-
Paliso dasaraya
Composer : Shri Uragadri vittala Dasaru on Shri Tande muddumohana dasaru ಪಾಲಿಸೋ ದಾಸರಾಯ ಗುರುವೆ ನೀ ಪಾಲಿಸೋ ಗುರುವೆ [ಪ] ಪಾಲಿಸು ನಾಗರಾಯಾಖ್ಯ ದಾಸಶೀಲವರ್ಯನೆನೀ ಮುಖ್ಯ |ಅಹಾ|ಶ್ರೀಲೋಲನ ಗುಣ ಲೀಲಾಜಾಲದಿ ಆಬಾಲವೃದ್ಧರಿ-ಗರುಹಿ ಮೆರೆದ ಗುರು [ಅ.ಪ] ಬಂದೆ ದಯಾಂಬುಧೆ ಎನ್ನ ಮನದ ಕುಂದುಕೊರತೆಗಳನ್ನ ಇನ್ನು, ಬಂದ ಸಂಶಯಗಳನ್ನಹರಿಸಿ ಇಂದು ತೋರಿದೆ ನಂದವನ್ನ |ಅಹಾ|ತಂದೆ ಮುದ್ದು ಮೋಹನ್ನ ವಿಠ್ಠಲನ್ನ,ಹೃದಯಾರವಿಂದದಿ ಮುದದಿ ನೋಡುವ ಗುರು [೧] ಮಾರ್ಗ ಮಾರ್ಗವನೆ ಚರಿಸುತ್ತಾ ದುರ್ಮಾರ್ಗರ ಎದೆಗೆಡಿಸುತ್ತಾ, ಸನ್ಮಾರ್ಗಕ್ಕೆ ನೀನವರ…
