Bimbaparoksha Stotra suladi – Vijayadasaru

Smt.Nandini Sripad

ಶ್ರೀವಿಜಯದಾಸಾರ್ಯ ವಿರಚಿತ ಬಿಂಬಾಪರೋಕ್ಷ ಸ್ತೋತ್ರ ಸುಳಾದಿ
ರಾಗ: ಭೌಳಿ
(ಈ ಶರೀರವು ಕ್ರಿಮಿರಾಶಿಯೆಂಬುದನ್ನು ತಿಳಿಯಲಿಲ್ಲ. ಡಂಭಕ ದಾಸನಾಗಿ ಹಣಕ್ಕಾಗಿ ಹೆಣಗಿದೆ, ನಿನ್ನ ಸ್ಮರಣೆಗೆ ತಾರಕವೆಂಬುದನ್ನು ಮರೆತೆ, ನಾನು ದೋಷಕಾರಿ, ಬದ್ಧ, ಆಸೆಬುರುಕನಾದ ಹೇಸಿ ಮಾನವನು. ನನ್ನ ಪೋಷಣೆಯ ಭಾರ ನಿನಗೆ ಸೇರಿದ್ದು. ದೋಷಗಳನ್ನು ದೂರೋಡಿಸಿ ಸದಾ ಹೃದಯದಲ್ಲಿ ವಾಸವಾಗಿದ್ದ ನಿನ್ನ ಸ್ಮೃತಿ ಕೊಟ್ಟು ಭಕ್ತಿಗೆ ಭೂಷಣನಾಗು ಸ್ವಾಮೀ.
ಆತ್ಮನಾಮಕ ಪ್ರಾಜ್ಞಮೂರ್ತಿಯೇ, ನಿನ್ನ ಬಿಂಬಮೂರ್ತಿಯನ್ನು ತೋರಿ, ಭವಪಾಶ ಹರಿದು ಜ್ಞಾನ ಸಂಭವಿಸುವಂತೆ ಅನುಗ್ರಹಿಸು.)

ಧ್ರುವತಾಳ

ಸುಳಿಕುಮಾಯದ ನಡುಸುಳಿಯಿಂದ ಕಡೆ ಮಾಡಿ
ಸುಳಿಸುವದಾಲಿಸು ಸುಲಭರೊಡಿಯಾ
ಸುಳಿಸದಿರಿಲ್ಲಿಯೆ ಸುಳಿದಿನಾವಿದ್ದರು
ಸುಳವಾಗಿ ಮಾಡಿ ತೀರಿಸುವದು ಜೀಯಾ
ಸುಳವು ಕಾಣದಿದ್ದ ಶುದ್ಧ ಮುಗ್ಧಗೊಲಿದು
ಸುಳಿಯೊ ಸುಹೃತ್ತಮ ನಾಮಾ ವಿಜಯವಿಟ್ಠಲರೇಯಾ
ಸುಳವಿನೊಳಿಗೆ ಇಂದು ದೀನ ಜನಬಂಧು || ೧ ||

ಮಟ್ಟತಾಳ

ಒಂದಾನು ಒಂದು ದಿನವಾದರು ನಿನ್ನ
ಬಿಂದು ಮಾತುರ ನಾಲಿಗಿಂದ ನೆನೆದು ನಾಮ
ಪೊಂದೀಗಾ ಪೊಗಳದೆ ಇಂದು ಕಿಂಕರನೆಂದು
ಮಂದಿಯೊಳಗೆ ನೋಡಿದಿಂದು ತುದಿ ಫಲವ
ಬಂದು ಹೆಳವ ನೋಡಿ ತಿಂದೇನೆಂತೆಂಬೊ
ಮಂದಮತಿಯಾದೆ ಮುಂದೆ ಸೂಚಿಸದಂತೆ
ತಂದೆ ಸುಹೃತನಾಮ ವಿಜಯವಿಟ್ಠಲ ಆವಾ –
ನಂದದಲೆ ಬಯಸಿ ವಂದಿಸಿದೆ ನಿನ್ನಾ || ೨ ||

ರೂಪಕತಾಳ

ಈ ಶರೀರವು ಕ್ರಿಮಿ ರಾಶಿ ಎನಗೆ ನಿನ್ನ
ಸಾಸಿರನಾಮಾ ಕಾಣಾಸಿಯಾಗಿರಲಿ
ಲೇಸುವುಳ್ಳನಕಾ ನಾ ವಾಸಾವಾಗಿಪ್ಪೆನೊ
ದೇಶದೊಳು ಡಂಭಕದ ದಾಸನಾಗಿ
ರಾಶಿ ಹಾಕಿದ ಹಣ ಏಸು ಇದ್ದರೇನು
ಕಾಸಿಗೆ ಪೋಗಾದಾದೊಂದಾರಿರದೆ
ಕೇಶವ ನಿನಗಿನ್ನು ಮೀಸಲಾ ದಾಸರು
ವಾಶಯಾಗಿದ್ದರು ಆ ಸರ್ವರೊಳಗೊಬ್ಬ
ದೋಷಕಾರಿ ನಾನು ಪಾಶಬದ್ಧಕ ನಾನು
ಹೇಸಿ ಮಾನವ ನಾನು ಆಸೆಬಡಕ ನಾನು
ಈಸು ಗುಣವುಳ್ಳ ಕ್ಲೇಶಾಧಿಕಾರನ್ನ
ಪೋಷಣೆ ನಿನ್ನದು ಬೀಸಿ ಬಿಸಾಟದಿರು
ನೀ ಸೇರಿ ವೊಳಗೆ ಪ್ರಕಾಶಮಾನನಾಗಿ
ಭೂಷಾ ವಿಜಯವಿಟ್ಠಲೇಶ ಕರುಣದಿಂದ
ವಾಸವಾಗಿದ್ದೆನ್ನ ದೋಷವ ಹಿಂಗಿಸಿ
ಸೂಸುವ ಭಕ್ತಿಗೆ ಭೂಷಣನಾಗೋ || ೩ ||

ಝಂಪಿತಾಳ

ಭಕುತ ಪ್ರಲ್ಹಾದನು ನಿನಗೇನು ಇತ್ತನು
ಶುಕ ಮಹಾಮುನಿಪ ನಿನಗೇನು ತಂದುಕೊಟ್ಟ
ರುಕುಮಾಂಗನುಪಕಾರ ನಿನಗೇನು ಮಾಡಿದ
ಮಖಶತನು ನಿನಗೇನು ಊಟವನುಣಿಸಿದಾ
ಸುಖ ಬಡಿಸಿದನು ನಾರದಮುನಿ ನಿನಗೇನು
ಮಕರ ತೋರಣವ ಕಟ್ಟಿದನೇನೋ ನದಿಸುತಾ
ಶಿಖರವೆತ್ತಿದನೇನೋ ಲಂಕಾಧೀಶನು ಬಂದು
ಸಕಲ ಸುರರು ನಿನ್ನ ವಕ್ಕಲಾ ಗೈಸಿದರೆ
ಅಕಟ ನಾ ನಿನಗೇನು ಭಕುತಿ ಮಾಡದೆ ಪೋದೆ
ಲಕುಮಿವಲ್ಲಭ ಎನ್ನ ವಿಕಳಮತಿಯೊಳಗದ್ದಿ
ಕಕ್ಕಸ ಬಡಿಸೋದು ಚಕಿತತನವೇ ದೇವ
ತ್ರಿಕಕುಬ್ಧ ನಾಮ ಸಿರಿ ವಿಜಯವಿಟ್ಠಲ ತಂದೆ
ವಿಕಸಿತ ಜ್ಞಾನಕ್ಕೆ ಅಂತರಂಗದಲ್ಲೀ
ಮಕರಂದನಾಗೋ ಪಾದಕ್ಕೆ ನಮಿಸುವೆನು || ೪ ||

ತ್ರಿವಿಡಿತಾಳ

ಅವರೀಗ ಕರಿಯಲು ಅಂತರ ಬಾಹಿರ
ಅವತಾರಗಳಿಂದಲ್ಲಿ ಪೊಳದು ನಿಂದು
ಅವರವರ ವಾಸನಾ ತೀರಿಸಿ ಮನೋಭೀಷ್ಟೆ
ಅವರಿಗೆ ನೀವೇಯೋ ಅವರಂತೆ ನಾನಲ್ಲಾ
ಅವರಿಂದಲಾನಂತ ಸೇವೆ ನಿಮಗಾಯಿತು
ಅವತ್ತ ಗುಣದವನಿಂದ ಎಂದು ಪೂರ್ತಿ
ಅವರ ಸೇವಿಯಾದೀತು ಅವರಿಗೆ ಪ್ರೇರಿಸಿದ್ದಾ
ಅವರ ದಾಸಾನುದಾಸ ಎನ್ನ ಸೇವೆಯಾ ರೀತ್ಯಾ
ತವ ಬಿಂಬಮೂರ್ತಿಯ ತೋರೋ ಭೂತಭವ್ಯ –
ಭವನ್ನಾಥ ನಾಮ ಶ್ರೀವಿಜಯವಿಟ್ಠಲ ಎನ್ನ
ಭವಪಾಶವ ಹರಿದು ಸಂಭವಿಸಲಿ ಜ್ಞಾನ || ೫ ||

ಅಟ್ಟತಾಳ

ಆತುಮ ಮೂರುತಿ ಪ್ರಮಾಣವಂಗುಟಿ –
ಮಾತುರ ಮೂರುತಿ ದೇಹ ದೇಹಿಯಲ್ಲಿ
ತತು ಪ್ರಮಾಣ ಶೋಭಿಸುತಿರೇ
ಆತುಮ ನಾಮಕ ಪ್ರಾಜ್ಞ ಮೂರುತಿಯೇ
ಆತ ನಾನಾ ಬಿಂಬಮೂರುತಿಯಾಗಿ ಪೂಜಿಯ
ಪ್ರೀತಿಯಲ್ಲಿ ಗೊಂಬ ಆತುಮದೊಳಗೆ
ಪಾತಕ ಹರಿಸುತ್ತ ಪತಿತರ ಪೊರೆವುತ್ತ
ಆತುಮ ಯೋನಿ ವಿಜಯವಿಟ್ಠಲರೇಯಾ
ಯಾತರ ಭಯವಿಲ್ಲಾ ಪ್ರಾಯಶ್ಚಿತ್ತವೆ ಇಲ್ಲಾ || ೬ ||

ಆದಿತಾಳ

ಹೆಳವನು ಬಯಸಿದಾ ಫಲವು ಚಲಿಸದೆ ಇರುತಿದ್ದು
ಕೆಳಗೆ ಬೀಳೆ ಪವನದಿಂದ ಸಲೆ ಪಣ್ಣು ದೊರಕಿದಂತೆ
ಮಲಿನಗಳೆದು ಗುರುಗಳೆನಗೆ ಒಲಿದು ತೋರಿಸಿದರಾಳಾದವಗೆ
ಸುಳಿದು ಸುಖದ ವಿಜಯವಿಟ್ಠಲ ಬಲುದೈವಾ ಕಾಯ್ವಾ || ೭ ||

ಜತೆ

ಸಾಸಿರ ಮೂರುತಿ ಶತಾನಂತ ಮೂರುತಿ
ಸಾಸಿರನಯನ ಶ್ರೀವಿಜಯವಿಟ್ಠಲ ಸುಳಿದಾ ||


SrIvijayadAsArya viracita biMbAparOkSha stOtra suLAdi
rAga: BauLi
(I SarIravu krimirASiyeMbudannu tiLiyalilla. DaMBaka dAsanAgi haNakkAgi heNagide, ninna smaraNege tArakaveMbudannu marete, nAnu dOShakAri, baddha, AseburukanAda hEsi mAnavanu. nanna pOShaNeya BAra ninage sEriddu. dOShagaLannu dUrODisi sadA hRudayadalli vAsavAgidda ninna smRuti koTTu Baktige BUShaNanAgu svAmI.
AtmanAmaka prAj~jamUrtiyE, ninna biMbamUrtiyannu tOri, BavapASa haridu j~jAna saMBavisuvaMte anugrahisu.)

dhruvatALa

suLikumAyada naDusuLiyiMda kaDe mADi
suLisuvadAlisu sulaBaroDiyA
suLisadirilliye suLidinAviddaru
suLavAgi mADi tIrisuvadu jIyA
suLavu kANadidda Suddha mugdhagolidu
suLiyo suhRuttama nAmA vijayaviTThalarEyA
suLavinoLige iMdu dIna janabaMdhu || 1 ||

maTTatALa

oMdAnu oMdu dinavAdaru ninna
biMdu mAtura nAligiMda nenedu nAma
poMdIgA pogaLade iMdu kiMkaraneMdu
maMdiyoLage nODidiMdu tudi Palava
baMdu heLava nODi tiMdEneMteMbo
maMdamatiyAde muMde sUcisadaMte
taMde suhRutanAma vijayaviTThala AvA –
naMdadale bayasi vaMdiside ninnA || 2 ||

rUpakatALa

I SarIravu krimi rASi enage ninna
sAsiranAmA kANAsiyAgirali
lEsuvuLLanakA nA vAsAvAgippeno
dESadoLu DaMBakada dAsanAgi
rASi hAkida haNa Esu iddarEnu
kAsige pOgAdAdoMdArirade
kESava ninaginnu mIsalA dAsaru
vASayAgiddaru A sarvaroLagobba
dOShakAri nAnu pASabaddhaka nAnu
hEsi mAnava nAnu AsebaDaka nAnu
Isu guNavuLLa klESAdhikAranna
pOShaNe ninnadu bIsi bisATadiru
nI sEri voLage prakASamAnanAgi
BUShA vijayaviTThalESa karuNadiMda
vAsavAgiddenna dOShava hiMgisi
sUsuva Baktige BUShaNanAgO || 3 ||

JaMpitALa

Bakuta pralhAdanu ninagEnu ittanu
Suka mahAmunipa ninagEnu taMdukoTTa
rukumAMganupakAra ninagEnu mADida
maKaSatanu ninagEnu UTavanuNisidA
suKa baDisidanu nAradamuni ninagEnu
makara tOraNava kaTTidanEnO nadisutA
SiKaravettidanEnO laMkAdhISanu baMdu
sakala suraru ninna vakkalA gaisidare
akaTa nA ninagEnu Bakuti mADade pOde
lakumivallaBa enna vikaLamatiyoLagaddi
kakkasa baDisOdu cakitatanavE dEva
trikakubdha nAma siri vijayaviTThala taMde
vikasita j~jAnakke aMtaraMgadallI
makaraMdanAgO pAdakke namisuvenu || 4 ||

triviDitALa

avarIga kariyalu aMtara bAhira
avatAragaLiMdalli poLadu niMdu
avaravara vAsanA tIrisi manOBIShTe
avarige nIvEyO avaraMte nAnallA
avariMdalAnaMta sEve nimagAyitu
avatta guNadavaniMda eMdu pUrti
avara sEviyAdItu avarige prErisiddA
avara dAsAnudAsa enna sEveyA rItyA
tava biMbamUrtiya tOrO BUtaBavya –
BavannAtha nAma SrIvijayaviTThala enna
BavapASava haridu saMBavisali j~jAna || 5 ||

aTTatALa

Atuma mUruti pramANavaMguTi –
mAtura mUruti dEha dEhiyalli
tatu pramANa SOBisutirE
Atuma nAmaka prAj~ja mUrutiyE
Ata nAnA biMbamUrutiyAgi pUjiya
prItiyalli goMba AtumadoLage
pAtaka harisutta patitara porevutta
Atuma yOni vijayaviTThalarEyA
yAtara BayavillA prAyaScittave illA || 6 ||

AditALa

heLavanu bayasidA Palavu calisade irutiddu
keLage bILe pavanadiMda sale paNNu dorakidaMte
malinagaLedu gurugaLenage olidu tOrisidarALAdavage
suLidu suKada vijayaviTThala baludaivA kAyvA || 7 ||

jate

sAsira mUruti SatAnaMta mUruti
sAsiranayana SrIvijayaviTThala suLidA ||

Leave a Reply

You might also like

error: Content is protected !!