-
Hanuma bheema madhwamuniye
Composer : Shri Jayesha vittala ಹನುಮಾ ಭೀಮಾ ಮಧ್ವ ಮುನಿಯೆ ಪ್ರಣತ ಪಾಲಕಾ | ಪ |ಜನುಮಾ ಜನುಮಾದಲ್ಲಿ ಸಲಹೋ ಪ್ರಣಯ ಪೂರ್ವಕಾ | ಅ ಪ | ಭಾರತೀಶಾ ಶೌರಿ ದಾಸ ನಿನ್ನ ಶ್ರೀಪಾದಾ |ವಾರೀಜಾವೇ ಗತಿಯೋ ಎನಗೇ ಭೂರೀಪ್ರಮೋದಾ |ಹಾರೈಸೂವೇ ಹರಿಯಾ ಸಾಕ್ಷಿ ನಿನ್ನ ಪ್ರಸಾದಾ |ಬ್ಯಾರೇವಲ್ಲೆ ಬಯಲೂಬೇಡಾ ಧೀರ ಸುಭೋಧಾ | ೧ | ವಾಸುದೇವ ದೋಷದೂರ ಈಶ ಸರ್ವೇಶಾ |ಈ ಸಮಸ್ತ ಜಗಕೇ ಎಂದೂ ಸೂಸಿ ಉಲ್ಲಾಸಾ |ರಾಶಿ ವೇದ…
-
Mangala mukhyaprananige
Composer : Shri Vyasarajaru ಮಂಗಳ ಮುಖ್ಯ ಪ್ರಾಣನಿಗೆ [ಪ]ಜಯ ಮಂಗಳ ವಾಯುಕುಮಾರನಿಗೆ [ಅ.ಪ] ಅಂಜನಾದೇವಿಯ ಕಂದಗೆ ಮಂಗಳಕಂಜಾಕ್ಷ ಹನುಮಂತಗೆ ಮಂಗಳಸಂಜೀವನ ತಂದಾತಗೆ ಮಂಗಳಸಜ್ಜನ ಪರಿಪಾಲಗೆ ಮಂಗಳ [೧] ಅತಿ ಬಲವಂತ ಶ್ರೀಭೀಮಗೆ ಮಂಗಳಪ್ರತಿಮಲ್ಲರ ಗೆಲಿದವಗೆ ಮಂಗಳಸತಿಯ ಸೀರೆಯ ಸೆಳೆಯ ಬಂದವನಪೃಥ್ವಿ ಮ್ಯಾಲೆ ಕೆಡಹಿದಾತಗೆ ಮಂಗಳ [೨] ಸರಸ ಸುಶಾಸ್ತ್ರವ ಪೇಳ್ದವಗೆ ಮಂಗಳನಿರುತ ಶ್ರೀರಾಮರ ಭಂಟಗೆ ಮಂಗಳದೊರೆ ಶ್ರೀ ಕೃಷ್ಣನ ಪೂಜೆಯ ಮಾಡುವಗುರು ಮಧ್ವ ಮುನಿರಾಯರಿಗೆ ಮಂಗಳ [೩] maMgaLa muKya prANanige [pa]jaya maMgaLa vAyukumAranige…
-
Neene vara guru
Composer : Shri Vyasarajaru ನೀನೆ ವರಗುರು ಮುಖ್ಯಪ್ರಾಣನಿರಂತರವು ನಂಬಿದೆನೋ-ನಿಖಿಳ ಗುಣಪೂರ್ಣ ||ಪ|| ಜಾಣೆ ಕೋಮಲೆ ಭಾರತೀಶ ಸಕಲಪ್ರಾಣಿಗಳ ಹೃದಯದಲಿ ವಾಸ ಸುರೇಶ ||ಅ.ಪ|| ವಾತಸುತನಾಗಿ ರಘುನಾಥ ಪ್ರಿಯದೂತ ಬಲುಯೂಥ ಲಂಕೆಯ ಪೊಕ್ಕು ಖ್ಯಾತಿಯನು ಪಡೆದೆಸೀತೆಗುಂಗುರವಿತ್ತು ವೀತಿಹೋತ್ರಗೆ ಪುರವಪ್ರೀತೆನಿಸಿದಾತ ದಿತಿಜಾತರಿಗೆ ಭೀತಿಕರ ||೧|| ಲಂಡ ಕೀಚಕ ಬಕನ ಮಂಡೆಯನು ಒಡೆದುಉದ್ದಂಡ ಮಗಧಾಧಿಪನ ದಂಡವನು ಸೀಳಿಭಂಡ ಕೌರವರ ಶಿರ ಚೆಂಡಾಡಿ ಪ್ರಬಲರಣಮಂಡಲದಿ ಚಂಡರಿಪು ದಂಡಗಳ ಖಂಡಿಸಿದೆ ||೨|| ಸಾಂಗದಲಿ ಮಧ್ವಮತದಂಗವನು ಏರ್ಪಡಿಸಿಕಂಗೆಟ್ಟ ಕುಮತಿ ದುಸ್ಸಂಗಗಳನಳಿದುಗಂಗೆ ಪಿತ ಕೃಷ್ಣಪದ ಭೃಂಗ…
