-
Yaake ninna manake
Composer : Shri Gurujagannatha dasaru ಯಾಕೆ ನಿನ್ನ ಮನಕೆ ಬಾರೆನೋ ಹೇ ವೇಂಕಟೇಶ [ಪ]ಯಾಕೆ ನಿನ್ನ ಮನಕೆ ಬಾರೆ ಸಾಕು ನಿನ್ನ ಧೊರಿಯತನಾಕಾಕು ಬುದ್ಧಿ ಎನಗಿಲ್ಲೋ ಹೇ ವೆಂಕಟೇಶಾ [ಅ.ಪ] ಪದದಿ ಭೃಗುಮುನಿ ನಿನ್ನ ಹೃದಯಕೊದ್ದ ತೆರದಿ ನಾನುಬೆದರಿ ನಿನ್ನ ನೊದೆಯಲಿಲ್ಲೊ ಹೇ ವೆಂಕಟೇಶಾ (೧) ವನದಿ ಬಂದಾಗ ಬೊರೆಬನದಲ್ಲಿಯ ಬರಿಯಂಜಲುತಿನಿಸಿದ ತರ ನಾ ತಿನಿಸಲಿಲ್ಲವೋ ಹೇ ವೆಂಕಟೇಶಾ (೨) ತೊಂಡಪಾರ್ಥ ರಣದಿ ತನ್ನ ಬಂಡಿ ಬೋವನ ಮಾಡಿದಂತೆಭಂಡಿ ಹೊಡಿ ಎಂದು ನಡೆಸಲಿಲ್ಲವೋ ಹೇ ವೆಂಕಟೇಶಾ…
