Composer: Shri Vijaya dasaru
ಗುರು ಪುರಂದರ ದಾಸರೇ ನಿಮ್ಮ
ಚರಣ ಕಮಲವ ನಂಬಿದೆ ||ಪ||
ಗರುವ ರಹಿತನು ಮಾಡಿ ಎನ್ನನು
ಪೊರೆವ ಭಾರವು ನಿಮ್ಮದೆ ||ಅ.ಪ||
ಒಂದು ಅರಿಯದ ಮಂದಮತಿ ನಾ
ಇಂದು ನಿಮ್ಮನು ವಂದಿಪೆ
ಇಂದಿರೇಶನ ತಂದು ತೋರಿಸಿ
ತಂದೆ ಮಾಡೆಲೊ ಸತ್ಕೃಪೆ (೧)
ಪುರಂದರಾಲಯ ಘಟ್ಟದೊಳು
ನೀ ನಿರುತ ಧನವ ಘಳಿಸಲು
ಪರಮ ಪುರುಷನು ವಿಪ್ರನಂದದಿ
ಕರವ ನೀಡಿ ಯಾಚಿಸೆ (೨)
ಪರಮ ನಿರ್ಗುಣ ಮನವರಿತು
ಸರುವ ಸೂರೆಯ ಘಳಿಸಿದ
ಅರಿತು ಮನದೊಳು ಝರಿದು ಭವಗಳ
ತರುಣಿ ಸಹಿತಾ ಹೊರಟನೆ (೩)
ಮಾರಜನಕನ ಸನ್ನಿಧಾನದಿ
ಸಾರಗಾನವ ಮಾಡುವ
ನಾರದರೆ ಈ ರೂಪದಿಂದಲಿ
ಚಾರು ದರುಶನ ತೋರಿದ (೪)
ಅಜಭವಾದಿಗಳರಸನಾದ
ವಿಜಯ ವಿಠಲನ ಧ್ಯಾನಿಪ
ನಿಜ ಸುಜ್ಞಾನವ ಕೊಡಿಸಬೇಕೆಂದು
ಭಜಿಪೆನೋ ಕೇಳ್ ಗುರುವರಾ (೫)
guru puraMdara dAsarE nimma
caraNa kamalava naMbide ||pa||
garuva rahitanu mADi ennanu
poreva BAravu nimmade ||a.pa||
oMdu ariyada maMdamati nA
iMdu nimmanu vaMdipe
iMdirESana taMdu tOrisi
taMde mADelo satkRupe (1)
puraMdarAlaya ghaTTadoLu
nI niruta dhanava ghaLisalu
parama puruShanu vipranaMdadi
karava nIDi yAcise (2)
parama nirguNa manavaritu
saruva sUreya ghaLisida
aritu manadoLu jharidu BavagaLa
taruNi sahitA horaTane (3)
mArajanakana sannidhAnadi
sAragAnava mADuva
nAradare I rUpadiMdali
chAru daruSana tOrida (4)
ajaBavAdigaLarasanAda
vijaya viThalana dhyAnipa
nija suj~jAnava koDisabEkeMdu
BajipenO kEL guruvarA (5)
Leave a Reply