Paliso dasaraya

Composer : Shri Uragadri vittala Dasaru on Shri Tande muddumohana dasaru

By Smt.Shubhalakshmi Rao

ಪಾಲಿಸೋ ದಾಸರಾಯ ಗುರುವೆ ನೀ ಪಾಲಿಸೋ ಗುರುವೆ [ಪ]

ಪಾಲಿಸು ನಾಗರಾಯಾಖ್ಯ ದಾಸಶೀಲವರ್ಯನೆ
ನೀ ಮುಖ್ಯ |ಅಹಾ|
ಶ್ರೀಲೋಲನ ಗುಣ ಲೀಲಾಜಾಲದಿ ಆಬಾಲ
ವೃದ್ಧರಿ-ಗರುಹಿ ಮೆರೆದ ಗುರು [ಅ.ಪ]

ಬಂದೆ ದಯಾಂಬುಧೆ ಎನ್ನ ಮನದ ಕುಂದು
ಕೊರತೆಗಳನ್ನ ಇನ್ನು, ಬಂದ ಸಂಶಯಗಳನ್ನ
ಹರಿಸಿ ಇಂದು ತೋರಿದೆ ನಂದವನ್ನ |ಅಹಾ|
ತಂದೆ ಮುದ್ದು ಮೋಹನ್ನ ವಿಠ್ಠಲನ್ನ,
ಹೃದಯಾರವಿಂದದಿ ಮುದದಿ ನೋಡುವ ಗುರು [೧]

ಮಾರ್ಗ ಮಾರ್ಗವನೆ ಚರಿಸುತ್ತಾ ದುರ್ಮಾರ್ಗರ ಎದೆ
ಗೆಡಿಸುತ್ತಾ, ಸನ್ಮಾರ್ಗಕ್ಕೆ ನೀನವರ ತರುತ್ತಾ ಸಾರ್ದೆ,
ದುರ್ಗದೊಳ್ ನೀ ಚರಿಸುತ್ತಾ |ಅಹಾ|
ದುರ್ಗಮರಾದ ದುರಾಗ್ರಹ ನಿಗ್ರಹ
ಭೋರ್ಗರೆದು ಸುಖ ಸಂಸರ್ಗವ ತೋರ್ದ ಗುರು [೨]

ಪರಮ ಕರುಣದಿ ಇಂದೆನ್ನಾ ಪೊರೆದೆ ಶ್ರೀ
ವೆಂಕಟೇಶಾಭಿನ್ನಾ ಉರಗಾದ್ರಿವಾಸ
ವಿಠ್ಠಲಾಖ್ಯನ್ನಾ,
ತೋರಿಕೊಟ್ಟೆ ನೀನಂಕಿತವನ್ನಾ |ಅಹಾ|
ಗುರು ನಿನ್ನ ಕರುಣಕ್ಕೆಣೆಯುಂಟೆ ಧರೆಯೊಳು
ಉರಗಾದ್ರಿವಾಸ ವಿಠಲನ ನಿಜದಾಸ [೩]


pAlisO dAsarAya guruve nI pAlisO guruve [pa]

pAlisu nAgarAyAKya dAsaSIlavaryane
nI muKya |ahA|
SrIlOlana guNa lIlAjAladi AbAla
vRuddhari-garuhi mereda guru [a.pa]

baMde dayAMbudhe enna manada kuMdu
korategaLanna innu, baMda saMSayagaLanna
harisi iMdu tOride naMdavanna |ahA|
taMde muddu mOhanna viThThalanna,
hRudayAraviMdadi mudadi nODuva guru [1]

mArga mArgavane carisuttA durmArgara ede
geDisuttA, sanmArgakke nInavara taruttA sArde,
durgadoL nI carisuttA |ahA|
durgamarAda durAgraha nigraha
BOrgaredu suKa saMsargava tOrda guru [2]

parama karuNadi iMdennA porede SrI
veMkaTESABinnA uragAdrivAsa
viThThalAKyannA,
tOrikoTTe nInaMkitavannA |ahA|
guru ninna karuNakkeNeyuMTe dhareyoLu
uragAdrivAsa viThalana nijadAsa [3]

Leave a Reply

You might also like

error: Content is protected !!