Composer : Shri Modalkal Sheshadasaru
ಗುರುಗಳ ಮನದಿ ಕಂಡು ಧನ್ಯನಾದೆ |
ಸಿರಿ ಅರಸನಾ ದಾಸರು ವಿಜಯರಾಯರು ||ಪ||
ಶ್ಯಾಮಸುಂದರ ಕಾಯ ನಾಮ ದ್ವಾದಶ ಮುದ್ರೆ |
ವಾಮನ ರೂಪವ ಧರಿಸಿ ಕೋಮಲ ತುಳಸಿಯು |
ಕಮಲಾಕ್ಷಿ ಮಣಿಗಳಿಂದ ವಿಮಲ ಚಿತ್ತದಿ |
ಕಾಮನಯ್ಯನ ಸಾಮಗಾನದಿ ಪೊಗಳುವ ||೧||
ಹಿಂದೆ ಪುರಂದರದಾಸರ ಕಂದನಾಗಿ ಪುಟ್ಟಿ |
ತಂದೆ ವಾಕ್ಯವ ತಾಳಿ ಇಂದು ಧರಿಗೆ ಬಂದು
ಇಂದಿರೇಶನ ಚರಿತ್ರೆಯು ಕುಂದದಲೆ ಬೀರಿ |
ಮಂದ ಮತಿಗಳಿಗೆ ಮಂದರಧರನ ತೋರಿದ ||೨||
ಗುರುಗಳ ಹೃದಯವಾಸ ಗುರುವಿಜಯವಿಠ್ಠಲನ |
ಸಿರಿ ಪಾದ ಪದುಮ ಕರುಣವ ತೋರಿಸಿ |
ಸಾರ ಹೃದಯದಿ ಹರಿಯ ಕೊಂಡಾಡಿಸಿ ಎರಗೆ |
ಪರಮ ಸುಖದೊಳೀರುವಂತೆ ಮಾಡಿದ ||೩||
gurugaLa manadi kaMDu dhanyanAde |
siri arasanA dAsaru vijayarAyaru ||pa||
SyAmasuMdara kAya nAma dvAdaSa mudre |
vAmana rUpava dharisi kOmala tuLasiyu |
kamalAkShi maNigaLiMda vimala cittadi |
kAmanayyana sAmagAnadi pogaLuva ||1||
hiMde puraMdaradAsara kaMdanAgi puTTi |
taMde vAkyava tALi iMdu dharige baMdu
iMdirESana caritreyu kuMdadale bIri |
maMda matigaLige maMdaradharana tOrida ||2||
gurugaLa hRudayavAsa guruvijayaviThThalana |
siri pAda paduma karuNava tOrisi |
sAra hRudayadi hariya koMDADisi erage |
parama suKadoLIruvaMte mADida ||3||
Leave a Reply