜೀವರನು ವಾಯುಭೃತ್ಯರಿಂದ ಪ್ರೇರಿಸ –
ಲಾಗ ಲಿಂಗಶರೀರವ ಹೋಳು ಮಾಡಿ
ಕೆಡಹಿತು ಅಂಧಂತಮಸಿನೊಳು
ಕ್ರಿಮಿ ಪಕ್ಷಿಗಳಿಂದ ಬಾಧೆಯಿಲ್ಲದೆ ಮೇಲೆ
ಪರ್ವತಂಗಳ ತಂದು ಬಿಸುಟುವರು
ಭೀಮನ ದೂತರಿಂದ ನೊಂದು
ದುಃಖಭಾಜನರಾದ ಪಾಪಿ ಜೀವರಿಗೆ
ಎಂತು ಮಾಡಿದದರಂಥ ಫಲವೀವ
ಕಂತುಜನಕ ಪುರಂದರವಿಟ್ಠಲರೇಯ || ೬ ||

ಆದಿತಾಳ

ಇಂತು ಪ್ರಕೃತಿ ಸಮ್ಮಂಧವಾದಡೆ
ಬೊಮ್ಮ ರುದ್ರ ಯಿಂದ್ರ ದಿಕ್ಪಾಲಕರು ಮತ್ತೆ
ದೇವತೆಗಳು ಮನು ಮುನಿಗಳು ಶ –
ರೀರದಲಿ ವಾಸವಾಗಿ ಪುರಂದರವಿಟ್ಠಲ
ಸೃಷ್ಟಿ ಸ್ಥಿತಿ ಲಯಕೆ ಕಾರಣ || ೭ ||

ಜತೆ

ಕರ್ಮಜಾಂಡಗಳ ಮರ್ಮಗಳ ತಿಳಿದು ಫಲವೀವ
ನಿರ್ಮಲ ಚರಿತ್ರ ಪುರಂದರವಿಟ್ಠಲ ||


saMkShipta sRuShTiprakaraNa suLAdi
rAga: Bairavi

dhruvatALa

praLayOdakadalli vaTapatraSayananAgidda
kAladalli SrIdEviyaru
SrI BU durgA rUpadi niMdu
dakShaNAyaj~ja nAmadiMda vEdagaLiMda
koMDADuva muKyABimAniyAgi
varNAtmakadiMda nitya nigamArthagaLiMda
tutisuvaLu A A A triprakAra
mitiyeMdu bommana nUraroLeMTuBAga –
doLoMdu BAgavI lakumidEvige
tA prErisalAgi tutisuvaMdadi
prErakanAgi prArthane kaikoMDu
tama tamma sAdhanagaLu mADikoMballi
nirUpisidanu puraMdaraviTThalla || 1 ||

maTTatALa

nUru varuShavu yiMdAyitenalu
udayakAladi caturdaSa BuvanAtmakavAda
kamaladalli caturmuKa bommana paDade nInu
omme baMdu ninna praLayOdakavanu
theregaLa nODi yEnu kANade pokkunALadalli
mattomme baralu ninna GOravAda
ninna rUpavu kaMDu aMji matte
ninna manavEneMdu baMdada kaMDu udarapravESavAda
oMdu Bayavu eraDu aj~jAnavu
ninna viShayadali uMTAdaDAgali
kaMtujanaka nIne tapatapavenalAga
tapavanu mADida puraMdaraviTThalanna
olisi sRuShTiya mADida sarasija saMBavanu || 2 ||

rUpakatALa

sUkShmarUpavAda yippattunAlku tatvagaLa
horage paMcaBUtagaLigaBimAniyAda
gaNESa modalAda paMcaBUtagaLa sRujisidanAga
oMdoMdu varNada aBimAnigaLiMda
mahatatvakISa ahaMkAradhISaneMdu
bommAMDava nirmANava mADi
pUrvadaMte A dEvategaLa sRujisi
bommAMDavAdhAravAgi tanna
dEhava beLasida caturmuKanAga
mUlarUpadiMda puraMdaraviTThala vi –
rATadalli vAsavAgi niMda jagadAdhAra || 3 ||

JaMpitALa

haLeya bommaga aMdu avyAkRutadalli virajeyali
muLugisi udaradalli pravESa bommAdi –
gaLu yiralu kelavu lOkaMgaLu sRuShTiyAda
baLika SvEtadvIpadali yidda mUrutiya
daruSanadi mukutarenisikoMDu aididaru
puraMdaraviTThalanna caraNa kamalava || 4 ||

triviDitALa

gaNaneyillada apAra rUpaMgaLalli
oMdu rUpadi caturmuKanige
sarvAMga sAyujyavitta
maMgaLAMganu sAyujyavitta
puraMdaraviTThala BakutaroDiya nInu
Bakutaradhipa nInu sAyujyavitta || 5 ||

aTTatALa

SvEtadvEpavu suttida udakavu
bayalAda mEle aMdhaMtamasu
ELukOTi parimitavAda narakavu
Sukla SONita mUtra aSuddhadiMda
miSravAda tamasinoLu pUrNasAdhanavanu
mADida janarige haridvESha Baktaralli
anAdikAladi mADi duHKaBAjanarAda
pApijIvaranu vAyuBRutyariMda prErisa –
lAga liMgaSarIrava hOLu mADi
keDahitu aMdhaMtamasinoLu
krimi pakShigaLiMda bAdheyillade mEle
parvataMgaLa taMdu bisuTuvaru
BImana dUtariMda noMdu
duHKaBAjanarAda pApi jIvarige
eMtu mADidadaraMtha PalavIva
kaMtujanaka puraMdaraviTThalarEya || 6 ||

AditALa

iMtu prakRuti sammaMdhavAdaDe
bomma rudra yiMdra dikpAlakaru matte
dEvategaLu manu munigaLu Sa –
rIradali vAsavAgi puraMdaraviTThala
sRuShTi sthiti layake kAraNa || 7 ||

jate

karmajAMDagaLa marmagaLa tiLidu PalavIva
nirmala caritra puraMdaraviTThala ||

Leave a Reply

Your email address will not be published. Required fields are marked *

You might also like

error: Content is protected !!