Gowri-Parvati

  • Kruttivasana Rani

    Composer : Shri Ramakanta vittala ಕೃತ್ತಿವಾಸನ ರಾಣಿ ನಿತ್ಯದಲ್ಲಿ ಪ್ರಾರ್ಥಿಪುದುಕಾತ್ಯಾಯಿನಿ ಗೌರಿಯೇ |ಪತ್ಯಂತರ್ಗತ ಹರಿಯ ಅತ್ಯಂತ ಭಕ್ತಿಯಲಿಅರ್ಥಿಯಿಂ ಸ್ಮರಿಪ ತಾಯೇ ತಾಯೇ |ಪ| ಹಿಂದೆ ದಕ್ಷಗೆ ನೀನು ನಂದನೆಯಳೆನಿಸಿಬೆರೆದಿಂದು ಮೌಳಿಯ ಸುಖಿಸುತಾ |ಬಂದು ಕರೆಯದೆ ಪತಿಯು ತಂದೆಯಾಗವಗೈಯೆ ನೊಂದು ತ್ವರಿತದಿ ಸಾಗುತಾ |ವೃಂದಿ ನೀ ಕುಂಡದೋಳ್ ನಿಂತು ಪೋಗಲುಶಿವನು ಅಂದು ಕೋಪವ ತಾಳುತಾ |ಅಂದು ಬರೆ ದಕ್ಷಕನು ಮುಂದೆಮೇನಕೆಯಾ ಬಸುರಿಂದಲಿ ಜನಿಸುತ್ತಾ, ನಿರುತ [೧] ಜಡಿದು ಉಗ್ರ ತಪಗೈದು ಮೃಡ ದೇವರನ್ನೊಲಿಸಿದೃಢ ಸೌಖ್ಯವನು ಹೊಂದಿದೇ |ಒಡನೆ…

  • Parvati palisenna

    Composer : Shri Venugopala dasaru ಪಾರ್ವತಿ ಪಾಲಿಸೆನ್ನ ಮಾನಿನಿ ರನ್ನೆ |ಪಾರ್ವತಿ ಪಾಲಿಸೆನ್ನ || ಪ || ಪಾರ್ವತಿ ಭಕುತರ ಸಾರಥಿ ವಂದಿತೆ |ಸುರಪತಿ ಗಜಮುಖ ಮೂರುತಿ ಮಾತೆ || ಅ.ಪ || ಮನದಭಿಮಾನಿಯೆ ನೆನೆವೆನು ನಿನ್ನನು |ಅನುಗ್ರಹಿಸೆನ್ನನು ಅಂಬುಜಪಾಣಿ || ೧ || ಮಂಗಳೆ ಮೃಡನಂತರಂಗಳೆ ಹರಿಪದ |ಭೃಂಗಳೆ ತುಂಗಳೆ ಪನ್ನಗವೇಣಿ || ೨ || ಗುಣಪೂರ್ಣ ವೇಣುಗೋಪಾಲವಿಠಲನ್ನ |ಕಾಣಿಸಿ ಕೊಡುವಂಥ ಶೂಲಿಯರಾಣಿ || ೩ || pArvati pAlisenna mAnini ranne |pArvati…

  • Arutiya belaga bannire

    Composer : Shri Harapanahalli Bheemavva ಆರುತಿಯ ಬೆಳಗ ಬನ್ನಿರೆ ಪಾರ್ವತಿ ದೇವಿಯರಿಗೆಕೀರುತಿ ಕೊಂಡಾಡುತಲಿ ಪರ್ವತ ರಾಜನ ಮಗಳಿಗೆ ||ಪ|| ವಾಲೆ ಕಟ್ಠಣಿ ಚಿಂತಾಕು ಮ್ಯಾಲೆಸರಿಗೆ ಸರ ಮುತ್ತುಗಳುಕಾಲ ಗೆಜ್ಜೆ ಸರಪಳಿನಿಟ್ಟಫಾಲಾಕ್ಷನ ಮಡದಿಗೆ ||೧|| ರಂಗುಮಾಣಿಕ್ಯದ ಹರಳುಬಂಗಾರದಾಭರಣವಿಟ್ಟುದುಂಡುಮಲ್ಲಿಗೆ ಮುಡಿದು ಕುಳಿತಮಂಗಳಾ ದೇವಿಯರಿಗೆ ||೨|| ದುಂಡು ಮುತ್ತಿನ ಮುಕುರ್ಯವುಚಂದ್ರ ಬಾಳ್ಯ ಬುಗುಡಿನಿಟ್ಟುದುಂಡು ಹರಡಿ ಕಂಕಣ ಕಮಲದ್ವಾರ್ಯನಿಟ್ಟ ವಾರಿಜಾಕ್ಷಿಗೆ ||೩|| ಜಾತಿಮಾಣಿಕ್ಯದ ವಂಕಿನೂತನಾದ ನಾಗಮುರಿಗೆಪ್ರೀತಿಯಲಿ ಪೀತಾಂಬ್ರನುಟ್ಟಜ್ಯೋತಿಯಂತೆ ಹೊಳೆವೊ ಗೌರಿಗೆ ||೪|| ನೀಲವರ್ಣ ಭೀಮೇಶ ಕೃಷ್ಣನಧ್ಯಾನ ಮಾಡುತಲಿನೀಲಕಂಠನ ಸಹಿತ ಕುಳಿತವಿಶಾಲ ನೇತ್ರೆ…

error: Content is protected !!