Vedavyasaru

  • Satyavati soonu vedavyasa

    Composer : Shri Vijayadasaru ಸತ್ಯವತಿಸೂನು ವೇದವ್ಯಾಸ ಲಕುಮಿಶಾ |ನಿತ್ಯ ನಿನ್ನ ನೆನೆಸುವ ಭೃತ್ಯರೊಡನೆ ಪೊಂದಿಸು ದೇವ ||ಪ|| ಮೊದಲು ಸರ್ಪ ವಾಸುಕಿ ಇಲ್ಲಿ ಮದನಾರಿಯ ವಲಿಸಿ | ತನ್ನಬದುಕುವಗೋಸುಗ ಉಪಾಯದಲಿ ನಿಂದರೆ |ಅದರ ತರುವಾಯ ಸ್ಕಂದ ತ್ರಿದಶ ವೈರಿ ತಾರಕನ್ನ ಸದೆದು |ಇಂದ್ರಾದ್ಯರ ಕೂಡ ಮುದದಿಂದ ಸ್ಥಿರವಾಗಿ ಮೆರೆದ (೧) ಷಣ್ಮೊಗನು ಸತತ ತಾನು ಅನ್ನದಾನ ಮಾಡುತ ಹಾ |ವನ್ನನಾಗುದಕ್ಕೆ ಪ್ರಸನ್ನ ಮೋದದಲಿ |ನಿನ್ನ ಪೊಲಿಸಿಲ್ಲಿಗೆ ಬಾಹಾ | ದೆನ್ನ ಭಕುತಿಗೆ ಮೆಚ್ಚಿ |ಮುನ್ನಿನಾಗಮವನ್ನೆ ಹೇಳಿದ…

  • Vyasa Badari nivasa

    Composer : Shri Vijayadasaru ವ್ಯಾಸಾ ಬದರಿ ನಿವಾಸಾ | ಎನ್ನಯ |ಕ್ಲೇಶ ನಾಶನಗೈಸು ಮೌನೀಶಾ | ಸಾಸಿರ ಮಹಿಮನೆ |ದೋಷರಹಿತ ಸುರ ಭೂಸುರ ಪರಿಪಾಲ ಶಾಶ್ವತ ವೇದ ||ಪ|| ಸತ್ಯವತಿ ವರಸೂನು ಭವತಿಮಿರ ಭಾನು |ಭೃತ್ಯವರ್ಗದ ಸುರಧೇನು |ಸತ್ಯಮೂರುತಿಯೆ ನೀನು | ಸ್ತುತಿಪೆ ನಾನು ||ನಿತ್ಯ ನಿನ್ನಂಘ್ರಿಯರೇಣು | ಉತ್ತಮಾಂಗದಲಿಹೊತ್ತು ಹೊತ್ತಿಗೆ ಸೂಸುತ್ತಿರಲೆನಗದು |ಅತ್ಯಂತ ಸುಖಕರ | ಸುತ್ತವ ಸುಳಿಯೆಂದೆತ್ತಿ ಕಡೆಗೆಯಿಡು |ಎತ್ತ ನೋಡಲು ವ್ಯಾಪುತ ಸದಾಗಮ ||೧|| ಲೋಕ ವಿಲಕ್ಷಣ ಋಷಿ | ಗುಣವಾರಿ…

  • Vedavyasara Divya paada

    Composer : Shri Karpara narahari dasaru ವೇದವ್ಯಾಸರ ದಿವ್ಯಪಾದ ಪದುಮಯುಗಲಆರಾಧಿಸುತಿರು ಮನುಜಾ ||ಪ|| ವೇದಗಳಿಗೆ ಸಮ್ಮತವಾದ ಪುರಾಣಗಳಸಾದರದಲಿ ರಚಿಸಿ ಮೋದವ ಬೀರಿದ ||ಅ.ಪ|| ಧರಿಯೊಳು ಸುಜನರಿಗೆ ವರಧರ್ಮ ತಿಳಿಸೆಂದುಸುರಮುನಿ ಪ್ರಾರ್ಥನದಿಪರಮ ಮಂಗಲ ವೀರವರ ಭಾಗವತ ಗ್ರಂಥವಿರಚಿಸಿ ಶುಕಮುನಿಗೆ ಕರುಣದಿಂದರುಹಿದ ||೧|| ವಾಸಿಪ ಮುನಿಗುಣ ಭೂಷಿತ ಬದರಿಯೋಳ್ತೋಷ ತೀರ್ಥರ ಕರೆದುಭೂಸುರ ಜನರಿಗೆ ಮೋಕ್ಷದಾಯಕ ಸೂತ್ರಭಾಷ್ಯವ ರಚಿಸೆಂದಾದೇಶವ ನೀಡಿದ ||೨|| ಅರಿದರಾದ್ಯಯುಧ ಧರಿಸಿ ಷೋಡಶ ಸಂಖ್ಯಕರಗಳಿಂದಲಿ ಶೋಭಿತಶರಣು ಜನಕೆ ಸುರತರು ವೆನಿಸಿ ಧರೆಯೊಳುಮೆರೆವ ಕಾರ್ಪರ ನರಹರಿ ರೂಪಾತ್ಮಕನಾದ ||೩||…

error: Content is protected !!