-
Teraneri meredu baruva
Composer : Shri Ananda Vittala ತೇರನೇರಿ ಮೆರೆದು ಬರುವಭೂಸುರವಂದ್ಯ ಯಾರಕ್ಕ|ಗುರು ರಾಘವೇಂದ್ರರೆಂತೆಂಬೊಯತಿಕುಲ ತಿಲಕ ಕೇಳ್ತಂಗಿ |ಪ| ಚಂದದಿ ಕುಂದಣ ಮುಕುಟವ ಧರಿಸಿದಸುಂದರನೀತ ಯಾರಕ್ಕ |ತಂದೇಯ ಅಘ ಹರಿದು ನರಹರಿಯ ತೋರಿದಪ್ರಹ್ಲಾದರಾಯ ಕೇಳ್ತಂಗಿ |೧| ವಿಪ್ರರು ದಾಸರು ಯತಿತತಿಗಲ ಕೂಡಿಬರುತಿಹ ನೀತ ಯಾರಕ್ಕ|ಕಪ್ಪು ಕೃಷ್ಣನ ಒಪ್ಪಿಸಿ ಕುಣಿಸಿದವ್ಯಾಸರಾಯ ಕೇಳ್ತಂಗಿ |೨| ವರಹಜ ನದಿಯ ತೀರದಿ ಇದ್ದುಭಕುತರ ಪೊರೆವವ ಯಾರಕ್ಕ|ಹರುಷದಿ ಅನಂದ ವಿಠಲನ ಸಾರಿದಪರಿಮಳಾರ್ಯ ಕೇಳ್ತಂಗಿ |೩| tEranEri meredu baruvabhUsuravaMdya yArakka|guru rAghavEMdrareMteMboyatikula tilaka kELtaMgi |pa|…
-
Indu enage Govinda
Composer : Shri Raghavendra Tirtharu / Rayaru ಇಂದು ಎನಗೆ ಗೋವಿಂದ ನಿನ್ನಯಪಾದಾರವಿಂದವ ತೋರೋ ಮುಕುಂದನೆ [ಪ] ಸುಂದರ ವದನನೆ ನಂದಗೋಪಿಯ ಕಂದಮಂದರೋದ್ಧಾರ ಆನಂದ ಇಂದಿರಾ ರಮಣ [ಅ.ಪ] ನೊಂದೆನಯ್ಯ ಭವ ಬಂಧನದೊಳು ಸಿಲುಕಿಮುಂದೆ ದಾರಿ ಕಾಣದೆ ಕುಂದಿದೆ ಜಗದೊಳುಕಂದನನೆಂತೆಂದೆನ್ನ ಕುಂದುಗಳ ಎಣಿಸದೆತಂದೆ ಕಾಯೋ ಕೃಷ್ಣ ಕಂದರ್ಪ ಜನಕನೆ ||೧|| ಮೂಢತನದಿ ಬಹು ಹೇಡಿ ಜೀವ ನಾನಾಗಿದೃಢ ಭಕುತಿಯನು ಮಾಡಲಿಲ್ಲವೊ ಹರಿಯೆನೋಡಲಿಲ್ಲವೊ ನಿನ್ನ ಪಾಡಲಿಲ್ಲವೊ ಮಹಿಮೆಗಾಡಿಕಾರ ಕೃಷ್ಣ ಬೇಡಿಕೊಂಬೆನೊ ನಿನ್ನ ||೨|| ಧಾರುಣಿಯೊಳು ಬಲುಭಾರ ಜೀವ…
-
Guru Raghavendrara charana
Composer : Shri Gopala dasaru ಗುರುರಾಘವೇಂದ್ರರ ಚರಣಕಮಲವನ್ನುಸ್ಮರಿಸುವ ಮನುಜರಿಗೆ | ಪ |ಕರೆಕರೆಗೊಳಿಸುವ ದುರಿತ ದುಷ್ಕೃತವೆಲ್ಲಕರಿಯು ಸಿಂಹನ ಕಂಡ ತೆರನಾಗುವುದಯ್ಯ | ಅ | ಗುರುಮಧ್ವ ಮತವೆಂಬ ವರ ಕ್ಷೀರಾಂಬುಧಿಯಲ್ಲಿಹರಧರಿಸಿದ ಶಶಿಯಂತುದಿಸಿಪರಮತ ತಿಮಿರಕ್ಕೆ ತರಣಿ ಕಿರಣವೆನಿಸಿಪಿರಿದು ಮೆರೆದ ಸೀತಾರಾಮಾರ್ಚಕರಾದ | ೧ | ಹರಿಯೇ ಸರ್ವೊತ್ತಮ ಸಿರಿಯು ಆತನ ರಾಣಿಪರಮೇಷ್ಟಿ ಮರುತರೆ ಗುರುಗಳೆಂದುಗರುಡ ಶೇಷ ರುದ್ರ ಸಮರೆಂದು ಸ್ಥಾಪಿಸಿಸ್ಥಿರತರತಮ ಪಂಚಭೇದ ಸತ್ಯವೆಂಬ | ೨ | ರಾಯೆನ್ನೆ ರಾಶಿದೋಷಗಳೆಲ್ಲ ದಹಿಸುವಘಯೆನ್ನೆ ಘನಜ್ಞಾನ ಭಕ್ತಿಯೀವಾವೇಂ ಎನೆ ವೇಗದಿ…
