ಶ್ರೀವಿಜಯದಾಸಾರ್ಯ ವಿರಚಿತ
ಭಕ್ತರ ಲಕ್ಷಣ ಸಾಧನ ವಿಚಾರ ಸುಳಾದಿ
(ಭಕ್ತರು ಇತರ ಸುಖಾದಿಗಳನ್ನು ಬಯಸದೇ ಕೇವಲ
ಹರಿಯನ್ನೇ ಹೃದಯದಲ್ಲಿಟ್ಟು, ಆ ಬಿಂಬಕ್ರಿಯವೇ
ಮುಖ್ಯವೆಂದು ತಿಳಿದು, ಅನೇಕ ವಿಷಯಗಳು
ಅನುಭೋಗಿಸುತ್ತಿದ್ದರೂ, ಸಕಲ ಕರ್ತೃನಾದ
ಪರಮಾತ್ಮನಲ್ಲೇ ಮನಸ್ಸು ಇಟ್ಟು ಚರಿಸುವರು.)
ರಾಗ: ಸಾವೇರಿ
ಧ್ರುವತಾಳ
ಸತ್ಯಲೋಕದ ಪದವಿ ಸಾರೆ ಸಾರೆವಾದರು ಮೊಗ –
ವೆತ್ತಿ ಲೇಶ ಮಾತ್ರ ನೋಡರಯ್ಯಾ
ಮತ್ತೆ ತಪ ಜನ ಮಹರ್ಲೋಕಾದಿ ಆಳಿಕೆ
ಚಿತ್ತಕೆ ತಾರರು ಒಮ್ಮ್ಯಾದಡೇ
ತತ್ತಳಿಸುವ ಸ್ವರ್ಗ ನಾನಾ ಭೋಗ ಬಂದು
ಹತ್ತಿಲಿ ನಿಂದರೂ ಕೇಳರಯ್ಯಾ
ಅತ್ಯಂತ ಉಪಸರ್ಗ ಅಂಗೈಯಲಿ ಸೇರೆ
ಹತ್ತದೆಂದು ಬೀಸಿ ಬಿಸಾಟುವರು
ಮರ್ತ್ಯಲೋಕದಲ್ಲಿದ್ದ ಪರಿಪರಿ ಸೌಖ್ಯ
ಸುತ್ತ ಕುಣಿದಾಡಿದರು ಸುಮ್ಮನಿಹರೊ
ಚಿತ್ತಜನಯ್ಯನ ಚಿತ್ತದಲ್ಲಿಟ್ಟು
ನಿತ್ಯಪೂರ್ಣರು ನಿಜ ಭಾಗವ –
ತೋತ್ತುಮರಿದನೆಲ್ಲ ಲೆಕ್ಕಿಸರೈ
ಎತ್ತಲಾದರತ್ತ ಹರಿಪಾದ ಸರ್ವದ
ಹೊತ್ತುಕೊಂಡು ಕೊಂಡಾಡುವರಯ್ಯಾ ಅಯ್ಯಾ
ಮೃತ್ಯುಮಾರಿ ಮಾಯೀ ಮಿಗಿಲಾದವರು
ಭೃತ್ಯರಾಗಿ ಜಯ ಜಯವೆಂಬರು
ವೃತ್ತಿ ವಿತ್ತದ ಪರವೆ ಪರಲೋಕವಲ್ಲದೆ
ಸತ್ಯವಂತರಾಗಿ ಸರ್ವಕಾಲಾ
ವತ್ತಿದಗ್ನಿಯಂತೆ ಧರೆ ಮೇಲೆ ತೋರಿ ತಮ್ಮ
ಆತ್ಮದೊಳಗೆ ತಮ್ಮ ಹರಿಯ ಕೊಂಡಾಡುತ
ತತ್ವಮಾರ್ಗದಲಿ ಗುಣಿಸಿ ಏಣಿ –
ಸಿ ತಾರತಮ್ಯ ಬಗೆಯಿಂದ ಸುಖಿಸುವರೊ
ಕರ್ತೃತ್ವ ಎಂಟು ಆವದಾದರೂ ಪ್ರಾ –
ಪುತ್ತವಾದರು ನಗುತಲಿಪ್ಪರದಕೊ
ಕೀರ್ತಿ ಸಂಪಾದಿಸಿ ಹರಿಯ ಗುಣಂಗಳ
ಕೀರ್ತನೆ ಮಾಡುವರು ಮನಬಂದಂತೆ
ಪೆತ್ತ ತಾಯಿ ತಂದೆ ಹರಿಯೆ ನಮಗೆ ನಿತ್ಯ
ಇತ್ತದು ಭುಂಜಿಸಬೇಕೆಂಬರೊ
ಇತ್ತಂಡ ಪ್ರವಹಾದ ಚಿಂತೆ ಇಲ್ಲದೆ ಪ್ರತಿ –
ಉತ್ತರವಿಲ್ಲ ಕೇಳಿ ದೂರದೃಷ್ಟಿ
ಬುತ್ತಿಯೊಳಗೆ ರಸವಾಸನೆ ರುಚಿ ವ್ಯಾ –
ಪುತವಾಗಿದಂತೆ ಹರಿ ಇವರಲ್ಲಿ
ಚಿತ್ರವ್ಯಾಪ್ತನಾಗಿ ಇಪ್ಪ ಆರ್ಪಿತ ಕೈ –
ಕೊಳ್ತಡಿಗಡಿಗೆ ಲಾಲಿಸಿ ಪಾಲಿಸಿ
ಪ್ರತ್ಯಕ್ಷ ತೋರರು ಬಹಿರದಲಿ ತಮ್ಮ
ಸತ್ವಗುಣದ ಕಾರ್ಯ ಲೇಶ ಮಾತ್ರ
ರತ್ನ ಕಾಂಚನ ಧಾನ್ಯ ಪಶು ತುರಗ ಗಜಾಂದಣ
ಸತ್ತಿಗೆ ಸೂರ್ಯಪಾನ ಚಾಮರ ವಸ್ತ್ರ
ವಸ್ತ್ರಾಲಂಕಾರ ರಾಜಕೋಶ ರಾಜಧಾನಿ
ಮುತ್ತುಮಯವಾದ ಪ್ರಸಾದ ದುರ್ಗ
ಭೃತ್ಯವರ್ಗ ಮಂತ್ರಿ ಸಂದಣಿ ಸಾಧನ
ನೃತ್ಯಗಾಯನ ನೀತಿ ನಿರ್ಣಯ ನ್ಯಾಯಾ
ತುತ್ತಿಸುವ ಜನ ಸಂಭ್ರಮವೂ
ಪಿತೃ ಮಾತೃ ಭ್ರಾತಾ ಭಾರ್ಯಾ
ಪುತ್ರಾ ಪುತ್ರಿ ಪೌತ್ರ ಪ್ರಪೌತ್ರ ಬಂಧು ಬಳಗಾ
ಈ ತೆರದಿ ನೋಡಿ ತೃಣ ಬ್ರಹ್ಮಾದಿ ತನಕ
ಹತ್ತಾವರಣ ಸಹಿತಾ ಮೀರಿ ತಿಳಿದು ಉತ್ತು –
ಮೋತ್ತಮ ವಸ್ತ ನಿಶ್ಚೈಯಿಸಿ ಅದರ ಮೇಲೆ
ಹತ್ತು ನುರು ಲಕ್ಷ ಕೋಟ್ಯಾನಂತಾ
ಮೊತ್ತ ಮೇಲಾಗಿ ನೋಡೆ ಪರಮ ಮುಖ್ಯತರ
ವಸ್ತುವೆ ಇದೆ ಎಂದು ಹರಿಪಾದದ
ಅತ್ಯಧಿಕ ಪ್ರೀತಿಯಾಗಿ ಹಗಲಿರುಳು ಬುದ್ಧಿ
ಚಿತ್ತಾರದಲ್ಲಿ ಇಟ್ಟು ಉಚಿತದಲ್ಲಿ
ಹೊತ್ತು ಪೋಗಾಡುವರು ಇದರಿಂದಲ್ಲದೆ ಅನ್ಯ –
ವಾರ್ತಿವೆಂಬೊದಿಲ್ಲ ಕಾಣುವಲ್ಲಿ
ಮೂರ್ತಿಯ ನೋಡುವರು ವೈದಿಕ ಲೌಕೀಕ
ಸ್ಪೂರ್ತಿಯಿಂದಲಿ ಅನುಭವಕೆ ತಂದು
ಪ್ರತ್ಯೇಕ ಪ್ರತ್ಯೇಕ ಜಡಜೀವ ರಾಶಿಯಲ್ಲಿ
ಉತ್ತಮ ಶ್ಲೋಕನೊಬ್ಬ ಕ್ರಿಯಾಭಿನ್ನ
ತತ್ತತ್ಪದಾರ್ಥದಲ್ಲಿ ತದಕಾರನಾಗಿ ನಿಂದು
ಸುತ್ತಿ ಸುತ್ತಿಪ ಜಗವ ನಿರ್ಲೇಪದೀ
ಸತ್ಯ ಜಗತ್ತು ಅಸ್ವತಂತ್ರ ಅಪೂರ್ಣ ಅ –
ನಿತ್ಯ ಅಸಾರವೆಂದು ತಿಳಿದಿಪ್ಪರು
ಆತ್ಮದಾಪೇಕ್ಷವಿಲ್ಲ ಮತ್ತೊಂದು ಗಣಣೆ ಉಂಟೆ
ಆತ್ಮನೆ ಗತಿ ಎಂದು ಆನಂದದಿ
ಪೂರ್ತಿ ಸಂಪದರಾಗಿ ನಾನಾ ಭೋಗ ದಿವ್ಯ ಸಂ –
ಪತ್ತು ಸಾಧನದಿಂದ ಕುಣಿದಾಳ್ವರೂ
ನೆತ್ತಿಯ ಮೇಲೆ ಭಾಂಡಗಳು ಪೊತ್ತುಗೊಂಡು
ನರ್ತನೆ ಮಾಡುವ ಪುರುಷನ ಧ್ಯಾನ
ಎತ್ತಲಿಪ್ಪದೊ ಅದರಂದದಿ ಇವನ ಮನಸು
ಹತ್ತಿ ಬಿಡದಿಪ್ಪದು ಹಾರ್ಯಾಡಲು
ತುತ್ತು ಮೊದಲಾದ ಯತ್ನ ಹರಿಯಿಂದಾ –
ಗುತ್ತಲಿವೇ ಎಂದು ನಲಿದಾಡೋರು
ದತ್ತ ಸ್ವಾತಂತ್ರ ಶ್ರುತಿಗೆ ವಿರೋಧವಾಗದಂತೆ
ಸತ್ಕರ್ಮಾಚರಿಸುವರು ಜನಹಿತಾರ್ಥ
ಹತ್ತಿದ ಪ್ರಾರಬ್ಧ ಭೋಕ್ತನಿಗೆ ಕೇಳು
ಎತ್ತಣದೊ ಪಾಪಪುಣ್ಯ ವಿಚಾರಿಸೆ
ಕೀರ್ತಿ ತಂದುಕೊಡುವ ಇವರಿಗೆ ಕರ್ಮಲೇಶ
ಮಾತ್ರ ಬರಗೊಡನು ಸ್ಮರಣೆಯಿಂದ
ಶತೃಸಂಹಾರ ನಮ್ಮ ವಿಜಯವಿಟ್ಠಲನ್ನ ಪಾ –
ಡುತ್ತ ತಿರುಗುವ ಭಕ್ತನೆ ಮಹಾಧನ್ಯ || ೧ ||
ಮಟ್ಟತಾಳ
ಹದಿನಾಲ್ಕು ಲೋಕಾ ಉದರದೊಳಗೆ ಇಟ್ಟು
ಪದುಮನಾಭನ ಅಥ ಪದುನಾಭನ ತಮ್ಮ
ಹೃದಯದೊಳಗೆ ಇಟ್ಟು ಪದೊಪದಿಗೆ ಧ್ಯಾನ
ಮುದದಿಂದಲಿ ಮಾಡಿ ಸದಮಲರಾಗುವರು
ಇದೆ ದೃಢ ವೈಕುಂಠ ಸದನ ಹಂಬಲಿಸರೈಯ್ಯಾ
ಪದುಮ ಕರ್ನಿಕೆಯಲಿ ವಿಧಿ ರುದ್ರಾದಿಗಳ
ಅದುಭೂತ ರೂಪಗಳ ಬದಿಯಲ್ಲಿ ನಿಲ್ಲಿಸಿ
ಮಧುವೈರಿಗೆ ನಾನಾವಿಧು ಭೂಷಣ ವಸನ
ಮಧುರನ್ನ ಸರ್ಪಿ ದಧಿಪಾಲು ದಿವ್ಯ
ಉದಕ ಸರ್ವಭೋಗ ಮೃದುತರವಾಗಿ ತ –
ಪ್ಪದಲೆ ಕಲ್ಪಿಸಿ ಮಹಾ
ಸುಧಿಯಿಂದಲಿ ಚಿತ್ತದಲಿ ಅರ್ಪಿಸುವರು
ಇದರಿಂದಲೆ ಸರ್ವದ ತೃಪ್ತಿಯಾಗಿ
ಬುಧಜನರ ಕೂಡ ಹುದುಗಿಕೊಂಡಿಪ್ಪರೈ
ಮದನ ವೈರಿನುತ ವಿಜಯವಿಟ್ಠಲರೇಯನ
ಪಾದ ದುರ್ಗಾಶ್ರಯದ ಅಧಟರು ಅನುದಿನಾ || ೨ ||
ತ್ರಿವಿಡಿತಾಳ
ನರಕಾಗಿರಕಾ ಕರ್ಮಾಗಿರ್ಮಾ
ದುರಿತಾಗಿರಿತಾ ದುಃಖಾಗಿಃಖಾ
ಜರಠಾಗಿರಠಾ ಜಾಡ್ಯಾಗೀಡ್ಯಾ ರೋಗಾಗೀಗಾ
ನರಜನ್ಮಗಿರಜನ್ಮಾ ಕ್ರೂರಾಗೀರಾ
ಮರಹುಗಿರಹು ಮಂದಾಗಿಂದಾ ವಿಷಯಾಗಿಷಯಾ
ನಿರಯಾಗಿರಯಾ ಭೀತಿಗೀತಿ
ಮರಣಾಗಿರಣಾ ಭ್ರಾಂತಿಗೀಂತಿ ಬಾಧೆಗೀಧೆ
ಕೊರತಿಗಿರತಿ ಮಾಯಾಗೀಯಾ
ಗರಳಾಗಿರಳಾ ಹೇಯಾಗೀಯಾ ಗಜಾಗಿಜಾ
ಬರಗಾಲಾಗಿರಗಾಲಾ ಛಿದ್ರಾಗಿದ್ರಾ
ದುರುಳಾಗಿರಳಾ ಭಟರುಗಿಟರು ಘೋರಾಗೀರಾ
ನಿರಬಂಧಾಗಿರಬಂಧಾ ಹಾಸ್ಯಾಗೀಸ್ಯಾ
ಪರಿಪರಿ ಸುಖ ದುಃಖ ಬಂದು ತಾಕಿದರೂ ಜ –
ಝ್ಜರಿಸದೆ ಇಪ್ಪರು ಹಗಲಿರಳೂ
ಹರಿ ಶರಣರಿಗೆ ಆವದಾದರು ಗಣಣೆ
ಕರಿಯಂತೆ ತಿರುಗುವರು ದೇಹ ಮರದೂ
ಹರಿಮೂರ್ತಿಯಲ್ಲದೆ ಮತ್ತೊಂದು ವಸ್ತುವ
ಧರೆಯೊಳು ಕಾಣರು ಒಮ್ಮ್ಯಾದರೂ
ಪರಿಣಾಮದ ದೋಷ ಬಯಸೂವರಲ್ಲದೆ
ಅರಲವ ಎಹದಾಲೋಚನೆ ಇಲ್ಲವೊ
ಸರ್ವರಾಧಾರಕ ವಿಜಯವಿಟ್ಠಲನ ಹೃತ್ –
ಸರಸಿಜದಲ್ಲಿ ನೋಡಿ ವೈಕುಂಠಾಪೇಕ್ಷಿಸರು || ೩ ||
ಅಟ್ಟತಾಳ
ಹರಿಯಿಂದ ನೋಡೋರು, ಹರಿಯಿಂದ ಕೊಂಬೋರು
ಹರಿಯಿಂದ ಆಡೋರು ಆಡಿಸಿ ಕೊಂಬೋರು
ಹರಿಯಿಂದ ಕೇಳೋರು, ಕೇಳಿಸಿಕೊಂಬೋರು
ಹರಿಯಿಂದ ಪಿಡಿವರು, ಪಿಡಿಸಿಕೊಂಬುವರೆಲ್ಲಾ
ಹರಿಯಿಂದ ನಡೆವರು, ನಡಿಸಿಕೊಂಬುವರು
ಹರಿಯಿಂದ ಅಪ್ಪೋರು, ಅಪ್ಪಿಸಿಕೊಂಬೋರು
ಹರಿಯಿಂದ ಹೇಳೋರು, ಹೇಳಿಸಿಕೊಂಬೋರು
ಹರಿಯಿಂದ ಕೊಡುವರು, ಕೊಳ್ಳಿಸಿಕೊಂಬುವರೆಲ್ಲಾ
ಹರಿಯಿಂದ ಸರ್ವಪ್ರಯೋಜನ, ಮಾ –
ಡೋರು ಮಾಡಿಸಿಕೊಂಬೋರು
ಹರಿ ಕೊಡಲು ಉಂಟು ಕೊಡದಿದ್ದರೆ ಇಲ್ಲಾ
ಹರಿಯೆ ಪರಮ ಮುಖ್ಯ, ಹರಿವ್ಯಾಪಾರದ
ವಿರಹಿತ ತೃಣ ಒಂದು ಚರಿಸಲಾಪದೆ
ಸರ್ವಭೇದ ನಮ್ಮ ವಿಜಯವಿಟ್ಠಲನ್ನ
ಸ್ಮರಣೆ ಸಮಸ್ತ ವಿಧಿ ಎಂದು ತಿಳಿದಿರುವರೂ || ೪ ||
ಆದಿತಾಳ
ಹರಿಯವೊಳಗಿಪ್ಪರು ಹರಿಯ ಪೊತ್ತಿಹರೂ
ಹರಿಯ ಅಂತರದಲ್ಲಿ ನಿಲ್ಲಿಸಿಕೊಂಡಿಹರು
ಹರಿಗೆ ಬಲ್ಲಿದರಾಗಿ ಸುತ್ತಿಹರು
ಹರಿಯ ಲೆಕ್ಕಿಸದಲೆ ಹರಿಹರಿದಾಡೊರು
ಹರಿನಾಮ ಜೀವನ ಪಾವನ ತ್ರಿಭುವನ
ಹರಿನಾಮ ಸರ್ವದ ಜಪತಪ ನೇಮನಿಷ್ಠ
ಹರಿಗೆ ಸಾಮ್ಯಧಿಕ್ಯ ಇಲ್ಲವಿಲ್ಲವೆಂದು
ಕರಣಶುದ್ಧಿಯಲಿಂದ ಕೊಂಡಾಡಿ ಕೊಂಡಾಡಿ
ಪರಮೈಶ್ವರ್ಯ ಮೂರ್ತಿ ವಿಜಯವಿಟ್ಠಲರೇಯ
ಸರಿ ಸರಿ ಸರಿ ಎಂದು ಬೇಕಾದಂತಿಪ್ಪರು || ೫ ||
ಜತೆ
ಏಕಾನೇಕ ಹರಿ ಎಲ್ಲ ಕಾಲದಲೆಂದು
ಲೋಕಾಭಿನ್ನ ವಿಜಯವಿಟ್ಠಲನ್ನ ನಂಬಿರೋ ||
SrIvijayadAsArya viracita
Baktara lakShaNa sAdhana vicAra suLAdi
(Baktaru itara suKAdigaLannu bayasadE kEvala
hariyannE hRudayadalliTTu, A biMbakriyavE
muKyaveMdu tiLidu, anEka viShayagaLu
anuBOgisuttiddarU, sakala kartRunAda
paramAtmanallE manassu iTTu carisuvaru.)
rAga: sAvEri
dhruvatALa
satyalOkada padavi sAre sArevAdaru moga –
vetti lESa mAtra nODarayyA
matte tapa jana maharlOkAdi ALike
cittake tAraru ommyAdaDE
tattaLisuva svarga nAnA BOga baMdu
hattili niMdarU kELarayyA
atyaMta upasarga aMgaiyali sEre
hattadeMdu bIsi bisATuvaru
martyalOkadallidda paripari sauKya
sutta kuNidADidaru summaniharo
cittajanayyana cittadalliTTu
nityapUrNaru nija BAgava –
tOttumaridanella lekkisarai
ettalAdaratta haripAda sarvada
hottukoMDu koMDADuvarayyA ayyA
mRutyumAri mAyI migilAdavaru
BRutyarAgi jaya jayaveMbaru
vRutti vittada parave paralOkavallade
satyavaMtarAgi sarvakAlA
vattidagniyaMte dhare mEle tOri tamma
AtmadoLage tamma hariya koMDADuta
tatvamArgadali guNisi ENi –
si tAratamya bageyiMda suKisuvaro
kartRutva eMTu AvadAdarU prA –
puttavAdaru nagutalipparadako
kIrti saMpAdisi hariya guNaMgaLa
kIrtane mADuvaru manabaMdaMte
petta tAyi taMde hariye namage nitya
ittadu BuMjisabEkeMbaro
ittaMDa pravahAda ciMte illade prati –
uttaravilla kELi dUradRuShTi
buttiyoLage rasavAsane ruci vyA –
putavAgidaMte hari ivaralli
citravyAptanAgi ippa Arpita kai –
koLtaDigaDige lAlisi pAlisi
pratyakSha tOraru bahiradali tamma
satvaguNada kArya lESa mAtra
ratna kAMcana dhAnya paSu turaga gajAMdaNa
sattige sUryapAna cAmara vastra
vastrAlaMkAra rAjakOSa rAjadhAni
muttumayavAda prasAda durga
BRutyavarga maMtri saMdaNi sAdhana
nRutyagAyana nIti nirNaya nyAyA
tuttisuva jana saMBramavU
pitRu mAtRu BrAtA BAryA
putrA putri pautra prapautra baMdhu baLagA
I teradi nODi tRuNa brahmAdi tanaka
hattAvaraNa sahitA mIri tiLidu uttu –
mOttama vasta niScaiyisi adara mEle
hattu nuru lakSha kOTyAnaMtA
motta mElAgi nODe parama muKyatara
vastuve ide eMdu haripAdada
atyadhika prItiyAgi hagaliruLu buddhi
cittAradalli iTTu ucitadalli
hottu pOgADuvaru idariMdallade anya –
vArtiveMbodilla kANuvalli
mUrtiya nODuvaru vaidika laukIka
spUrtiyiMdali anuBavake taMdu
pratyEka pratyEka jaDajIva rASiyalli
uttama SlOkanobba kriyABinna
tattatpadArthadalli tadakAranAgi niMdu
sutti suttipa jagava nirlEpadI
satya jagattu asvataMtra apUrNa a –
nitya asAraveMdu tiLidipparu
AtmadApEkShavilla mattoMdu gaNaNe uMTe
Atmane gati eMdu AnaMdadi
pUrti saMpadarAgi nAnA BOga divya saM –
pattu sAdhanadiMda kuNidALvarU
nettiya mEle BAMDagaLu pottugoMDu
nartane mADuva puruShana dhyAna
ettalippado adaraMdadi ivana manasu
hatti biDadippadu hAryADalu
tuttu modalAda yatna hariyiMdA –
guttalivE eMdu nalidADOru
datta svAtaMtra Srutige virOdhavAgadaMte
satkarmAcarisuvaru janahitArtha
hattida prArabdha BOktanige kELu
ettaNado pApapuNya vicArise
kIrti taMdukoDuva ivarige karmalESa
mAtra baragoDanu smaraNeyiMda
SatRusaMhAra namma vijayaviTThalanna pA –
Dutta tiruguva Baktane mahAdhanya || 1 ||
maTTatALa
hadinAlku lOkA udaradoLage iTTu
padumanABana atha padunABana tamma
hRudayadoLage iTTu padopadige dhyAna
mudadiMdali mADi sadamalarAguvaru
ide dRuDha vaikuMTha sadana haMbalisaraiyyA
paduma karnikeyali vidhi rudrAdigaLa
aduBUta rUpagaLa badiyalli nillisi
madhuvairige nAnAvidhu BUShaNa vasana
madhuranna sarpi dadhipAlu divya
udaka sarvaBOga mRudutaravAgi ta –
ppadale kalpisi mahA
sudhiyiMdali cittadali arpisuvaru
idariMdale sarvada tRuptiyAgi
budhajanara kUDa hudugikoMDipparai
madana vairinuta vijayaviTThalarEyana
pAda durgASrayada adhaTaru anudinA || 2 ||
triviDitALa
narakAgirakA karmAgirmA
duritAgiritA duHKAgiHKA
jaraThAgiraThA jADyAgIDyA rOgAgIgA
narajanmagirajanmA krUrAgIrA
marahugirahu maMdAgiMdA viShayAgiShayA
nirayAgirayA BItigIti
maraNAgiraNA BrAMtigIMti bAdhegIdhe
koratigirati mAyAgIyA
garaLAgiraLA hEyAgIyA gajAgijA
baragAlAgiragAlA CidrAgidrA
duruLAgiraLA BaTarugiTaru GOrAgIrA
nirabaMdhAgirabaMdhA hAsyAgIsyA
paripari suKa duHKa baMdu tAkidarU ja –
Jjarisade ipparu hagaliraLU
hari SaraNarige AvadAdaru gaNaNe
kariyaMte tiruguvaru dEha maradU
harimUrtiyallade mattoMdu vastuva
dhareyoLu kANaru ommyAdarU
pariNAmada dOSha bayasUvarallade
aralava ehadAlOcane illavo
sarvarAdhAraka vijayaviTThalana hRut –
sarasijadalli nODi vaikuMThApEkShisaru || 3 ||
aTTatALa
hariyiMda nODOru, hariyiMda koMbOru
hariyiMda ADOru ADisi koMbOru
hariyiMda kELOru, kELisikoMbOru
hariyiMda piDivaru, piDisikoMbuvarellA
hariyiMda naDevaru, naDisikoMbuvaru
hariyiMda appOru, appisikoMbOru
hariyiMda hELOru, hELisikoMbOru
hariyiMda koDuvaru, koLLisikoMbuvarellA
hariyiMda sarvaprayOjana, mA –
DOru mADisikoMbOru
hari koDalu uMTu koDadiddare illA
hariye parama muKya, harivyApArada
virahita tRuNa oMdu carisalApade
sarvaBEda namma vijayaviTThalanna
smaraNe samasta vidhi eMdu tiLidiruvarU || 4 ||
AditALa
hariyavoLagipparu hariya pottiharU
hariya aMtaradalli nillisikoMDiharu
harige ballidarAgi suttiharu
hariya lekkisadale hariharidADoru
harinAma jIvana pAvana triBuvana
harinAma sarvada japatapa nEmaniShTha
harige sAmyadhikya illavillaveMdu
karaNaSuddhiyaliMda koMDADi koMDADi
paramaiSvarya mUrti vijayaviTThalarEya
sari sari sari eMdu bEkAdaMtipparu || 5 ||
jate
EkAnEka hari ella kAladaleMdu
lOkABinna vijayaviTThalanna naMbirO ||

Leave a Reply
You must be logged in to post a comment.