-
Svaramanana ramani
Composer : Shri Prasannavenkata dasaru ಸ್ವರಮಣನ ರಮಣಿ ತ್ರಿವೇಣಿ |ಸ್ಫುರಣ ಶ್ರೀಹರಿ ಚರಣಧಾರಿಣಿ [ಪ] ಕಲುಷಾಪಹಾರಿಯೆ ಜಲಚರಾನ್ವೇಷಣಲುಬ್ದೆ |ನಿಲಿಸೆನ್ನ ಹೃತ್ತೋಯಜದೊಳ್ ವಳ ಹೊರಗೂ |ನಳಿನನಾಭನ ನೆನೆವ ತಿಳಿಚಿತ್ತ ನಿರ್ಮಲೆ |ವಿಲಾಶೇಯಮಭಿಲಾಷಿಣಿ ಬುಧಶ್ರೇಣಿ [೧] ಉದದಿರಾಜನತೀ ಪ್ರೀತಿಯಾ ಪುತ್ರಿ |ಮದನಾರಿ ಜಟಜಸೂನೆ ಪಾಪೌಘ ದಹನೆ |ಪದಾಬ್ಜ ಪದುಮಕೆನ್ನನು ಭ್ರಮರನೆನಿಸಿ |ಉದದಿ ಮಥನನ ಪದ ಪದುಮವತೋರೆ [೨] ಹರೀತೋಷಲಾಭೆ ಸುಂದರಿ ಸುಭಗೆ |ದರುಶನ ಮಾತ್ರದಿ ತ್ರಿಕರಣ ಶುದ್ಧೀವೆ |ಹಿರಿಪಿಂಗಳಾಧಿಷ್ಠಿತೆ ದೇವಿ ಜಗನ್ಮಾತೆ |ತುರಗಗತಿ ಪ್ರಸನ್ವೆಂಕಟರಾಯನ್ನದಾಯಿತೆ [೩] svaramaNana ramaNi…
-
Vanara vandita Srinivasage
Composer : Asigyaalu Sri Govinda dasaru ವಾನರ ವಂದಿತ ಶ್ರೀನಿವಾಸಗೆ ಬುದ್ಧಿ |ಏನನ್ನ ಹೆಳಬಾರದೇನೇ ತಾಯೀ ನೀ ನನ್ನ | ಪ.| ಶ್ರಿನಿಧಿ ಪರನೆಂದು ನಂಬಿ ಬಂದ |ಬಡ ಪ್ರಾಣಿಯ ಪೊರೆಯೆಂದು ಜಾನಕಿ ದೇವಿಯೆ | ೧ | ಮೊರೆಹೊಕ್ಕವರ ಕರ ಪಿಡಿವೆನೆಂಬೊ |ಘನ ಬಿರುದು ಉಳಿಸಿಕೋ ಎಂದ್ ಹರುಷದಿ ಸಿರಿದೇವಿ | ೨ | ಉರಗ ಶಾಯಿ ಸಿರಿ ಗೋವಿಂದ ವಿಠ್ಠಲ |ಉರಗಾದ್ರಿವರ ನರಹರಿಯೆ ತ್ವರತದಲ್ಲಿ | ೩ | vAnara vaMdita SrInivAsage…
-
Baare bhagyadarasi
Composer : Shri Prasannavenkata dasaru ಬಾರೇ ಭಾಗ್ಯದರಸಿ | ಭವದಘ ಹರಿಸಿ |ಹರಸು ಬಾ ಹರಿಚರಣ ತೋರಿಸಿ [ಪ] ಜಾಂಬೂನದಾಂಬರದೋಳ್ ಪೊಳೆವಂಭ್ರಣಿ |ಶಂಭೋ ಸುರರಿಂಬಿಡುವ ಸಂಭ್ರಮಿ |ಅಂಬುಜ ಸಂಭವ ಪೊಂಬನ ಜನನಿ |ಇಂಬುದೋರು ಕುಂಬಿಣಿಜಾಮಣಿ [೧] ಮನ್ಮಥ ಜನಕನನ್ಯ ಭಜಿಪಗುಣ |ಸನ್ನುತ ರೂಪ ಕೊಂಡಾಡಿ ಪಾಡುವಗೆ |ಹೃನ್ಮನದೋಳಿಹ ಬಿಂಬಮೂರ್ತಿಯಾ |ಕಣ್ಮನ ಸೆಳೆವಂತೆ ತೋರಿ ಪೊರೆಯೆಯಾ [೨] ದಯವಾರುಧಿ ಭವ ಭಯ ದೂರಿರಿಸಲು |ದಯ ಮಾಡಿಸೆ ಈ ಕ್ಷಣ ವೊಲ್ಲೆನ್ನದೆ |ಕಾಯಜ ಪಿತ ಪ್ರಸಂವೆಕಟರಾಯನ |ಜಾಯ ಜಗದಭಿಮಾನಿಯೆ…
