Srinivasa Kalyana

  • Srinivasa Kalyana – Purandara dasaru

    ಶ್ರೀ ಪುರಂದರದಾಸಕೃತ ಶ್ರೀನಿವಾಸಕಲ್ಯಾಣರಾಗ: ಮಧ್ಯಮಾವತಿಆದಿತಾಳ ವೈಕುಂಠಪತಿ ತಾನು ವೈಕುಂಠವನೆ ಬಿಟ್ಟು|ವೇಂಕಟಾದ್ರಿಗೆ ಹೋಗಿ ಶ್ರೀಕಾಂತ ನಿಂತ ||ನಾಲ್ಕು ಕಡೆಯೂ ನೋಡಿ ವಲ್ಮೀಕವನೆ ಕಂಡು |ಏಕಾಂತಸ್ಥಳವೆಂದು ಬಹುಕಾಲವಲ್ಲಿದ್ದ || ೧ || ಚೋಳ ಭೃತ್ಯನು ಶಿರವನೊಡೆದ ಗಾಯವ ನೋಡಿ |ತಾಳಲಾರದೆ ಸ್ವಾಮಿ ಗುರುಗಳನೆ ಕರೆಸಿ ||ಹೇಳಿದೌಷಧ ಮಾಡಿ ಕ್ರೋಢರೂಪಿಯ ಕಂಡು |ಕೇಳಿ ಸ್ಥಳವನೆ ಕೊಂಡು ಲೀಲೆ ತೋರುತಲಿ || ೨ || ಇರುತಿರಲೊಂದಿನ ತುರಗವನೆ ಸ್ಮರಿಸುತಲಿ |ತುರಗ ಬರಲು ಕಂಡು ಮುದದಿ ತಾನೇರಿ ||ಪರಿಪರಿ ಮೃಗಗಳ ಅಡವಿಯಲಿ ತಾ ಕೊಂದು…

  • Deva devesha venkatesha

    Composer : Shri Prasannavenkata dasaru ದೇವ ದೇವೇಶ ವೆಂಕಟೇಶಶ್ರೀವಿಧಾತ ವಂದ್ಯ ಭೂವೈಕುಂಠೇಶ [ಪ] ಕಾಮಿತ ಫಲಧಾತ ಜಗದಾಧ್ಯಾಕ್ಷಸಾಮಗಾನಪ್ರಿಯ ಸುರ ಸತ್ಪಕ್ಷ, ಶ್ರೀಮಾವಧೂ ಮನೋಹರ ತ್ರಿಧಾಮಶ್ರೀರಾಮ ಸುಪ್ರೇಮಾಬ್ಧಿ ಕೋಮಲ ಕುಕ್ಷ [೧] ರಾಕೇಂದು ರವಿಕೋಟಿ ಸುತೇಜ ಸ್ವಾಮಿನಾಕಪಾರ್ಚಿತ ಪದಾಂಬೋಜವ್ಯಾಕೀರ್ಣಾ-ನೇಕಾಜಾಂಡಾಂ-ಕಿತಾ-ವ್ಯಾಕೃತಶ್ರೀಕಾರ ಸಾಕಾರ ಲೋಕೇಕ ಪೂಜ್ಯ [೨] ಅನಂತಗುಣ ಪರಿಪೂರ್ಣ ಸ್ವಾಮಿಆನತಜನ ಬುಧಾಭರ್ಣ, ಧೇನುಗಿರಿನಾಥ ದಾನಿ ಪ್ರಸನ್ವೆಂಕಟಜ್ಞಾನಾನಂದ ನಿತ್ಯತೇ ನಮೋ ಕರುಣಿ [೩] dEva dEvESa veMkaTESaSrIvidhAta vaMdya BUvaikuMThESa [pa] kAmita phaladhAta jagadAdhyAkShasAmagAnapriya sura satpakSha, SrImAvadhU…

  • Shobhana kama janakanige

    Composer : Shri Pranesha dasaru ಕಂಕಣ ಕಟ್ಟುವ ಪದ ಶೋಭಾನ ಕಾಮಜನಕನಿಗೆ |ಶೋಭನ ಶ್ರೀ ಮಹಾ ಲಕುಮಿಗೆ |ಶೋಭಾನವೆನ್ನೀ ಬುಧರೆಲ್ಲಾ [ಪ] ಪಾಲ ಸಮುದ್ರವು ಹೆಣ್ಣಿನ ಮನೀ |ಮೇಲಾದ ದ್ವಾರಕಿ ಗಂಡಿನ ಮನಿ |ಮೂಲೋಕದೊಳಗಿಹ ನಿಬ್ಬಣದವರೋಲಯಒದಗೀದಾರು ಶೋಭಾನ [೧] ಅಂಬರ ಛಪ್ಪರ ರವಿಚಂದ್ರರು |ಸಂಭ್ರಮ ತೋರಣಗಳು ಮದುವೀಗೆ |ಇಂಬಾದ ಮೇದಿನಿ ಪರದಿಯ ಶ್ಯಾಲಿ |ಹೊಂಬಣ್ಣನ ಗಿರಿಜಗುಲೀ ಶೋಭಾನ [೨] ಆ ಮಹಾ ಸುರರಂಗನಿಯರು ಬಹಳಾ |ಮುದದಲಿ ಪ್ರಾಣೇಶ ವಿಠ್ಠಲಗೆ |ಶ್ರೀ ಮಾಯಾದೇವಿಗೆ ಕಂಕಣ |ನೇಮಿಸಿ ಕಟ್ಟಿದರೂ…

error: Content is protected !!