Shripadarajaru

  • Elyadi bandyo enna krishnayya

    Composer : Shri Shripadarajaru ಎಲ್ಲ್ಯಾಡಿ ಬಂದ್ಯೋ ಎನ್ನ ಕೃಷ್ನಯ್ಯನೀನೆಲ್ಲ್ಯಾಡಿ ಬಂದ್ಯೋ ಎನ್ನ ರಂಗಯ್ಯಾಬಾಲಯ್ಯ ನೀ ಎನ್ನ ಕಣ್ಣಮುಂದಾಡದೆ [ಪ] ಆಲಯದೊಳಗೆ ನೀನಾಡದೆ ಚಿನಿ-ಪಾಲುಸಕ್ಕರೆ ನೀನೊಲ್ಲದೆ ಚಿಕ್ಕ ಬಾಲೆರಿಂದೊಡಗೂಡಿ ಆಡದೆ ಮುದ್ದು ಬಾಲಯ್ಯ ನೀಎನ್ನ ಕಣ್ಣ ಮುಂದಾಡದೆ [೧] ಬಟ್ಟ್ಟಮುತ್ತಿನ ಬೊಗಸೆ ಕಂಗಳುಫಣೆಯೊ-ಳಿಟ್ಟ ಕಸ್ತೂರಿ ತಿಲಕದಂದವುದಿಟ್ಟತನದಿ ಕೂಡ್ಯಾಡಲು ಪುಟ್ಟ ಕೃಷ್ಣಯ್ಯನೀ ಎನ್ನ ಕಣ್ಣ ಮುಂದಾಡದೆ [೨] ಅಷ್ಟ ದಿಕ್ಕಿಲಿ ಅರಸಿ ಕಾಣದೆ ನಾದೃಷ್ಟಿಗೆಟ್ಟೆನೊ ನಿನ್ನ ನೋಡದೆ ಇ-ನ್ನೆಷ್ಟು ಹೇಳಲಿ ಕೇಳಬಾರದೆ ರಂಗ-ವಿಠ್ಠಲ ನೀ ಎನ್ನ ಕಣ್ಣ ಮುಂದಾಡದೆ…

  • Ta Ta Ta ranga ninna pada

    Composer : Shri Shripadarajaru ತಾ ತಾ ತಾ ತಾ ತಾ ರಂಗ ನಿನ್ನ ಪಾದಥೈ ಥೈ ಥೈ ಥೈ ಥೈ ಎಂದು ಕುಣಿಯುತ ||ಪ|| ನಿಗಮವ ತಂದು ನಗವ ಬೆನ್ನಲಿ ಹೊತ್ತುಅಗೆದು ಬೇರು ತಿಂದು ಬಾಲನ ಸಲಹಿದೆ ಅಂದು ||೧|| ಪೊಡವಿ ಈರಡಿ ಮಾಡಿ ಕೊಡಲಿ ಪಿಡಿದು ಮುನಿಮಡದಿಯ ಸಲಹಿದೆ ಎನ್ನೊಡೆಯ ಶ್ರೀಕೃಷ್ಣ ||೨|| ಅಂಗನೆಯರ ವ್ರತಭಂಗವ ಮಾಡಿದೆತುಂಗ ಕುದುರೆಯೇರಿದ ರಂಗವಿಠಲನೆ ||೩|| tA tA tA tA tA raMga ninna pAdathai thai…

  • Kangalidyatako Kaveri Rangana

    Composer : Shri Shripadarajaru ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ |ಪ|ಕಸ್ತುರಿ ರಂಗನ ನೋಡದಪರಿಮಳ ರಂಗನ ನೋಡದ | ಜಗಂಗಳೊಳಗೆ ಮಂಗಳ ಮೂರುತಿರಂಗನ ಶ್ರೀಪಾದಂಗಳ ನೋಡದ |ಅ.ಪ| ಎಂದಿಗಾದರೊಮ್ಮೆ ಜನರುಬಂದು ಭೂಮಿಯಲ್ಲಿ ನಿಂದುಚಂದ್ರ ಪುಷ್ಕರಣಿ ಸ್ನಾನವ ಮಾಡಿಆನಂದದಿಂದದಲಿ ರಂಗನ ನೋಡದ |೧| ಹರಿಪಾದೋದಕ ಸಮ ಕಾವೇರಿವಿರಜಾ ನದಿಯಲಿ ಸ್ನಾನವ ಮಾಡಿಪರಮ ವೈಕುಂಠ ರಂಗ ಮಂದಿರ,ಪರವಾಸುದೇವನ ನೋಡದ |೨| ಹಾರ ಹೀರ ವೈಜಯಂತಿತೋರ ಮುತ್ತಿನ ಹಾರ ಪದಕತೇರನೇರಿ ಬೀದಿಲಿ ಮೆರೆವರಂಗವಿಠ್ಠಲ ರಾಯನ ನೋಡದ |೩| kaMgaLidyAtakO kAvEri raMgana…

error: Content is protected !!