Composer : Shri Jagannatha dasaru
ನಿನ್ನ ಸಂಕಲ್ಪಾನುಸಾರ ಮಾಡೊ || ಪ ||
ಎನ್ನ ಸಾಕುವ ಧೊರೆಯೆ ತಿಳಿದು ನೀ ನೋಡಯ್ಯ || ಅ ಪ ||
ಪಾತ್ರನೆಂದೆನಿಸೊ ಬಹು ಪಾಪಾತ್ಮನೆಂದೆನಿಸೊ |
ಶ್ರೋತ್ರಿಯನೆಂದೆನಿಸೊ ಶುಂಠನೆನಿಸೊ ||
ಪುತ್ರಮಿತ್ರಾದ್ಯರಿಂ ಬೈಸೊ ಪೂಜೆಯ ಗೈಸೊ |
ಕರ್ತೃ ನೀ ಜಗಕೆ ಸರ್ವತ್ರ ವ್ಯಾಪಕನೆ || ೧ ||
ಜನರೊಳಗೆ ನೀನಿದ್ದು ಜನ್ಮ ಜನ್ಮಗಳಲ್ಲಿ |
ಗುಣಕಾಲ ಕರ್ಮ ಸ್ವಭಾವಂಗಳಾ ||
ಅನುಸರಿಸಿ ಪುಣ್ಯಪಾಪಗಳ ಮಾಡಿಸಿ ಫಲಗ – |
ಳುಣಿಸಿ ಮುಕ್ತರ ಮಾಡಿ ಪೊರೆವೆ ಕರುಣಾಳೊ || ೨ ||
ಯಾತಕೆನ್ನನು ಇನಿತು ದೂರಕನ ಮಾಡುವಿ ಧ – |
ರಾತಳದೊಳನುದಿನದಿ ಮಾಯಾಪತೇ ||
ಭೀತಿಗೊಂಬುವನಲ್ಲ ಭಯನಿವಾರಣ |
ಜಗನ್ನಾಥವಿಠ್ಠಲನೆ ಜಯಪ್ರದನೆ ಜಗಾದೀಶಾ || ೩ ||
ninna saMkalpAnusAra mADo || pa ||
enna sAkuva dhoreye tiLidu nee nODayya || a pa ||
pAtraneMdeniso bahu pApAtmaneMdeniso |
SrOtriyaneMdeniso SuMThaneniso ||
putramitrAdyariM baiso pUjeya gaiso |
kartRu nI jagake sarvatra vyApakane || 1 ||
janaroLage nIniddu janma janmagaLalli |
guNakAla karma svaBAvaMgaLA ||
anusarisi puNyapApagaLa mADisi Palaga – |
LuNisi muktara mADi poreve karuNALo || 2 ||
yAtakennanu initu dUrakana mADuvi dha – |
rAtaLadoLanudinadi mAyApatE ||
BItigoMbuvanalla BayanivAraNa |
jagannAthaviThThalane jayapradane jagAdISA || 3 ||

Leave a Reply
You must be logged in to post a comment.