By Vadirajaru

  • Krishna Kaaliya kaayda

    Composer : Shri Vadirajaru ಕೃಷ್ಣ ಕಾಲಿಯ ಕಾಯ್ದ ಕರುಣಿ ಜಿಷ್ಣು ಸಖನೆ ಕೃಷ್ಣನೆ [ಪ] ಕೃಷ್ಣ ಪೊರೆಯೊ ಎನ್ನ ವಿಷಯ ತೃಷ್ಣೆಯಿಂ ಸಾಯಲೆ ದಮ್ಮಯ್ಯ [ಅ.ಪ] ಹಿಂದೆ ಮಾಡಿದ ಕರ್ಮದಡವಿಯೊಂದಿಗೆ ಸವರುವೆನೊ,ಗೋ-ವಿಂದ ನಿನ್ನ ಕರುಣಸುಧೆ ಇನ್ನೆಂದು ಪಡೆದುಸುಖಿಪೆನೊ,ಇಂದು ಮಾಡಿದ ಅಘಗಳು ಬಲು ದಂದುಗಕೊಳಗಾದೆನೀನು, ಕುಂದು ಕುಜನದೂರ ನಿನ್ನ ಕಂದನೆಂದುಸಲಹೊ ತಂದೆ [೧] ಕಾಮವೆನ್ನ ಕಮಲನಾಭ ಸೀಮೆಗಾಣಲಿಯ್ಯದೊ ನಿಸ್ಸೀಮಮಹಿಮ ಕ್ರೋಧ ಎನ್ನ ಸಾಮವ ನಡುಗಿಸುತಿದೆ,ಭ್ರಮಿತನಾದೆ ಬಲು ಪ್ರೇಮವ ತಪ್ಪಿಸಿ ಸುರಕ್ತಾನು ಹೆ,ದೈವ ಎನ್ನ ಆ ಮಹಾಭಯವ ನಿವಾರಿಸೊ…

  • Vishayase bidalollado

    Composer : Shri Vadirajaru ವಿಷಯಾಸೆ ಬಿಡಲೊಲ್ಲದೋ ದೇವ [ಪ.]ವಸುದೇವಸುತ ನಿನ್ನ ವಶವಾಗೋತನಕ [ಅ.ಪ.] ಉದಯದಲಿ ಎದ್ದು ಹರಿಪದಗಳನು ಸ್ಮರಿಸದಲೆಕುದಿ ಕುದಿ ಪರರನ್ನು ಬೈದು ಸುಯಿದುಮುದದಿಂದ ಮಜ್ಜನವ ಮಾಡದಲೆಕಂಡಕಡೆ ಒದಗಿ ಪರಸದನಕಾಗಿ ಪೋಗಿಮುದದಿಂದ ಗುರು ಹಿರಿಯರಿಗೆ ನಾ ವಂದಿಸದೆಕದನವನು ತೆಗೆದು ಬಂದು ನಿಂದುಇದೆ ಸಾಧನವೆಂದು ಉದರ ನೆವದಲಿ ತಿರುಗಿಸುದತಿಯರ ಸುಖ ಬಡಿಸಿ ಮದನವೆಗ್ಗಳನಾದೆ [೧] ದೇಶದೇಶಕ್ಕೆ ಧನದಾಸೆಗಾಗಿ ತಿರುಗಿಬೇಸರದೆ ಮನೆ ಮನೆಗೆ ಪೋಗಿ ಕೂಗಿಭೂಸುರೋತ್ತಮನು ನಾನೆಂದು ಪರರಮುಂದೆಭೇಶಜವ ಹೇಳಿಕೊಂಡು ಭಂಡುಬೇಸರವ ಗೊಳಿಸಿ ನಿರ್ದೋಶಿ ನೀನೆಂದವನಹೇಸದಲೆ ವಾಸಿ ಪೊಗಳಿ…

  • Enu bandyo jivave

    Composer : Shri Vadirajaru ಏನು ಬಂದ್ಯೋ ಜೀವವೇ ಶರೀರದೊಳು ವ್ಯರ್ಥವಾಗಿ ||ಪ|| ದಾನ ಧರ್ಮ ಮಾಡಲಿಲ್ಲ ದಯಬುದ್ಧಿ ಪುಟ್ಟಲಿಲ್ಲಜ್ಞಾನವರಿತು ಹರಿಪೂಜೆ ಮಾಡಲಿಲ್ಲಜ್ಞಾನಿ ಸುಜ್ಞಾನಿಗಳ ಸನ್ನಿಧಿಯಲ್ಲಿರಲಿಲ್ಲ,ನಿರ್ಮಲ ಮನದಲ್ಲಿ ಒಂದು ದಿನವಿರಲಿಲ್ಲ ||೧|| ಸತಿ ಪುರುಷರು ನಾವು ಸಂತೋಷದಿಂದಿರಲಿಲ್ಲ,ಯತಿಯಾಗಿ ತೀರ್ಥ ಯಾತ್ರೆ ಮಾಡಲಿಲ್ಲಶೃತಿಶಾಸ್ತ್ರ ಪುರಾಣಗಳ ಕಿವಿಗೊಟ್ಟು ಕೇಳಲಿಲ್ಲ,ಮೃತವಾಗೋ ಕಾಲ ಬಂತು ಬರಿದೆ ಮುಪ್ಪಾದೆನಲ್ಲ ||೨|| ಉಂಡು ಸುಖಿಯಲ್ಲ ಉಟ್ಟು ತೊಟ್ಟು ಪರಿಣಾಮ ಇಲ್ಲ,ಕೊಂಡು ಕೊಟ್ಟು ಹರಿಸೇವೆ ಮಾಡಲಿಲ್ಲದುಂಡು ನಾಯಿಯಂತೆ ಮನೆಮನೆಗಳ ತಿರುಗಿ ಕೆಟ್ಟೆನಲ್ಲಮೊಂಡು ಜೋಗಿ ಗುಣಂಗಳ ಬಿಡಿಸೋ ಹಯವದನ…

error: Content is protected !!