Taratamya Suladi – Vijayadasaru

Smt.Nandini Sripad

ಶ್ರೀ ವಿಜಯದಾಸರ ಕೃತ ತಾರತಮ್ಯ ಸುಳಾದಿ
ರಾಗ: ಹಂಸಧ್ವನಿ
ಧ್ರುವತಾಳ
ತೃಣಗುಲ್ಮಲತೆ ತೃಣರಾಜ ಮಿಕ್ಕಾದ ತರು |
ವನಚರ ಖಗ ಮೃಗ ನಾನಾ ಪರಿಯ |
ಮನುಜ ಕ್ಷಿತಿಪ ಮನಜ ಗಂಧರ್ವ ಪರಿಯಂತ |
ಎಣಿಕೆ ಮಾಡಿದರಾಗೆ ಅವಿಭಕ್ತರು |
ಗುಣಿಸಿ ನೋಡಲು ಇದರ ಗಣಿತ ಅಪರಿಮಿತ |
ಕೊನೆ ತಿಳಿದವನಿಲ್ಲ ಎಂದೆಂದಿಗೆ |
ಇನಿತು ಚೇತನಗಳು ಲಕ್ಷಯೆಂಭತ್ತು ನಾಲ್ಕು |
ಜನನ ಪ್ರಭೇದದಿಂದ ಪ್ರಾಚುರ್ಯರು |
ಗುಣದಿಂದ ಓರ್ವರೋರ್ವರಧಿಕವಾಗಿಪ್ಪರು |
ಜನುಮ ಜನುಮದಲ್ಲಿ ವೃತ್ತಿ ಜ್ಞಾನಾ |
ತನು ಭಿನ್ನರಾಗಿ ಪುಟ್ಟುವರು ಧರಣಿ ಮೇಲೆ |
ದಿನ ಪ್ರತಿದಿನ ಕರ್ಮ ವಶದಿಂದಲಿ |
ತನು ಸಮೇತವಲ್ಲದೆ ಏಕಾಂಶದಲ್ಲಿ ಸಲ್ಲಾ |
ಅನುಮಾನ ಇದಕಿಲ್ಲ ಇವರಿಗೆ ಪೆಸರು ಕಾಣೋ |
ಮನದೊಳು ತಿಳಿ ಇವರ ತರುವಾಯದಿ |
ಅನಿಮಿಷ ಗಂಧರ್ವ ಬೊಮ್ಮಾದಿ ಪಿಡಿದು ಯೋ |
ಚನೆ ಮಾಡು ಮೂವತ್ತು ಮೂರು ಕೋಟಿ
ಮಿನಗುತಿಪ್ಪರು ಎಲ್ಲ ಸಾಂಶರು |
ನೆನೆದು ಧನ್ಯನಾಗೊ ನಾನಾ ಪರಿಯಿಂದ |
ಅನುನಯದಲಿ ನಾಲ್ಕು ಬಗೆಯಲಿಪ್ಪಾ |
ಜನರುಂಟು ಮುಖ್ಯಾಮುಖ್ಯ ತಾತ್ವಿಕ ಯೋ |
ಚನೆ ಮಾಡು ಆತಾತ್ವಿಕರಾಜಾನಜರ |
ಗಣನೆಯಾದುದಕೆ ಒಕ್ಕಣಿಸು ವರ್ತಮಾನ |
ವನಜ ಸಂಭವ ನಿಡಿದು ಋಭುಗಣಾಂತ |
ತನವು ಧರಿಪ ಸಂಖ್ಯೆ ಮೂವತ್ತು ಮೂರು ನೂರು |
ಇನಿತರೊಳು ಎರಡು ವಿಧ ಪ್ರಾಮುಖ್ಯರು |
ಘನವಂತ ಜನ ವಿಂಶತಿ ಶತ ಉಳಿದಾದವರು |
ಸನುಮತ ಋಭುಗಣ ತ್ರಿಸಹಸ್ರದ ಮೇಲೆ |
ಎಣಿಸು ನೂರೆಂಭತ್ತು ಜನರು ಒಂದೇ |
ವಿನಯದಿಂದಲಿ ಮುಂದೆ ಅಮುಖ್ಯ ತಾತ್ವಿಕ |
ಜನಕಿಂತ ವೆಗ್ಗಳರು ದೇವತ್ವ ಆದಿಯಲ್ಲಿ |
ಮುನಿಜನ ಮಿಕ್ಕಾದವರ ವಿಭಾಗ ಮಾಡಿ ತೆಗೆದು |
ಮಣಿದು ನಮೋಯೆನ್ನು ಶತಸ್ಥರ್ಗೆ |
ಕನಸೀಲಿ ಮನಸೀಲಿ ಇಲ್ಲಿ ತನಕ ಮುಂ- |
ದಣ ವಿಚಾರವ ಕೇಳು ಕಾರ್ಮಿಕ ಲೋಕಾಗ್ನಿ |
ತನುಜ ಪಾವಕ ಪವಮಾನ ವಿಡಿದು |
ಶನಿ ಪರಿಯಂತ ಆಮುಖ್ಯ ತಾತ್ವಿಕ |
ಗಣವೆನ್ನಿ ಇವರು ಕರ್ಮಜ ಸುರರು |
ಎಣಿಕೆ ಮಾಡು ಇಂತು ಮುನ್ನೂರು ಕಡಿಮೆಯಾಗಿ |
ಗುಣ ಸಹಸ್ರರೆನ್ನು ಮಧ್ಯಮರ |
ಗುಣಪೂರ್ಣ ವಿಜಯವಿಠಲರೇಯನ ಪಾದ |
ವನಜ ಧ್ಯಾನವ ಮಾಡು ಇವರಿವರ ಮಧ್ಯದಲ್ಲಿ || ೧ ||

ಮಟ್ಟತಾಳ
ಮೊದಲಿಗೆ ಪೇಳಿದ ಶತಸ್ಥರೊಳಗಿದ್ದ
ಪದುಮ ಬಾಂಧವನೊಬ್ಬ ಪರ್ಜನ್ಯ ನಾಮಕನು |
ಇದರೊಳಗೆ ಗಣನೆ ಸಿದ್ದವಾಗಿದೆ ಸತ್ಯ |
ಮುದದಿಂದಲಿ ತತ್ವಾಭಿಮಾನಿಗಳ- |
ಲ್ಲದೆ ದೇವತೆಗಳ ಪೆಸರು ಕೊಂಡಾಡುವುದು |
ಉದಕ ಪೂರಿತವಾದ ತೀರ್ಥಾಭಿಮಾನಿಗಳು |
ಅದರ ತರುವಾಯ ಪುಷ್ಕರ ಕರ್ಮಾಭಿಮಾನಿಗಳು |
ಒದಗಿ ಎಣಿಸಬೇಕು ನವ ಕೋಟಿಗೆ ತ್ರಿತತ |
ತ್ರಿದಶ ಸಾವಿರ ಕಡಿಮೆ |
ಬುಧರು ಭಕುತಿಯಿಂದ ವಿವರಗಳಿಲ್ಲಿಗೆ ತ್ರಿ-
ವಿಧವಾಯಿತು ಕೇಳಿ ನವ ಕೋಟಿ ಸಂಖ್ಯಾ |
ಭವ ಸಾಗರ ಹಾರಿ ವಿಜಯವಿಠಲರೇಯ |
ಪವಣೆಯಿಂದಲಿ ಇವರ ಈ ಪರಿ ನಿರ್ಣೈಪ || ೨ ||

ತ್ರಿವಿಡಿತಾಳ
ಅಮರರ ಕುಲದಿಂದ ಪುಟ್ಟಿದನಾಖ್ಯರು |
ಕ್ರಮದಿಂದ ತಿಳಿವುದು ಚತುರ ವಿಂಶತಿ ಕೋಟಿ |
ದ್ರುಮ ಲತೆ ಫಲ ಪುಷ್ಪ ಮಿಕ್ಕಾದವಕೇ ಉ- |
ತ್ತಮರಾಗಿ ಇಪ್ಪರು ಅಂಶದಿಂದ |
ಅಮರ ಮೊಗ ಪುತ್ರರು ಹದಿನಾರು ಸಾವಿರ |
ರಮಣೀಯರಾದ ಅಪ್ಸರ ಸ್ತ್ರೀಯರು ನೂರು |
ವಿಮಲ ತುಂಬುರಾದಿ ಶತ ಗಂಧರ್ವ ಸಹ |
ಸಮನಾಗಿ ಇಪ್ಪರು ಇವರೆ ಅಜಾನಜರಯ್ಯಾ |
ನಮಿಸಿ ಕೊಂಡಾಡುವುದು ಶತ ಕವ್ಯ ಭೋಕ್ತರ |
ಶಮ ದಮೆ ಗುಣವುಳ್ಳ ಸಿದ್ದ ಸಾದ್ಯರು ಸರ್ವ |
ಸಮುದಾಯ ಭೃತ್ಯಾದಿ ಕರ್ಮಕಾರರು ಮತ್ತೆ |
ಅಮಿತ ಪಿತೃ ಗಂಧರ್ವ ಅಪ್ಸರ ಜನರೊಡನೆ |
ಕಮಲ ಕರ್ಣಿಕೆ ವಿಜಯವಿಠ್ಠಲ ಸರ್ವೋ- |
ತ್ತಮ ಚತುರವಿಂಶತಿ ಕೋಟಿ ಜನರ ಪಡೆದ || ೩ ||

ಅಟ್ಟತಾಳ
ಇಪ್ಪತ್ತು ನಾಲ್ಕು ಕೋಟಿ ದೇವ ಕುಲೋದ್ಭವ |
ಒಪ್ಪದಿಂದಲೆ ಉಂಟು ಪ್ರಸಿದ್ಧಾಪ್ರಸಿದ್ದಾ |
ತಪ್ಪದೆ ತಮ ತಮ ಕಾರ್ಯವ ಮಾಡುತ್ತ |
ಮುಪ್ಪು ಇಲ್ಲದೆ ಚರಮ ಭವಿಗಳಯ್ಯಾ |
ಇಪ್ಪರು ಇವರಿಗಿಂದಧಿಕ ನವಕೋಟಿ |
ಸುಪ್ಪವರ್ಣರು ತ್ರಿವಿಧ ಅಧಿಕಾರರು |
ಒಪ್ಪುತಾ ಪ್ರತಿದಿನ ಹರಿಗೆ ಸರ್ವಸ್ವ ಸ-|
ಮರ್ಪಣೆ ಮಾಡೋರು ಸಕಲ ವಿಷಯದಲ್ಲಿ |
ಸರ್ಪಶಯನ ನಮ್ಮ ವಿಜಯವಿಠ್ಠಲ ಜಗ
ದಪ್ಪನಾಗಿ ಅವರವರ ಪಾಲಿಸುವ || ೪ ||

ಆದಿತಾಳ
ಋಷಿಗಳ ಸಹಿತವಾಗಿ ಗಣನೆ ಮಾಡಿ ಎ-|
ಣಿಸು ನೂರಾಮೂವತ್ತು ಮೂರು ಕೋಟಿಗಳನ್ನು |
ಹಸನಾಗಿ ಇವರಿವರ ಭಕ್ತಿ ಜ್ಞಾನ ಕರ್ಮ |
ಬೆಸನೆ ತಿಳಿದು ಪ್ರಸನ್ನೀಕರಿಸಿಕೊಂಡು ಬಾಳು |
ಎಸೆವ ಸಪ್ತ ಭುವನ ಮೇರು ಧ್ರುವ ಲೋಕ ರಂ-|
ಜಿಸುವ ಸ್ವರ್ಗಾದಿ ಸರ್ವ ಬೊಮ್ಮಂಡಾವರಣತನಕ |
ಎಸಳು ಮತಿಯಿಂದ ತಮ ತಮ್ಮ ಯೋಗ್ಯ ಸ್ಥಾನ |
ವಸತಿಯಾಗಿಪ್ಪರು ಅನೇಕ ಬಗೆಯಿಂದ |
ಮಿಸುಕದೆ ನೋಡುವದು ಪ್ರಧಾನ ಸ್ಥಳವೆರಡು |
ಬಿಸಜಾಪ್ತ ಮಂಡಲ ಶರೀರಸ್ಥರೆಂದು |
ಕುಶಲಮತಿಯಿಂದ ಭಜನೆ ಮಾಡೆಲೋ ಮನುಜಾ |
ಪುಸಿಯಲ್ಲ ಇದೆ ಇದೆ ಸಾಧನ ಸಾಧ್ಯ ಸಿದ್ದ |
ವಶವಾಗುವುದು ಸುಲಭ ವಿದ್ಯಪ್ರಾಪ್ತಿಯೆನ್ನು |
ಪಶುಪಾಲಕ ನಮ್ಮ ವಿಜಯವಿಠಲರೇಯ |
ಶಿಶುಗಳಂತೆ ಇಂತು ನೆನೆದವರ ಸಲಹುವಾ || ೫ ||

ಜತೆ
ತೃಣಾಂತವಿಡಿದು ಬೊಮ್ಮಾದಿ ಪರಿಯಂತ ನೆನೆದು |
ಧನ್ಯನಾಗೋ ವಿಜಯವಿಠಲನಿಂದ || ೬ ||


SrI vijayadAsara kRuta tAratamya suLAdi
rAga: haMsadhvani
dhruvatALa
tRuNagulmalate tRuNarAja mikkAda taru |
vanacara Kaga mRuga nAnA pariya |
manuja kShitipa manaja gaMdharva pariyaMta |
eNike mADidarAge aviBaktaru |
guNisi nODalu idara gaNita aparimita |
kone tiLidavanilla eMdeMdige |
initu cEtanagaLu lakShayeMBattu nAlku |
janana praBEdadiMda prAcuryaru |
guNadiMda OrvarOrvaradhikavAgipparu |
januma janumadalli vRutti j~jAnA |
tanu BinnarAgi puTTuvaru dharaNi mEle |
dina pratidina karma vaSadiMdali |
tanu samEtavallade EkAMSadalli sallA |
anumAna idakilla ivarige pesaru kANO |
manadoLu tiLi ivara taruvAyadi |
animiSha gaMdharva bommAdi piDidu yO |
cane mADu mUvattu mUru kOTi
minagutipparu ella sAMSaru |
nenedu dhanyanAgo nAnA pariyiMda |
anunayadali nAlku bageyalippA |
janaruMTu muKyAmuKya tAtvika yO |
cane mADu AtAtvikarAjAnajara |
gaNaneyAdudake okkaNisu vartamAna |
vanaja saMBava niDidu RuBugaNAMta |
tanavu dharipa saMKye mUvattu mUru nUru |
initaroLu eraDu vidha prAmuKyaru |
GanavaMta jana viMSati Sata uLidAdavaru |
sanumata RuBugaNa trisahasrada mEle |
eNisu nUreMBattu janaru oMdE |
vinayadiMdali muMde amuKya tAtvika |
janakiMta veggaLaru dEvatva Adiyalli |
munijana mikkAdavara viBAga mADi tegedu |
maNidu namOyennu Satastharge |
kanasIli manasIli illi tanaka muM- |
daNa vicArava kELu kArmika lOkAgni |
tanuja pAvaka pavamAna viDidu |
Sani pariyaMta AmuKya tAtvika |
gaNavenni ivaru karmaja suraru |
eNike mADu iMtu munnUru kaDimeyAgi |
guNa sahasrarennu madhyamara |
guNapUrNa vijayaviThalarEyana pAda |
vanaja dhyAnava mADu ivarivara madhyadalli || 1 ||

maTTatALa
modalige pELida SatastharoLagidda
paduma bAMdhavanobba parjanya nAmakanu |
idaroLage gaNane siddavAgide satya |
mudadiMdali tatvABimAnigaLa- |
llade dEvategaLa pesaru koMDADuvudu |
udaka pUritavAda tIrthABimAnigaLu |
adara taruvAya puShkara karmABimAnigaLu |
odagi eNisabEku nava kOTige tritata |
tridaSa sAvira kaDime |
budharu BakutiyiMda vivaragaLillige tri-
vidhavAyitu kELi nava kOTi saMKyA |
Bava sAgara hAri vijayaviThalarEya |
pavaNeyiMdali ivara I pari nirNaipa || 2 ||

triviDitALa
amarara kuladiMda puTTidanAKyaru |
kramadiMda tiLivudu catura viMSati kOTi |
druma late Pala puShpa mikkAdavakE u- |
ttamarAgi ipparu aMSadiMda |
amara moga putraru hadinAru sAvira |
ramaNIyarAda apsara strIyaru nUru |
vimala tuMburAdi Sata gaMdharva saha |
samanAgi ipparu ivare ajAnajarayyA |
namisi koMDADuvudu Sata kavya BOktara |
Sama dame guNavuLLa sidda sAdyaru sarva |
samudAya BRutyAdi karmakAraru matte |
amita pitRu gaMdharva apsara janaroDane |
kamala karNike vijayaviThThala sarvO- |
ttama caturaviMSati kOTi janara paDeda || 3 ||

aTTatALa
ippattu nAlku kOTi dEva kulOdBava |
oppadiMdale uMTu prasiddhAprasiddA |
tappade tama tama kAryava mADutta |
muppu illade carama BavigaLayyA |
ipparu ivarigiMdadhika navakOTi |
suppavarNaru trividha adhikAraru |
opputA pratidina harige sarvasva sa-|
marpaNe mADOru sakala viShayadalli |
sarpaSayana namma vijayaviThThala jaga
dappanAgi avaravara pAlisuva || 4 ||

AditALa
RuShigaLa sahitavAgi gaNane mADi e-|
Nisu nUrAmUvattu mUru kOTigaLannu |
hasanAgi ivarivara Bakti j~jAna karma |
besane tiLidu prasannIkarisikoMDu bALu |
eseva sapta Buvana mEru dhruva lOka raM-|
jisuva svargAdi sarva bommaMDAvaraNatanaka |
esaLu matiyiMda tama tamma yOgya sthAna |
vasatiyAgipparu anEka bageyiMda |
misukade nODuvadu pradhAna sthaLaveraDu |
bisajApta maMDala SarIrasthareMdu |
kuSalamatiyiMda Bajane mADelO manujA |
pusiyalla ide ide sAdhana sAdhya sidda |
vaSavAguvudu sulaBa vidyaprAptiyennu |
paSupAlaka namma vijayaviThalarEya |
SiSugaLaMte iMtu nenedavara salahuvA || 5 ||

jate
tRuNAMtaviDidu bommAdi pariyaMta nenedu |
dhanyanAgO vijayaviThalaniMda || 6 ||

Leave a Reply

You might also like

error: Content is protected !!