-
Varamahalakumi vandisuve
Composer : Shri Prasannavenkata dasaru ವರಮಹಾಲಕುಮಿ ವಂದಿಸುವೆ ನಿನ್ನಡಿಗೆ |ಕರುಣಾಯತಾಕ್ಷಿ ಕರ ಪಿಡಿದು ಪೊರೆಯೆ [ಪ] ಸಿರಿತನದ ಸೌಭಾಗ್ಯ ಹಿರಿಹಿರಿದು ಸುರಿಸಿ |ಹರಸಬೇಕಮ್ಮಾ ಶ್ರೀರಂಗನರಸಿ [ಅ.ಪ] ಆರು ಮೂರೆರಡೊಂದು ಸಾವಿರನ ಸುರ ಸತಿಯೆ |ಆರು ನಾಲಕು ತತ್ವಕಭಿಮಾನಿ ದೇವತೆಯೆ |ಆರೈದು ಶತಕೃತು ಸ್ಮರಜಾತ ಮಾತೆಯೆ |ಆರು ಮೊಗನಯ್ಯನನು ಪೊರೆದನ್ನದಾತೆಯೆ [೧] ಪಂಚಭೇದ ಜ್ಞಾನ ಬೋಧಿಸಿದ ಬುಧಗೊಲಿದ |ಪಂಚಬಾಣನ ಪಿತನ ವಲಿಸಿ ನಲಿದಾ ದೇವಿ ||ಪಂಚೆರಡು ರಾತ್ರಿಲಿ ಮಿಂಚಿ ಪೂಜಿಪ ಲಕುಮಿ |ಪಾಂಚಜನ್ಯವ ಪಿಡಿದ ಕಂಚೀಶನರಸಿ [೨]…
