-
Paposu hoduvalla
Composer : Shri Mohana dasaru ಪಾಪೋಸು ಹೋದುವಲ್ಲಾ [ಪ]ಅಪಾರ ಜನ್ಮದಿಂದ ಆರ್ಜನ ಮಾಡಿದ [ಅ.ಪ] ಉರುಗಾದ್ರಿಯಲ್ಲಿ ಸ್ವಾಮಿ ಪುಷ್ಕರಣಿ ಮೊದಲಾದಪರಿಪರಿ ತೀರ್ಥ ಸ್ನಾನಗಳ ಮಾಡಿಹರಿದಾಸರ ಕೂಡ ಶ್ರೀನಿವಾಸನ ಮೂರ್ತಿದರುಶನದಲಿ ಮೈಮರೆತು ಇದ್ದೆನು ಎನ್ನ [೧] ಪರಮ ಭಾಗವತರು ಹರಿಕಥೆ ಹೇಳಲುಪರಮ ಹರುಷದಿಂದ ಕೇಳುತಿದ್ದೆಪರಮ ಪಾಪಿಷ್ಠರ ಪಾಲಾಗಿ ಹೋದಾವುಪರಮಾತ್ಮನ ಚಿತ್ತಕೆ ಬಂದಿತೀಗೆನ್ನ [೨] ಮಾಯಿ ಒಲಿದು ಎನಗೆ ಕೊಂಡು ಕೊಟ್ಟಿದ್ದಳುದಾಯಿಗಾರರು ನೋಡಿ ಸಹಿಸಲಿಲ್ಲಾಮಾಯಾರಮಣ ನಮ್ಮ ಮೋಹನ್ನ ವಿಠಲನ್ನಮಾಯದಿಂದಲಿ ಮಟ್ಟವಾಯಿತು ಎನ್ನ [೩] pApOsu hOduvallA [pa]apAra janmadiMda…
-
Mayavyatako madhavane
Composer : Shri Mohana dasaru ಮಾಯಾವ್ಯಾತಕೋ ಮಾಧವನೆ ಮಾಯಾವ್ಯಾತಕೋ [ಪ] ಮಾಯವ್ಯಾತಕೆ ಎನ್ನ | ಪ್ರೀಯ ಸಖನೆಲೋಕನಾಯಕ ನೀನಿರೆ ಕಾಯೆ ಕಂಡವರಾ [ಅ.ಪ] ಆರು ವರ್ಗಗಳೆಂಬ ಕ್ರೂರರಿಗೊಪ್ಪಿಸಿದೂರಾ ನೋಡುವದು ಉದಾರ ಉಚಿತವೆ [೧] ಇಂದಿರೆಯರಸ ಗೋವಿಂದ ನಿನ್ನಯ ಪಾದ-ದ್ವಂದ್ವನಂಬಿದವನ ಕುಂದೆಣಿಸುವರೇ [೨] ಪನ್ನಂಗ ಶಯನ ಸುಪರ್ಣ ಗಿರೀಶಾ, ಸು-ಪರ್ಣವಾಹನ್ನ ಮೋಹನ್ನ ವಿಠ್ಠಲನೇ [೩] mAyAvyAtakO mAdhavane mAyAvyAtakO [pa] mAyavyAtake enna | prIya saKanelOkanAyaka nInire kAye kaMDavarA [a.pa] Aru vargagaLeMba krUrarigoppisidUrA…
-
Parama harushavayitu
Composer : Shri Mohana dasaru ಪರಮ ಹರುಷವಾಯಿತು ವಿಜಯರಾಯಗುರುಗಳಂಘ್ರಿಯನೆ ಕಂಡು ||ಪ|| ಪರಿಪರಿ ಜನುಮದ ಥರಥರದಘಗಳುತಿರುಗಿ ನೋಡದಲೇವೆ ತೆರಳಿ ಪೋದವು ಯಿಂದು ||ಅ.ಪ|| ಕಾನನದೊಳು ತಿರುಗಿ ತನ್ನ ಮಾತಿ-ಯಾನು ಕಾಣದೆ ಚಿಂತಿಸಿ |ಧೇನಿಸಿ ಅರಸಲಾಕ್ಷಣ-ದೊಳಗವಳ ವತ್ಸತಾನು ಕೂಗಲುಕಾಮಧೇನು ಒದಗಿದಂತೆ ||೧|| ತರಣಿಯ ಕಿರಣದಿಂದ ತಪಿಸಿನೆರಬಾಯ ಬಿಡುವುತ ಬಪ್ಪರನ |ಕರವ ಪಿಡಿದು ಸುರತರುವಿನಡಿಯಲ್ಲಿ ಕು-ಳ್ಳಿರಿಸಿ ಕುಡಿಯೆದಿವ್ಯ ಸರಸಿಯನಿತ್ತಂತೆ ||೨|| ಧನವ ಪೋಗಾಡಿ ಕೊಂಡು ನರನುಬಲುಮನ ಕ್ಲೇಶದಿಂದಿರಲು |ಘನ ಮಹಿಮನೆ ನಮ್ಮ ಮೋಹನವಿಠಲ-ವನ ಕೈಯ್ಯೊಳಗಚಿಂತಾಮಣಿಯನಿತ್ತಂತೆ ||೩|| parama haruShavAyitu…
