Vayu Devaru

  • Anjaneyane amara vandita

    Composer : Shri Vadirajaru ಆಂಜನೇಯನೇ ಅಮರವಂದಿತ ಕಂಜನಾಭನ ದೂತನೇ ||ಪ||ಮಂಜಿನೋಲಗದಂತೆ ಶರಧಿಯ ದಾಟಿದ ಮಹಾ ಧೀರನೆ ||ಅ.ಪ|| ಆಂಜನೇಯನೇ ನಿನ್ನ ಗುಣಗಳ ಪೊಗಳಲಳವೆ ಪ್ರಖ್ಯಾತನೆಸಂಜೀವನವ ತಂದು ಕಪಿಗಳ ನಂಜು ಕಳೆದ ವಿಖ್ಯಾತನೇ ||೧|| ಕಾಮ ನಿಗ್ರಹನೆನಿಸಿ ಸುರರಭಿಮಾನಿ ದೇವತೆ ಎನಿಸಿದೆ |ರಾಮ ಪಾದಕ್ಕೆರಗಿ ನಡೆದು ನಿಸ್ಸೀಮ ನೀನೆಂದೆನಿಸಿದೆ ||೨|| ಸಿಂಧು ಹಾರಿದೆ ಶೀಘ್ರದಿಂದಲೆ ಬಂದು ಸೀತೆಗೆ ನಮಿಸಿದೆ |ತಂದು ಮುದ್ರೆಯನಿತ್ತು ಮಾತೆಯ ಮನವ ಸಂತೋಷ ಪಡಿಸಿದೆ ||೩|| ಜನಕ ತನುಜೆಯ ಮನವ ಹರುಷಿಸಿ ವನವ ಕಿತ್ತೀಡಾಡಿದೆ…

  • Aryanna Yoga Dhuryanna

    Composer : Shri Vadirajaru ಆರ್ಯನ್ನ ಯೋಗಧುರ್ಯನ್ನ ಭಜಿಸಿ ವರ್ಯನ್ನಮಧ್ವಾಚಾರ್ಯನ್ನ ||ಪ|| ಅಕಳಂಕ ಮಹಿಮ ಚರಿತ್ರನ್ನಈ ಸಕಲ ಭುವನಕೆ ಪವಿತ್ರನ್ನಪ್ರಕಟ ಭಾರತಿ ಸತ್ಕಳತ್ರನ್ನಪಾಪ ನಿಕರ ಕಾನನ ವೀತಿಹೋತ್ರನ್ನ ||೧|| ನಿರ್ಜಿತ ಪಾಷಂಡ ಯೂಥನ್ನದೂರ ವರ್ಜಿತ ಭವದು:ಖ ಬದ್ಧನ್ನಸಜ್ಜನರಘಕೆ ನಿರೋಧನ್ನದೋಷ ವರ್ಜಿತ ಗುಣಪೂರ್ಣ ಭೋಧನ್ನ ||೨|| ಸದಮಲ ಲಕ್ಷಣ ತುಂಗನ್ನಸಿರಿ ಸದನನ ಕರುಣಾಂತ ರಂಗನ್ನಮದಮೋಹ ತಿಮಿರ ಪತಂಗನ್ನಹಯವದನನ್ನ ಚರಣಾಂಬ್ಜ ಭೃಂಗನ್ನ ||೩|| Aryanna yOgadhuryanna Bajisi varyannamadhvAcAryanna ||pa|| akaLaMka mahima caritrannaI sakala bhuvanake pavitrannaprakaTa bhArati…

  • Sharanembe charanake

    Composer : Shri Prasannavenkata dasaru Aprachalita pada of Ghatikachala Prana devaru – tuned by Smt.Shubhalakshmi Rao ಶರಣೆಂಬೆ ಚರಣಕೆ ಹನುಮಂತರಾಯಾ [ಪ]ಪೊರೆಯೋ ಕರುಣದಿ ಮಹಾನುಭಾವಾ [ಅ] ಪ್ರಾಣ ಅಪಾನಾದಿ ಪಂಚನಿಧಾನಾ |ಅಣುಅಣು ಜೀವದಿ ನಿಂತು ನೀ ದಿನದಿನಾ ||ಅಣುಮಹಾಜ್ಜಗ-ಅಂತರವ್ಯಾಪ್ತನ |ಗುಣ ಕ್ರೀಯೆಗಳರುಹಿದ ಪವಮಾನಾ [೧] ಮುಕುತಿ ಯೋಗ್ಯರಿಗೆ ಸಕಲ ಶಾಸ್ತ್ರಗತ |ಮುಕುತೀಶನ ಪುರ ದಾರಿಯ ತೋರುತ ||ಭಕುತಿ ತತ್ವಮತ ವೈರಾಗ್ಯ ಜ್ಞಾನವನಿತ್ತ |ಶ್ರೀಕಾಂತನೆ ಜಗಕಾಧಾರೆಂದ ಮಹಾಂತನೆ [೨] ವಾರುಣಿ ತಟ ಘಟಿಕಾಚಲ…

error: Content is protected !!