Tag: Hanumana maneyavaru

  • Hanumana maneyavaru

    Composer: Shri Vidyaprasanna Teertharu ಹನುಮನ ಮನೆಯವರು ನಾವೆಲ್ಲರೂ |ಹನುಮನ ಮನೆಯವರು || ಪ || ಅನುಮಾನ ಪಡೆದೆಲೆ ಸ್ಥಳವಕೊಡಿರಿ ಎಮಗೆ ||ಅ .ಪ || ಊರ್ಧ್ವಪುಂಡ್ರವ ನೋಡಿ ಶ್ರದ್ಧೆ ಭಕುತಿ ನೋಡಿ |ಹೃದ್ಗಕ್ತವಾದೆಮ್ಮ ತತ್ತ್ವಗಳನೆ ನೋಡಿ ||ಇದ್ದುದನಿಲ್ಲೆಂಬ ಅಬದ್ಧ ನುಡಿವರಲ್ಲಾ |ಮಧ್ವಮುನಿಯು ನಮ್ಮ ತಿದ್ದಿರುವುದ ನೋಡಿ ||೧|| ಸತ್ಯ ಮಿಥ್ಯಗಳಿಗೆ ಅಂತರ ಬಲ್ಲೆವು |ಉತ್ತಮ ನೀಚರೆಂಬುವ ಭೇದ ಬಲ್ಲೆವು ||ಸುತ್ತಲು ಕಂಡು ಕಾಣದ ಇಹ ಎಲ್ಲಕ್ಕೂ |ಉತ್ತಮನೊಬ್ಬನೇ ಹರಿಯೆಂದು ಬಲ್ಲೆವು ||೨|| ಹಲವು ಲೋಕಗಳುಂಟೆಂಬುದ ಬಲ್ಲೆವು…

error: Content is protected !!