ಉಡುಪಿ ಶ್ರೀಕೃಷ್ಣನ ಸ್ತೋತ್ರ ಸುಳಾದಿ ,
ಶ್ರೀ ಗೋಪಾಲದಾಸರ ರಚನೆ , ರಾಗ: ಪೂರ್ವಿಕಲ್ಯಾಣಿ
ಧ್ರುವತಾಳ
ಆವ ಲೀಲೆಯೊ ನಿನ್ನ ನಾವಾವ ವರ್ನಿಪ
ದೇವ ನಿನ್ನ ನಿಜ ಸ್ವಭಾವ ಗುಣ
ಆವ ಜನುಮ ರಹಿತ ದಾವ ನೀನು ಇನ್ನು
ದೇವಕ್ಕಿ ಜಠರದಿ ಜನನವೇನೊ
ಆವ ಜಗವೆಲ್ಲ ಬಂಧಕವ ಮಾಡಿಪ್ಪ ಶಕ್ತ
ಗೋವತ್ಸ ಹಗ್ಗದಿಂದ ನೀ ವೇಗ ಸಿಕ್ಕೋದೇನೊ
ಆವ ನಿತ್ಯತೃಪ್ತನಾದವ ನೀ ಇನ್ನು ಪೋಗಿ
ಆವಾವ ಮನಿ ಬೆಣ್ಣಿ ಕದ್ದು ಮೆದ್ದದೇನು
ದೇವ ಸ್ವರಮಣನಾದ ಇನ್ನು ಪೋಗಿ
ಆವ ಗೋಪಿಕರೊಡನಾಟವು ಕ್ರೀಡೆಗಳೇನೊ
ಶ್ರೀವೈಕುಂಠ ವಾಸವಾಗಿವ ಅಪ್ರಾಕೃತನೆ
ಈ ಉಡುಪಿನಲ್ಲಿ ನೀ ಇಪ್ಪ ಬಗೆಯು ಏನೋ
ಗೋವಳರೊಡಿಯ ಗೋಪಾಲವಿಟ್ಠಲರೇಯಾ
ನಿವಾಸ ಮಧ್ವಮುನಿ ಮಂದಿರ ಸರ್ವೇಶ || ೧ ||
ಮಟ್ಟತಾಳ
ಮುಕ್ತ ಬೊಮ್ಮಾದಿಗಳು ತುತಿಸೆ ಕಾಣದೆ ಸರ್ವ –
ಶಕ್ತರಲ್ಲವೆಂದು ಸುಮ್ಮನಿರುವದೇನು
ಸೊಕ್ಕಿನಿಂದಲಿ ಗೋಮಕ್ಕಳ ಕೈಯಿಂದ
ಭಕ್ತವತ್ಸಲನೆ ಬಯ್ಸಿ ಕೊಂಡದದೇನು
ಮುಕ್ತಿಪ್ರದಾತನೆ ನಿನಗೆ ಯಮುನಾದೇವಿ
ಘಕ್ಕನೆ ಮಾರ್ಗವನಿತ್ತಳೆಂಬೋದೇನೊ
ಮುಕ್ತ ನಿಯಾಮಕನೆ ನೀ ಕೌರವ ಸಭೆಗೆ
ಚಕ್ಕನೆ ಸಂಧಾನಕ್ಕಿನ್ನು ಪೋದದು ಏನೋ
ಭಕ್ತವತ್ಸಲ ಕೃಷ್ಣಾ ಗೋಪಾಲವಿಟ್ಠಲ
ಮಕ್ಕಳಾಟಿಕೆ ನಿನ್ನ ಮಹಿಮೆಗೆ ನಮೋ ನಮೊ || ೨ ||
ತ್ರಿವಿಡಿತಾಳ
ಅಂಗನೆ ದ್ರೌಪದಿಗಕ್ಷಯ ವಸನವು
ಹಿಂಗದೆ ಇತ್ತಂಥ ಹಿತ ದೈವವೆ
ಶೃಂಗಾರಾದಿ ಪುರದ ರಜಕನ್ನ ಬಿಡದಲೆ
ಭಂಗ ಬಡಿಸಿ ವಸ್ತ್ರನುಟ್ಟುಕೊಂಡಿದ್ದು ಏನೊ
ಹಿಂಗದೆ ಅಜಭವರಿನ್ನು ಅರ್ಚಿಸಲಾಗಿ
ಕುಂಗಿದ್ದ ಕುಬುಜಿ ಅರ್ಚನಿಗೆ ಮೆಚ್ಚಿದ್ದದೇನೋ
ಅಂಗನೆ ಲಕುಮಿ ಅಲಂಕರಿಸುತಲಿರೆ
ರಂಗ ಪೂಗಾರನ ಮಾಲೆ ಕೊಂಡದು ಏನೊ
ತುಂಗಮಹಿಮ ಗೋಪಾಲವಿಟ್ಠಲ ಕೃಷ್ಣ
ಡಿಂಗರಿಗರ ಪ್ರೀಯ ದೀನಜನರ ಬಂಧು || ೩ ||
ಅಟ್ಟತಾಳ
ದುಃಖ ಸಾಗರದ ಸಿಕ್ಕು ಬಿಡಿಪನೆ ದೇ –
ವಕ್ಕೀಯ ಶರಿಯ ಬಿಡಿಸಿದನೆಂಬುವದೇನೋ
ಅಕ್ಕರದಲಿ ವದನ ತೆರೆದು ಇನ್ನು
ಘಕ್ಕನೆ ಹದಿನಾಲ್ಕು ಲೋಕ ತೋರಿದನೆ ಗೋ –
ಮಕ್ಕಳ ಕೂಡಾಡಿ ಅಡಿಗಿ ಕೊಂಬುವದೇನೊ
ಮುಖ್ಯ ಮುಕುತರು ನಿನ್ನನ್ನು ಕೊಂಡಾಡುತ್ತಲಿರೆ
ಉಖ್ಖಾ ಅಮ್ಮಾ ಎಂದು ಅಕ್ಕೆ ಮಾಡಿದದೇನೊ
ಭಕ್ತವತ್ಸಲ ದೇವ ಗೋಪಾಲವಿಟ್ಠಲ ವಿ –
ರಕ್ತರ ಮನದಲ್ಲಿ ಬಿಡದೆ ಇಪ್ಪುವ ಸ್ವಾಮಿ || ೪ ||
ಆದಿತಾಳ
ಜಾರ ಚೋರ ದೋಷಗಳು ಆರು ಆರು ಮಾಡಿ ನಿನ್ನ
ಸಾರಿ ತುತಿಸಿ ಸಾರೆ ಅವರಾಪಾರ ಓಡವು
ಜಾರ ಚೋರ ಗುಣಗಳೆಲ್ಲ ನಿನಗೆ ಒಪ್ಪಿತಯ್ಯಾ ಸರ್ವ
ಕಾರಣಕ್ಕೆ ನೀನೆ ಮುಖ್ಯ ಕಾರಣಾದ ಕಾರಣವು
ಮಾರುತೀಶ ಚಲುವ ಗೋಪಾಲವಿಟ್ಠಲರೇಯಾ
ಆರು ಬಲ್ಲರಯ್ಯಾ ನಿನ್ನಪಾರ ಮಹಿಮೆ ಪೂರಣವು || ೫ ||
ಜತೆ
ಉಡುಪಿನ ವಾಸ ಶ್ರೀಕೃಷ್ಣ ಗೋಪಾಲವಿಟ್ಠಲ
ಬಿಡದೆ ನಂಬಿಸೊ ನಿನ್ನ ಚರಣ ಕಮಲವ ||
uDupi SrIkRuShNana stOtra suLAdi ,
SrI gOpAladAsara racane , rAga: pUrvikalyANi
dhruvatALa
Ava lIleyo ninna nAvAva varnipa
dEva ninna nija svaBAva guNa
Ava januma rahita dAva nInu innu
dEvakki jaTharadi jananavEno
Ava jagavella baMdhakava mADippa Sakta
gOvatsa haggadiMda nI vEga sikkOdEno
Ava nityatRuptanAdava nI innu pOgi
AvAva mani beNNi kaddu meddadEnu
dEva svaramaNanAda innu pOgi
Ava gOpikaroDanATavu krIDegaLEno
SrIvaikuMTha vAsavAgiva aprAkRutane
I uDupinalli nI ippa bageyu EnO
gOvaLaroDiya gOpAlaviTThalarEyA
nivAsa madhvamuni maMdira sarvESa || 1 ||
maTTatALa
mukta bommAdigaLu tutise kANade sarva –
SaktarallaveMdu summaniruvadEnu
sokkiniMdali gOmakkaLa kaiyiMda
Baktavatsalane baysi koMDadadEnu
muktipradAtane ninage yamunAdEvi
Gakkane mArgavanittaLeMbOdEno
mukta niyAmakane nI kaurava saBege
cakkane saMdhAnakkinnu pOdadu EnO
Baktavatsala kRuShNA gOpAlaviTThala
makkaLATike ninna mahimege namO namo || 2 ||
triviDitALa
aMgane draupadigakShaya vasanavu
hiMgade ittaMtha hita daivave
SRuMgArAdi purada rajakanna biDadale
BaMga baDisi vastranuTTukoMDiddu Eno
hiMgade ajaBavarinnu arcisalAgi
kuMgidda kubuji arcanige mecciddadEnO
aMgane lakumi alaMkarisutalire
raMga pUgArana mAle koMDadu Eno
tuMgamahima gOpAlaviTThala kRuShNa
DiMgarigara prIya dInajanara baMdhu || 3 ||
aTTatALa
duHKa sAgarada sikku biDipane dE –
vakkIya Sariya biDisidaneMbuvadEnO
akkaradali vadana teredu innu
Gakkane hadinAlku lOka tOridane gO –
makkaLa kUDADi aDigi koMbuvadEno
muKya mukutaru ninnannu koMDADuttalire
uKKA ammA eMdu akke mADidadEno
Baktavatsala dEva gOpAlaviTThala vi –
raktara manadalli biDade ippuva svAmi || 4 ||
AditALa
jAra cOra dOShagaLu Aru Aru mADi ninna
sAri tutisi sAre avarApAra ODavu
jAra cOra guNagaLella ninage oppitayyA sarva
kAraNakke nIne muKya kAraNAda kAraNavu
mArutISa caluva gOpAlaviTThalarEyA
Aru ballarayyA ninnapAra mahime pUraNavu || 5 ||
jate
uDupina vAsa SrIkRuShNa gOpAlaviTThala
biDade naMbiso ninna caraNa kamalava ||
Leave a Reply