Composer : Shri Gopala dasaru
ಗಜವದನ ಪಾವನ ವಿಘ್ನ ನಾಶನ ||ಪ||
ವರ ಪಾಶಾಂಕುಶಧರ ಪರಮ ದಯಾಳೊ
ಕರುಣಾಪೂರಿತ ಗೌರೀ ಕುಮಾರನೆ ||೧||
ಸುಂದರ ವದನಾರವಿಂದನಯನ
ಘನ-ಸುಂದರಿ ಕಂದನೆ ಬಂದು ರಕ್ಷಿಸೊ ||೨||
ಗೋಪಾಲವಿಠ್ಠಲನ ಅಪಾರ ಭಜಕನೆ
ಶಾಪಾನುಗ್ರಹ ಶಕ್ತಾನೇಕ ಮಹಿಮಾ ||೩||
gajavadana pAvana vighna nAshana ||pa||
vara pASAMkushadhara parama dayALo
karuNApUrita gaurI kumArane ||1||
suMdara vadanAraviMdanayana
ghana-suMdari kaMdane baMdu rakShiso ||2||
gOpAlaviThThalana apAra bhajakane
shApAnugraha shaktAnEka mahimA ||3||
Leave a Reply