Composer : Shri Jagannatha dasaru
ದಶಾವತಾರ ಸ್ತೋತ್ರ
ವೇದತತಿಗಳನು ಕದ್ದೊಯ್ದವನ ಕೊಂದು ಪ್ರಳ –
ಯೋದಧಿಯೊಳಗೆ ಚರಿಸಿದಿ | ಚರಿಸಿ ವೈವಸ್ವತನ
ಕಾಯ್ದ ಮಹಮಹಿಮ ದಯವಾಗೋ || ೧ || || ೧೭೯ ||
ಮಂದರಾದ್ರಿಯ ಧರಿಸಿ ಸಿಂಧುಮಥನವ ಮಾಡಿ
ವೃಂದಾರಕರಿಗೆ ಅಮೃತವ | ಅಮೃತವನುಣಿಸಿದ
ಇಂದಿರಾರಾಧ್ಯ ದಯವಾಗೋ || ೨ || || ೧೮೦ ||
ಸೋಮಪನ ನುಡಿ ಕೇಳಿ ಹೇಮಾಂಬಕನ ಕೊಂದಿ
ಭೂಮಿಯ ನೆಗಹಿದಿ ದಾಡಿಂದ | ದಾಡಿಂದ ನೆಗಹಿದ
ಸ್ವಾಮಿ ಭೂವರಹ ದಯವಾಗೋ || ೩ || || ೧೮೧ ||
ಕಂದ ಕರೆಯಲು ಕಂಬದಿಂದುದಿಸಿ ರಕ್ಷಿಸಿದಿ
ವಂದಿಸಿದ ಸುರರ ಸಲಹಿದಿ | ಸಲಹಿದಿ ನರಸಿಂಹ
ತಂದೆ ನೀನೆಮಗೆ ದಯವಾಗೋ || ೪ || || ೧೮೨ ||
ವೈರೋಚನಿಯ ಭೂಮಿ ಮೂರು ಪಾದವು ಬೇಡಿ
ಈರಡಿಯೊಳಗಳೆದೆ ಭೂವ್ಯೋಮ | ಭೂವ್ಯೋಮವಳೆದ ಭಾ –
ಗೀರಥಿಯ ಜನಕ ದಯವಾಗೋ || ೫ || || ೧೮೩ ||
ಕುವಲಯಾಧೀಶ್ವರರ ಬವರಮುಖದಲಿ ಕೊಂದು
ಅವನಿಭಾರವನು ಇಳುಹಿದ | ಇಳುಹಿದ ಸ್ವಾಮಿ ಭಾ –
ರ್ಗವರಾಮ ಎಮಗೆ ದಯವಾಗೋ || ೬ || || ೧೮೪ ||
ಶತಧೃತಿಯ ನುಡಿಗೆ ದಶರಥನ ಗರ್ಭದಿ ಬಂದಿ
ದಿತಿಜರನು ಒರಸಿ ಸುಜನರ | ಸುಜನರನು ಪೊರೆದ ರಘು –
ಪತಿಯೆ ನೀನೊಲಿದು ದಯವಾಗೋ || ೭ || || ೧೮೫ ||
ವಸುದೇವದೇವಕೀಬಸುರಿಲಿ ಜನಿಸಿದಿ
ವಸುಧೆಭಾರವನು ಇಳುಹಿದಿ | ಇಳುಹಿ ಪಾಂಡವರ ಪೋ –
ಷಿಸಿದ ಶ್ರೀಕೃಷ್ಣ ದಯವಾಗೋ || ೮ || || ೧೮೬ ||
ಜಿನನೆಂಬ ದನುಜ ಸಜ್ಜನಕರ್ಮವನು ಮಾಡೆ
ಜನಿಸಿ ಅವರಲ್ಲಿ ದುರ್ಬುದ್ಧಿ | ದುರ್ಬುದ್ಧಿ ಕವಿಸಿದ
ವಿನುತ ಶ್ರೀಬುದ್ಧ ದಯವಾಗೋ || ೯ || || ೧೮೭ ||
ಕಲಿಯ ವ್ಯಾಪಾರ ವೆಗ್ಗಳವಾಗೆ ತಿಳಿದು ’ಶಂ –
ಫಲಿ’ ಎಂಬ ಪುರದಿ ದ್ವಿಜನಲ್ಲಿ | ದ್ವಿಜನಲ್ಲಿ ಜನಿಸಿ ಕಲಿ –
ಮಲವ ಹರಿಸಿದ ಕಲ್ಕಿ ದಯವಾಗೋ || ೧೦ || || ೧೮೮ ||
ಈ ರೀತಿ ಹತ್ತವತಾರದಲಿ ಸಜ್ಜನರ
ನೀ ರಕ್ಷಿಸಿದಿ ಸ್ವಾಮಿ ಜಗನ್ನಾಥ | ಜಗನ್ನಾಥವಿಟ್ಠಲನೆ ಉ –
ದ್ಧಾರ ಮಾಡಯ್ಯ ಭವದಿಂದ || ೧೧ || ೧೮೯ ||
daSAvatAra stOtra
vEdatatigaLanu kaddoydavana koMdu praLa –
yOdadhiyoLage carisidi | carisi vaivasvatana
kAyda mahamahima dayavAgO || 1 || || 179 ||
maMdarAdriya dharisi siMdhumathanava mADi
vRuMdArakarige amRutava | amRutavanuNisida
iMdirArAdhya dayavAgO || 2 || || 180 ||
sOmapana nuDi kELi hEmAMbakana koMdi
BUmiya negahidi dADiMda | dADiMda negahida
svAmi BUvaraha dayavAgO || 3 || || 181 ||
kaMda kareyalu kaMbadiMdudisi rakShisidi
vaMdisida surara salahidi | salahidi narasiMha
taMde nInemage dayavAgO || 4 || || 182 ||
vairOcaniya BUmi mUru pAdavu bEDi
IraDiyoLagaLede BUvyOma | BUvyOmavaLeda BA –
gIrathiya janaka dayavAgO || 5 || || 183 ||
kuvalayAdhISvarara bavaramuKadali koMdu
avaniBAravanu iLuhida | iLuhida svAmi BA –
rgavarAma emage dayavAgO || 6 || || 184 ||
SatadhRutiya nuDige daSarathana garBadi baMdi
ditijaranu orasi sujanara | sujanaranu poreda raGu –
patiye nInolidu dayavAgO || 7 || || 185 ||
vasudEvadEvakIbasurili janisidi
vasudheBAravanu iLuhidi | iLuhi pAMDavara pO –
Shisida SrIkRuShNa dayavAgO || 8 || || 186 ||
jinaneMba danuja sajjanakarmavanu mADe
janisi avaralli durbuddhi | durbuddhi kavisida
vinuta SrIbuddha dayavAgO || 9 || || 187 ||
kaliya vyApAra veggaLavAge tiLidu ‘SaM –
Pali’ eMba puradi dvijanalli | dvijanalli janisi kali –
malava harisida kalki dayavAgO || 10 || || 188 ||
I rIti hattavatAradali sajjanara
nI rakShisidi svAmi jagannAtha | jagannAthaviTThalane u –
ddhAra mADayya BavadiMda || 11 || 189 ||

Leave a Reply
You must be logged in to post a comment.