-
BannisalaLavalla Nimma
Composer : Shri Kakhandaki Krishna dasaru [on Yalagur Hanuma] ಬಣ್ಣಿಸಲಳವಲ್ಲ ನಿಮ್ಮ ಪ್ರಸನ್ನ ಮೂರುತಿ ಯಲಗೂರ ವಾಸ ಹನುಮಾ [ಪ] ಅಂಜನಿಯುದರದಲಿ ಜನಿಸೀ ತೇಜಪುಂಜ ರಾಮನ ಸೇವೆಯಲಿ ಮನ ನಿಲಿಸಿಕಂಜ ಛವನ ಪಟ್ಟ ಧರಿಸಿ ಬಲುರಂಜಿಸಿ ಮೆರೆದೆ ಭಕ್ತಾಗ್ರಣಿಯೆನಿಸಿ [೧] ಜ್ಞಾನ ಭಕುತಿ ವೈರಾಗ್ಯದಲಿ ಸರಿಗಾಣೆನೋ ಸುರನರ ಉರಗ ಲೋಕದಲಿಮಾನನಿಧಿಯೇ ವಿಕ್ರಮದಲಿ ಶರಣಾಗತ ರಕ್ಷಕ ನೇಮ ಬಿರುದಲಿ [೨] ಮೂರವ ತಾರದಿ ಬಂದು ದೀನೋದ್ಧಾರಣ ಮಾಡಿದೆ ಸದ್ಬೋಧ ಗರದುಕಾರುಣಿ ಗುರುವಾಗೆಂದೆಂದು ಸಹಕಾರದಿ ಮಹಿಪತಿ ಸುತಗೊಲಿದಿಂದು…
