-
Raghavendra Guru Rayaranghri
Composer : Shri Shrisha vittala ಶ್ರೀ ಹುಂಡೆಕಾರ ದಾಸರಾಯರ ರಚನೆ (ಶ್ರೀಶವಿಠಲ ಅಂಕಿತ) ರಾಘವೇಂದ್ರ ಗುರುರಾಯರಂಘ್ರಿಕಮಲಾರಾಧಿಸಿರೋ ವಿಮಲಾ || ಪ || ಯತಿವರ ಶ್ರೀಸುಧೀಂದ್ರ ಕರಜಾತಾ |ಕ್ಷಿತಿ ಸುರಯತಿ ಈತ |ಸ್ತುತಿಪರಘ ನಿಮಿಷದೊಳು ನಿವಾರಿಸುವಾ |ಸುಖವನು ತೋರಿಸುವ |ಶ್ರುತಿಸ್ಮೃತಿ ತತಿ ಸಮ್ಮತವಾಗಿ ಗ್ರಂಥ |ರಚಿಸಿದ ಧೀಮಂತ || ೧ || ಮಧ್ವ ಸುಮತ ದುಗ್ದಾಬ್ಧಿಗೆ ಉಡುರಾಜಾ |ತರಣಿ ಸಮತೇಜಾ |ಅದ್ವೈತ ಘೋರಾರಣ್ಯಕೆ ದಾವಾ |ಸಜ್ಜನರ ಕಾವಾ |ಸದ್ವೈಷ್ಣವರಿಗೆ ಸತತ ಸುಧಾಕರವಾ |ಕರವಿಡಿದು ಮೆರೆವಾ |ಉದ್ಯದ್ಭವಿ ಸಮ…
-
Yeshtentend varnisali
Composer : Shri Varada vittala ಎಷ್ಟೆಂತೆಂದ್ವರಣಿಸಲಿ ಗುರುರಾಜನೇ [ಪ] ಎಷ್ಟೆಂತೆಂದ್ವರಣಿಸ ಶ್ರೀಗುರುರಾಘವೇಂದ್ರಕಷ್ಟಗಳ ಪರಿಹರಿಸಿ ಇಷ್ಟಾರ್ಥ ನೀಡುವರ [ಅ.ಪ] ದೀನದಿಂದಲಿ ಬಂದ ನರರಿಗೆ, ನೀನೆ ಗತಿಯು ಎಂದುಘನ್ನ ಮಹಿಮನೇ ಕರುಣವ ನೀ ಮಾಡಿ |ಹೀನ ಕರ್ಮದಿಂದ ದೂರ ಮಾಡಿಸುವಿಯೋ [೧] ಅನುಪಮ ಸನ್ಮಹಿಮ ಮುನಿಕುಲಕ್ಷಣ ಕ್ಷಣದೊಳು ಮಹಿಮ |ಜ್ಞಾನಹೀನನಾಗಿ ನಾನಾ ಯೋನಿಯಚರಿಸಿ|ಜ್ಞಾನವಿತ್ತು ಅನಘ ಪ್ರೇಮದಿ ಪೊರೆವರ [೨] ಈತದಾತಾ ಯತಿಯೋ, ನಾಥನೋ |ವಾತಾತ್ಮಜನ ದೂತನೋ |ವಿತತ ಮಹಿಮ ನಮ್ಮ ವರದವಿಠಲನ |ಆತುಮದೊಳು ತೋರಿ ರಕ್ಷಿಸಿ ಗುರುವರ [೩]…
-
Shri Raghavendra Nimma
Composer : Shri Jagannatha dasaru ಶ್ರೀ ರಾಘವೇಂದ್ರ ನಿಮ್ಮ ಚಾರು ಚರಣವಸಾರಿದೆ ಶರಣ ಮಂದಾರ ಕರುಣವ || ಪ || ಘೋರ ವನಧಿ ತಾರಿಸು ತವಕದಿಸೂರಿ ಸುಧೀಂದ್ರ ಕುಮಾರ ಉದಾರ || ಅ || ಮುನಿರಾಯ ನಿಮ್ಮ ಪಾದ ವನರುಹ ಧ್ಯಾನಪ್ರಣವ ಸುಸ್ತವನ ಅರ್ಚನೆ ಮಾಳ್ಪ ನಾನಾಜನರ ವಾಂಛಿತವೀವ ಗುಣ ಪೂರ್ಣ ಜ್ಞಾನದನವೆ ಪಾಲಿಸೆನಗ್-ಈಕ್ಷಣ ನಿಮ್ಮಾಧೀನಮನುಜನ ಪ್ರತಿದಿನ ದಿನದಿ ದಣಿಸುವದುಘನವೇ ಗುರುವೆ ಪಾವನತರ ಚರಿತ ||೧ || ಮೂಲರಾಮನ ಪಾದ ಕೀಲಾಲಜ ಮಧುಪಬಾಲಕನ ಬಿನ್ನಪವ ಲಾಲಿಸೋ…
