-
Karunisayya kanjajanayya
Composer : Shri Mohana dasaru ಕರುಣಿಸಯ್ಯಾ ಕಂಜಜನಯ್ಯಾ |ಕರ್ಣರಹಿತ ಶಯ್ಯಾ, ಕನಕಾದ್ರಿರಾಯಾ [ಪ] ಕರಿವರದನೆ ನಿನ್ನ ಚರಣ ನಂಬಿದೆಎನ್ನ ಪರಿಪಾಲಿಸುವದು ಪರಮ ಕೃಪಾಳೊ [ಅ.ಪ.] ಕೋಟಲೆ ಸಂಸಾರವೆಂಬೊ | ನೀಟು ಶರಧಿಯನ್ನುದಾಟಲಾರೆನೊ ನಾನೂ | ಇದೇನೊ |ನಾಟಕಾಧಾರ ನಿನ್ನ | ನಂಬಿದಾ ಮೇಲೆ ಎನ್ನಬೂಟಕನೆನಸುವರೇ | ಮುರಾರೇ ||ಹಾಟಕಾಂಬರ ಧರ ಹರಿಯೇ ಕೇಳ್ವುದಿನ್ನು |ಕೋಟಿ ವ್ಯಾಳೆಗೆ ಭಕ್ತ ಕೋಟಿಯೊಳಗಿಟ್ಟು ಎನ್ನ |ನೀಟು ಮಾರ್ಗವ ತೋರಿ ಪಾಟು ಪಡಿಪಯಮ ಕಾಟ ಕಳೆದು ದಿವ್ಯ ನೋಟದಿ ನೋಡು [೧]…
