Composer : Shri Venkata vittala
ಗಣಪತಿ ಎನ್ನ ಪಾಲಿಸೋ ಗಂಭೀರ
ಗಣಪತಿ ಎನ್ನ ಪಾಲಿಸೋ (ಪ)
ಪಾರ್ವತಿ ನಂದನ ಸುಂದರ ವದನ
ಸರ್ವ ಸುರವಂದ್ಯ ಶಿರಭಾಗುವೆನೋ ||೧||
ಆದಿ ಪೂಜಿತ ನೀನು ಮೋದ ಭಕ್ತರಿಗಿತ್ತು
ಮಾಧವನಲಿ ಮನಸು ಸದಾ ನಿಲಿಸು ನೀ ||೨||
ಪಂಕಜ ನಯನನ ವೆಂಕಟ ವಿಠಲನ
ಕಿಂಕರನೆನಿಸೆನ್ನ ಶಂಕರ ತನಯನೆ ||೩||
gaNapati enna pAlisO gaMBIra
gaNapati enna pAlisO (pa)
pArvati naMdana suMdara vadana
sarva suravaMdya SiraBAguvenO ||1||
Adi pUjita nInu mOda Baktarigittu
mAdhavanali manasu sadA nilisu nee ||2||
paMkaja nayanana veMkaTa viThalana
kiMkaranenisenna SaMkara tanayane ||3||
Leave a Reply