-
Muddu mukhadata
Composer : Shri Vadirajaru ಮುದ್ದು ಮುಖದಾತ ನಮ್ಮ ಮುಖ್ಯ ಪ್ರಾಣ ನಾಥನೊಸದ್ಗುಣ ವಂದಿತ ವಾಯು ಜಾತನೊ ರಾಮ ದೂತನೊ [ಪ.] ಜಾನಕೀಶನ ವೈರಿ ಶೂಲನೊ ಶೂರನೊ ಬಹು ಧೀರನೊಮಾನಿನಿ ಸೀತೆಯ ಕಂಡು ಬಂದನೊ ಮುಂದೆ ನಿಂದನೊ (೧) ಸಾಗರವನ್ನು ದಾಟಿದ ಧೀರನೊ ಕಂಠೀರವನೊರಾಗ ತಾಳ ಮೇಳದಲ್ಲಿ ಜಾಣನೊ ಪ್ರವೀಣನೊ (೨) ವಾನರ ರೂಪಿಲಿ ಮುದ್ರೆಯಿತ್ತನೊ ವನ ಕಿತ್ತನೊಆ ನಗರವನೆಲ್ಲ ಸುಟ್ಟನೊ ಬಹು ದಿಟ್ಟನೊ (೩) ನಂಬಿದ ಭಕ್ತರ ಕಾಯುವ ದಾತನೊ ಪ್ರಖ್ಯಾತನೊಅಂಬುಜಾಸನ ಪದಕೆ ಬಂದು ನಿಂತನೊ…
