-
Elu Shri Gururaya
Composer : Shri Prasannavenkata dasaru ಏಳು ಶ್ರೀ ಗುರುರಾಯ ಬೆಳಗಾಯಿತಿಂದುಧೂಳಿ ದರುಶನ ಕೊಡಿರಿ ಈ ವೇಳೆ ಶಿಷ್ಯರಿಗೆ [ಪ.] ಏಳು ಗುರು ರಾಘವೇಂದ್ರ ಏಳು ದಯಾಗುಣ ಸಾಂದ್ರಏಳು ವೈಷ್ಣವ ಕುಮುದಕೆ ಚಂದ್ರ ಶ್ರೀ ರಾಘವೇಂದ್ರ [ಅ.ಪ] ಅಶನ ವಸನಗಳಿಲ್ಲವೆಂಬ ವ್ಯಸನಗಳಿಲ್ಲಮುಸುಕ್~ ಹಾಕಿ ಮೋಸದಲೆ ಮೋಹಿಸಿದೆನೆಲ್ಲಅಸುರಾರಿಯ ಸ್ಮರಿಸದೆ ಪಶುವಿನೊಲು ಈ ದೇಹವಸುಮತಿಯೊಳು ಬಹಳ್ ಹಸಗೆಟ್ಟಿತಲ್ಲ (೧) ನಾನು ನನ್ನದು ಎಂದು ಹೀನಮನಸಿಗೆ ತಂದುಏನು ಮಾಡುವ ಕರ್ಮ ನಾನೆ ಅಹುದೆಂದುಸ್ವಾಮಿ ಕರ್ತೃತ್ವವನು ತಿಳಿಯಲಿಲ್ಲ ನಾನೆಂದುನೀನೆ ಉದ್ಧರಿಸಯ್ಯ ದೀನ ದಯಾಸಿಂಧು…
-
Kandugorala shiva
Composer : Shri Prasannavenkata dasaru ಕಂದುಗೊರಳ ಶಿವ ಸುಂದರೇಶ್ವರನಾ |ವಂದಿಸಿ ಬೇಡಾನಂದವ ದಿನ ದಿನಾ [ಪ] ಚಂದ್ರಧರ ಶರಶ್ಚಂದ್ರವದನೆ |ಮಂದಾಕಿನಿವರ ಭಕ್ತವೃಂದವನೆ ||ಚಂದದಿ ಸಲಹುವ ನಂದಿಗಮನನೆ |ಕುಂದನಳಿದು ಮುಕುಂದನ ತೋರ್ಪನನೆ [೧] ಪಾತಾಳೇಶ್ವರ ಪ್ರಪಾತಕಿಳಿದ ಭವಜರ |ಎತ್ತಿ ತನ್ನಾತುಮದಿ ಸ್ಥಾನವಿತ್ತು ಪರ ||ಗತಿ ಸಾಧನ ದಾರಿಯ ತೋರಿದ ಮುನಿವರ |ಚಿತ್ತಜೈಯ್ಯನತಿಪ್ರೀತಿಯ ಶಂಕರ [೨] ಮುದದಿ ಶ್ರೀಹರಿ ಮಂಚ ಪದವಿ ಪಡೆದ |ವಿಧಿಭವಾದ್ಯರಿಗೆಲ್ಲ ಸರ್ವತ್ರ ಬೇಕಾದ ||ಸದ್ಯೋಜಾತಾದಿ ಪವಿತರೈದು ಮೊಗದ |ಸ್ಪರ್ಧುನಿಪಿತ ಪ್ರಸನ್ವೆಂಕಟಗೆ ಸಖನಾದ [೩] kaMdugoraLa…
-
Swami pushkarateera nilaya
Composer : Shri Prasannavenkata dasaru ಸ್ವಾಮಿ ಪುಷ್ಕರ ತೀರ ನಿಲಯ ನಮೋಸ್ವಾಮಿ ವರಾಹ ವೆಂಕಟ ನಾಯಕಸ್ವಾಮಿ ಪಾಹಿ ಪಾಹಿ ತ್ರಾಹಿಸ್ವಾಮಿ ವರಾಹ ವೆಂಕಟನಾಯಕ [ಪ] ಯಜ್ಞಗಾತ್ರ ವಿಧಿನುತ ಪ್ರಭು ಶ್ರೀಯಜ್ಞ ವರಾಹ ವೆಂಕಟ ನಾಯಕಯಜ್ಞ ಭೋಕ್ತೃ ಹೇಮಾಂಬಕ ಹರಯಜ್ಞವರಾಹ ವೆಂಕಟನಾಯಕ (೧) ಭೂಭಯದೂರ ಧರಾ ಮನೋಹರಭೂವರಾಹ ವೆಂಕಟನಾಯಕಶೋಭಿತ ಬಾಲ ಚಂದ್ರೋಪಮ ಕ್ರೋಡಭೂವರಾಹ ವೆಂಕಟನಾಯಕ (೨) ಶ್ವೇತ ಹಯವದನ ಶ್ವೇತಾಂಬರಧರಶ್ವೇತವಾಹನ ಸಖ ಶ್ವೇತನಿಭಶ್ವೇತಾದ್ರೀಶಾರ್ಚಿತ ಪಾದಕಮಲಶ್ವೇತವರಾಹ ವೆಂಕಟ ನಾಯಕಪಾತಕ ಮೋಚಕ ಪ್ರಸನ್ವೆಂಕಟಶ್ವೇತವರಾಹ ವೆಂಕಟನಾಯಕ (೩) svAmi puShkara tIra…
