Bare nammanitanaka

Composer : Shri Indiresha

ಬಾರೆ ನಮ್ಮನಿತನಕ ಭಾಗ್ಯದ ದೇವಿ
ಬಾರೆ ನಮ್ಮನಿತನಕ |ಪ|

ಬಾರೆ ನಮ್ಮನಿತನಕ ಬಹಳ ಕರುಣದಿಂದ
ಜೋಡಿಸಿ ಕರಗಳ ಎರಗುವೆ ಚರಣಕೆ |ಅ ಪ|

ಜರದ ಪೀತಾಂಬರ ನಿರಿಗೆಗಳ್ ಅಳೆಯುತ
ತರುಳನ ಮ್ಯಾಲೆ ತಾಯಿ ಕರುಣವಿಟ್ಟು ಬೇಗ || ೧ ||

ಹರಡಿ ಕಂಕಣ ದುಂಡು ಕರದಲ್ಲಿ ಹೊಳೆಯುತ
ಸರಗಿ ಸರವು ಚಂದ್ರ ಹಾರಗಳ್ ಹೊಳೆಯುತ || ೨ ||

ಮಂದ ಗಮನೆ ನಿನಗೆ ವಂದಿಸಿ ಬೇಡುವೆ
ಇಂದಿರೇಶನ ಕೂಡ ಇಂದು ನಮ್ಮನಿಗಾಗಿ || ೩ ||


bAre nammanitanaka BAgyada dEvi
bAre nammanitanaka |pa|

bAre nammanitanaka bahaLa karuNadiMda
jODisi karagaLa eraguve caraNake |a pa|

jarada pItAMbara nirigegaL aLeyuta
taruLana myAle tAyi karuNaviTTu bEga || 1 ||

haraDi kaMkaNa duMDu karadalli hoLeyuta
saragi saravu caMdra hAragaL hoLeyuta || 2 ||

maMda gamane ninage vaMdisi bEDuve
iMdirESana kUDa iMdu nammanigAgi || 3 ||

Leave a Reply

Your email address will not be published. Required fields are marked *

You might also like

error: Content is protected !!