-
Taratamya Suladi – Vijayadasaru
ಶ್ರೀ ವಿಜಯದಾಸರ ಕೃತ ತಾರತಮ್ಯ ಸುಳಾದಿರಾಗ: ಹಂಸಧ್ವನಿಧ್ರುವತಾಳತೃಣಗುಲ್ಮಲತೆ ತೃಣರಾಜ ಮಿಕ್ಕಾದ ತರು |ವನಚರ ಖಗ ಮೃಗ ನಾನಾ ಪರಿಯ |ಮನುಜ ಕ್ಷಿತಿಪ ಮನಜ ಗಂಧರ್ವ ಪರಿಯಂತ |ಎಣಿಕೆ ಮಾಡಿದರಾಗೆ ಅವಿಭಕ್ತರು |ಗುಣಿಸಿ ನೋಡಲು ಇದರ ಗಣಿತ ಅಪರಿಮಿತ |ಕೊನೆ ತಿಳಿದವನಿಲ್ಲ ಎಂದೆಂದಿಗೆ |ಇನಿತು ಚೇತನಗಳು ಲಕ್ಷಯೆಂಭತ್ತು ನಾಲ್ಕು |ಜನನ ಪ್ರಭೇದದಿಂದ ಪ್ರಾಚುರ್ಯರು |ಗುಣದಿಂದ ಓರ್ವರೋರ್ವರಧಿಕವಾಗಿಪ್ಪರು |ಜನುಮ ಜನುಮದಲ್ಲಿ ವೃತ್ತಿ ಜ್ಞಾನಾ |ತನು ಭಿನ್ನರಾಗಿ ಪುಟ್ಟುವರು ಧರಣಿ ಮೇಲೆ |ದಿನ ಪ್ರತಿದಿನ ಕರ್ಮ ವಶದಿಂದಲಿ |ತನು ಸಮೇತವಲ್ಲದೆ ಏಕಾಂಶದಲ್ಲಿ…
