-
Jaya Jaya Jaya Raya
Composer : Shri Vyasarajaru ಜಯ ಜಯ ಜಯರಾಯ |ದಯದಿಂದ ಪಾಲಿಸೋ ಮಹರಾಯ || ಪ || ಪ್ರತಿಜನ್ಮದಿ ತ್ವಚ್ಚರಣದಲಿಸದ್ರತಿಯನಿತ್ತು ಕಾಯೋ ಕರುಣದಲಿ |ಅತಿ ಬಲದಿಂ ಹೃದ್ಗತ ತಮವಳಿದ್ಉನ್ನತಿಯನು ಕೊಡು ಸನ್ನುತ ಭರದಿ || ೧ || ಅಚ್ಯುತ ಪಾದಾಂಬುಜ ಭೃಂಗನಿನ್ನರ್ಚನೆಯನು ಕೊಡು ಕಮಲಾಂಗ ಗುರು |ತ್ವಚ್ಚರಿತೆಯ ತೋರೋ ಗುಣಸಾಂದ್ರಪ್ರಚ್ಚುತ ದೂಷಣ ಸಚ್ಚಿತ ಭೂಷಣಮೆಚ್ಚಿಪೆ ನಿನ್ನನು ಮುನಿತುಂಗ || ೨ || ಬೃಂದಾರಕ ವೃಂದಾರಾಧ್ಯಅಘವೃಂದವಿದೂರ ಕುಜನಭೇದ್ಯ |ಆನಂದತೀರ್ಥರ ಮತ ಜನಬೋಧ್ಯಸುಂದರ ತಾಂಡವದಿಂದಿಹ ಕೃಷ್ಣನವಂದಿಪ ಸದ್ಗುರು ನಿರವದ್ಯ ||…
-
Tulasi Madhyadi
Composer : Shri Vyasarajaru ಶ್ರೀ ವ್ಯಾಸರಾಯರ ಕೃತಿ, ರಾಗ: ವಸಂತ, ರೂಪಕತಾಳ ತುಳಸಿಮಧ್ಯದಿ ಇರುವ ಕೃಷ್ಣನ |ಬಳಸಿ ನೋಡುವ ಬನ್ನಿರೆ || ಪ || ಗೊಲ್ಲ ಸತಿಯರ ಗಲ್ಲ ಪಿಡಿದು |ಎಲ್ಲ ನಟನೆಯ ತೋರುವ ||ಫುಲ್ಲನಾಭನ ಮೆಲ್ಲ ಮೆಲ್ಲನೆ |ಎಲ್ಲ ಹೆಂಗಳು ನೋಡಿರೆ || ೧ || ಕಾಮಿಜನರಿಗೆ ಕಾಮಿತಾರ್ಥವ |ಪ್ರೇಮದಿಂದಲಿ ಕೊಡುತಿಹ ||ಕಾಮನಯ್ಯನ ಚರಣಕಮಲವ |ನಂಬಿ ಬದುಕುವ ಬನ್ನಿರೆ ||೨|| ಅಂಗರಾಗ ಶ್ರೀರಂಗ ಮಂಗಳ |ಸಿಂಗರದಿ ತಾ ನಿಂತಿಹ ||ಮಂಗಳಾಂಗನ ಮಂಗಳಾರತಿ |ಹೆಂಗಳೆಲ್ಲರು ನೋಡಿರೆ…
-
Elli mayavadane
Composer : Shri Vyasarajaru ಎಲ್ಲಿ ಮಾಯವಾದನೆ ರಂಗಯ್ಯನು ||ಪ||ಎಲ್ಲಿ ಮಾಯವಾದ ಪುಲ್ಲನಾಭ ಕೃಷ್ಣಚೆಲ್ಲೆಗಂಗಳೆಯರು ಹುಡುಕ ಹೋಗುವ ಬನ್ನಿ ||ಅ.ಪ|| ಮಂದಗಮನೆಯರೆಲ್ಲ ಕೃಷ್ಣನಕೂಡೆ ಚಂದದಿ ಇದ್ದೆವಲ್ಲಕಂದರ್ಪನ ಬಾಧೆಗೆ ಗುರಿಯ ಮಾಡಿದನಲ್ಲಮಂದಮತಿಯು ನಮಗೆ ಬಂದು ಒದಗಿತಲ್ಲ ||೧|| ಸರಸಿಜಾಕ್ಷಿಯರು ಕೂಡಿ ಕೃಷ್ಣನ ಕೂಡೆಸರಸವಾಡುತಲಿದ್ದೆವೆಕರೆಕರೆಗೊಳಿಸಿ ಮನ್ಮಥ ಬಾಧೆಗೊಪ್ಪಿಸಿಚರಣ ಸೇವಕರಾದ ತರಳೆಯರನು ಬಿಟ್ಟು ||೨|| ಭಕ್ತವತ್ಸಲ ದೇವನು ತನ್ನವರನ್ನುಅಕ್ಕರದಲಿ ಪೊರೆವನುಸಿಕ್ಕದೆ ಹೋಗನು ಹುಡುಕುತ್ತ ಹೋಗುವಅಕ್ಕಯ್ಯ ಬನ್ನಿರೆ ಉಡುಪಿ ಶ್ರೀಕೃಷ್ಣನು ||೩|| elli mAyavAdane raMgayyanu ||pa||elli mAyavAda pullanABa kRuShNachellegaMgaLeyaru huDuka…
