Composer: Shri Vijaya dasaru
ವೇಣಿ ಮಾಧವನ ತೋರಿಸೆ ಜಾಣೆ ತ್ರಿವೇಣಿ
ಕಾಣದೆ ನಿಲ್ಲಲಾರೆನೆ ಜಾಣೆ ತ್ರಿವೇಣಿ ||ಪ||
ಕಾಣುತ ಭಕುತರ ಕರುಣದಿ ಸಲಹುವ
ಜಾಯೆ ತ್ರಿವೇಣಿ ಕಲ್ಯಾಣಿ ಸುಸನ್ನುತೆ ||ಅ.ಪ||
ಬಂದೇನೆ ಬಹು ದೂರದಿ ಭವಸಾಗರ ತರಣೀತಿ
ನಿಂದೆನೆ ನಿನ್ನ ತೀರದಿ
ಒಂದು ಘಳಿಗೆ ನೀನು ಹರಿಯ ಬಿಟ್ಟಿರಲಾರಿ
ಮಂದಗಮನೆ ಎನ್ನ ಮುಂದಕ್ಕೆ ಕರೆಯೆ ||೧||
ಶರಣಾಗತರನು ಪೊರೆವುದು ಇದು ನಿನ್ನ ಬಿರುದು
ಕರುಣದಿಂದೆನ್ನ ಕರೇವುದು
ಸ್ಮರಣೆ ಮಾತ್ರದಿ ಭವ ತಾಪವ ಹರಿಸುವ
ಸ್ಮರನಪಿತನ ಮುರಹರನ ಕರುಣದಿ ||೨||
ಸುಜನರಿಗೆಲ್ಲ ದಾತಳೆ ಸುಶೀಲೆ ಕೇಳೆ
ಕುಜನರ ಸಂಗದೂರಳೆ
ನಿಜ ಪದವಿಯನಿತ್ತು ಸಲಹುವ ನಮ್ಮ
ವಿಜಯವಿಠ್ಠಲನ ನಿಜಪದ ತೋರಿಸೆ ||೩||
vENi mAdhavana tOrise jANe trivENi
kANade nillalArene jANe trivENi ||pa||
kANuta Bakutara karuNadi salahuva
jAye trivENi kalyANi susannute ||a.pa||
baMdEne bahu dUradi BavasAgara taraNeeti
niMdene ninna tIradi
oMdu GaLige nInu hariya biTTiralAri
maMdagamane enna muMdakke kareye ||1||
SaraNAgataranu porevudu idu ninna birudu
karuNadiMdenna karEvudu
smaraNe mAtradi Bava tApava harisuva
smaranapitana muraharana karuNadi ||2||
sujanarigella dAtaLe suSIle kELe
kujanara saMgadUraLe
nija padaviyanittu salahuva namma
vijayaviThThalana nijapada tOrise ||3||
Leave a Reply