Nodu Nodu Teekarayara

Composer : Shri Vyasatatvajnaru

ನೋಡು ನೋಡು ಟೀಕಾರಾಯರ, ಜಯರಾಯರ
ಮಾಡು ವಂದನೆಗಳ ಬೇಡು ವರಗಳನ್ನು ||ಪ||

ದುರ್ಮಾಯಿ ಮತಗಳ ಮರ್ಮ ಭೇದಿಸಿ ಸುಧಾ
ನಿರ್ಮಾಣ ಮಾಡಿದ ಸನ್ಮಾನ್ಯರ ||೧||

ಲಲಿತೋಧ್ರ್ವ ಪುಂಡ್ರ ಶ್ರೀ ತುಲಸೀ ಭೂಷಿತ ಕರ್ಣ
ವಿಲಸಿತ ಕಾಶಾಯಧಾರ್ಯರ ||೨||

ಯಾವಾಗಲೂ ವಾಸುದೇವವಿಠಲನ್ನ
ಸೇವಿಸಿ ಭಜಿಸುವರ ಗುರುವರ ||೩||


nODu nODu TIkArAyara, jayarAyara
mADu vaMdanegaLa bEDu varagaLannu ||pa||

durmAyi matagaLa marma BEdisi sudhA
nirmANa mADida sanmAnyara ||1||

lalitOdhrva puMDra SrI tulasI BUShita karNa
vilasita kAshAyadhAryara ||2||

yAvAgalU vAsudEvaviThalanna
sEvisi Bajisuvara guruvara ||3||

Leave a Reply

Your email address will not be published. Required fields are marked *

You might also like

error: Content is protected !!