-
Sindhoora vadanaaravinda
Composer : Shri Prasannavenkata dasaru ಸಿಂಧೂರ ವದನಾರವಿಂದ ನಿಲಯೆ [ಪ]ಇಂದಿರಾದೇವಿ ಇಂದೆನ್ನ ಪೊರೆಯೆ [ಅ.ಪ] ಸಾಗರದ ತಳವಡೆದು ಸಾಗಿ ಬರುತೆ ಲಕುಮಿ |ನಾಗಶಯನನ ವರಿಸಿದಿ ನಾಕದರಸಿ |ನಿಗಮ ವೇದ್ಯಳೆ ನಿತ್ಯ ಬಹುತತ್ವಕಭಿಮಾನಿಭಾಗೀರಥಿ ಜನನಿ ಭಗವತ್ ಸ್ವರೂಪಿಣಿ [೧] ಸದಮಲಾನಂದ ಪದ ಸೇವಿಸುವ ಸೌಭಾಗ್ಯ |ಮುದದಿ ಒದಗಿಸಿ ಪೊರೆಯೆ ಮುಕ್ಕುಂದ ಪ್ರೀಯೆ |ಛದ್ಮವೇಷನ ಬುಧಜನ ಗೇಯ ಹರಿ |ಹೃದಯ ಗೆದ್ದಾನಂತ ಪದ್ಮ ಸನ್ನಿಧಿಯೆ [೨] ಪುನ್ನರವ ಮಾಳವ ಸಿರಿ ಪುರಂದರರಾದಿ |ಚೆನ್ನದೋರಿ ದಾಸರಿಗೆ ಮನೆದೈವವಾದಿ |ಘನ್ನ ಸಿರಿ…
-
Varamahalakumi vandisuve
Composer : Shri Prasannavenkata dasaru ವರಮಹಾಲಕುಮಿ ವಂದಿಸುವೆ ನಿನ್ನಡಿಗೆ |ಕರುಣಾಯತಾಕ್ಷಿ ಕರ ಪಿಡಿದು ಪೊರೆಯೆ [ಪ] ಸಿರಿತನದ ಸೌಭಾಗ್ಯ ಹಿರಿಹಿರಿದು ಸುರಿಸಿ |ಹರಸಬೇಕಮ್ಮಾ ಶ್ರೀರಂಗನರಸಿ [ಅ.ಪ] ಆರು ಮೂರೆರಡೊಂದು ಸಾವಿರನ ಸುರ ಸತಿಯೆ |ಆರು ನಾಲಕು ತತ್ವಕಭಿಮಾನಿ ದೇವತೆಯೆ |ಆರೈದು ಶತಕೃತು ಸ್ಮರಜಾತ ಮಾತೆಯೆ |ಆರು ಮೊಗನಯ್ಯನನು ಪೊರೆದನ್ನದಾತೆಯೆ [೧] ಪಂಚಭೇದ ಜ್ಞಾನ ಬೋಧಿಸಿದ ಬುಧಗೊಲಿದ |ಪಂಚಬಾಣನ ಪಿತನ ವಲಿಸಿ ನಲಿದಾ ದೇವಿ ||ಪಂಚೆರಡು ರಾತ್ರಿಲಿ ಮಿಂಚಿ ಪೂಜಿಪ ಲಕುಮಿ |ಪಾಂಚಜನ್ಯವ ಪಿಡಿದ ಕಂಚೀಶನರಸಿ [೨]…
-
Yellamma allave siridevi
Composer : Shri Prasannavenkata dasaru ಯಲ್ಲಮ್ಮ ಅಲ್ಲವೆ ಸಿರಿದೇವಿಎಲ್ಲಾರಮ್ಮನಲ್ಲವೆ [ಪ] ಮುನಿಸಿಕೊಂಡು ಮನದಿನಿಯನೊಡನೆ |ಮನೆಬಿಟ್ಟು ಬಂದಳಾಸನ್ನುತೆ ತನ್ನ ||ತನಯರ ಧನಿ ಮನ್ನಿಸಿ ಮನ ಕರಗಿ |ಇನ್ನೆಲ್ಲಿರದಿಲ್ಲಿ ನೆಲೆಸಿಹ ಜನನಿ [೧] ಬೊಟ್ಟು ತನ್ನ ಬಾಯಲಿಟ್ಟು ಮಲಗಿ ಹರಿ |ಸೃಷ್ಟಿಯ ಕಲ್ಪನೆ ಕಟ್ಟುತಲಿರಲು ನೀ ||ಒಟ್ಟುಗೂಡಿ ವಟಪತ್ರಳಾಗಿ ತನ್ನ |ದೃಷ್ಠಿ ನೆಟ್ಟಳಾ ಅಷ್ಠ ಸಂಪನ್ನೆ [೨] ಉಧೋ ಉಧೋಯೆನ್ನುತ ಸದಮಲಮನದಿ |ಹೃದಯ ತುಂಬಿ ಸದಾ ಆರಾಧಿಪರಿಗೆ ||ವಿಧಿ ವಿಷ್ಣು ಶಿವರಲಿ ಅಧಿಕನೆನಿಪ ನಮ್ಮ |ಮಧುರಿಪು ಪ್ರಸನ್ವೆಂಕಟ ಪದ…
