Prasannavenkata dasaru

  • Oliyayya ranga oliyayya

    Composer : Shri Prasannavenkata dasaru ಒಲಿಯಯ್ಯಾ ರಂಗ ಒಲಿಯಯ್ಯಾನೆಲೆಗಾಣದ ಭವಜಲದೊಳು ಮುಳುಗುವೆ [ಪ] ಮಾಯದ ಕೈಯಲಿ ಮೇಲೆ ಮೇಲೆ ಸುತ್ತಿಆಯಾಸಬಡುತಿದೆ ಪ್ರಾಣದಾತಬಾಯೆತ್ತಿ ಗೋವಿಂದ ಹರಿಯೆನ್ನಲೀಸದುಕಾಯೊ ದಯಾಳು ಕರಿವರದ ಕೃಷ್ಣ [೧] ಮನ ನೀರಾನೆಯ ಕಟ್ಟಿನೊಳಗೆ ಸಿಕ್ಕಿಕ್ಷಣ ಕ್ಷಣ ದೈನ್ಯದಿ ಒರಲುತಿದೆತನತನಗೆಳೆದು ದಣಿಸುವ ಇಂದ್ರಿಯ ಜಂತುಮುನಿಸೇವ್ಯ ನಿನ್ನೂಳಿಗಕ್ಕೆ ದೂರಾದೆ ಕೃಷ್ಣ [೨] ಬುದ್ಧಿ ತಪ್ಪಿದವಗೆ ಅಪದ್ಧ ನಡೆವವಗೆಶುದ್ಧ ಕಾರಣ ದಿವ್ಯ ನಾಮವಲ್ಲವೆಉದ್ಧರಿಸು ಬೇಗ ಪ್ರಸನ್ವೆಂಕಟ ಕೃಷ್ಣತಿದ್ದಿಟ್ಟುಕೊಳ್ಳೊ ನಿನ್ನವಗೆ ನಿರ್ಣಯ ನೀನೆ [೩] oliyayyA raMga oliyayyAnelegANada BavajaladoLu…

  • Enu karunanidhi ranga

    Composer : Shri Prasannavenkata dasaru ಏನು ಕರುಣಾನಿಧಿ ರಂಗನನ್ನ ನ್ಯೂನತೆ ನೋಡುವರೆ ರಂಗನಾನೇನು ಅರಿಯೆನೊ ರಂಗನೀದಾನಿ ನೀನೆ ಗತಿ ರಂಗ [ಪ] ಭಕ್ತಿಯುಂಟೆಂಬೆಯ ರಂಗಮಿಶ್ರ ಭಕ್ತಿಯೆ ತುಂಬಿದೆ ರಂಗಶಕ್ತಿಯ ನೋಡುವೆ ರಂಗವಿಷಯಾಸಕ್ತಿಯೆ ಶಕ್ತಿಯು ರಂಗ [೧] ಜ್ಞಾನ ಪರೀಕ್ಷಿಪೆ ರಂಗಅಜ್ಞಾನದ ಖಣಿಕಾಣೊ ರಂಗಏನಾರು ವಿರತ್ಯುಂಟೆ ರಂಗಜಠರಾನುಕೂಲ ವಿರತಿರಂಗ [೨] ಪೂಜಿಸು ಇನ್ನೆಂಬೆ ರಂಗ ಹೊಲೆಭಾಜನ ಮನವಾಯ್ತು ರಂಗನಾ ಜಪವರಿಯೆನೊ ರಂಗಕಲ್ಪಭೂಜ ಪ್ರಸನ್ವೇಂಕಟ ರಂಗ [೩] Enu karuNAnidhi raMgananna nyUnate nODuvare raMganAnEnu ariyeno raMganIdAni…

  • Byadiravva enna kandana

    Composer : Shri Prasannavenkata dasaru ಬ್ಯಾಡಿರವ್ವ ಎನ್ನ ಕಂದನ್ನ ದೂರ ಬ್ಯಾಡಿರೆಗಾರುಮಾಡಿ ಚೋರನೆಂದು ಸಾರಿ ತಂದ ದುರುಳನೆನ್ನ [ಪ.] ಹಸಿದೆ ಮಗುವೆ ಹಸಿದೆ ಚಿನ್ನ ಶಿಶುವೆ ಪಾಲ್ಗುಡಿಯ ಬಾರೆನ್ನೆಮಿಸುಣಿ ಬಟ್ಟಲೊಳಿಪ್ಪ ಪಾಲಿನ ಬಿಸಿಗೆ ಬೊಯೆಂದು ಬೆದರುವ |ಮೊಸರು ಹರವಿಯೊಡೆದು ನಿಮ್ಮ ಪೊಸ ಬೆಣ್ಣೆಯ ಮೆಲುವನೆಂತೊಸೊಸೆಯರೊಂದು ಗೂಡೆನ್ನ ಕೂಸಿಗೆ ಪುಶಿಯ ವಾಕು ನುಸಿಸಿ ದೂರ [೧] ಮುದ್ದು ತಾರೊ ರಂಗ ಎನಲು ಎದ್ದು ಚಪ್ಪಳೆಗಳಿಡುತಬಿದ್ದು ಅಂಬೆಗಾಲನಿಕ್ಕಿ ಮುದ್ದು ನೀಡಲರಿಯನೆಕದ್ದು ನಿಮ್ಮನೆ ಕೆನೆವಾಲನು ಗೆದ್ದು ನಿಮ್ಮ ಬಾಲರ ಬೆನ್ನಗುದ್ದಿ…

error: Content is protected !!