Ava rogavu enage

Composer : Shri Gopala dasaru

By Srikanth

Expl by Shri Kesava Rao Tadipatri

ಆವ ರೋಗವು ಎನಗೆ ದೇವ ಧನ್ವಂತ್ರಿ
ಸಾವಧಾನದಿ ಎನ್ನ ಕೈ ಪಿಡಿದು ನೋಡಯ್ಯ ||ಪ||
ಸಾವಧಾನದಿ ಕೈಯ್ಯ ಪಿಡಿದು ನೋಡಯ್ಯ
ಸಾವಧಾನದಿ ಕೈಯ್ಯ ಪಿಡಿದು ನೋಡು

ಹರಿ ಮೂರ್ತಿಗಳು ಎನ್ನ ಕಂಗಳಿಗೆ ಕಾಣಿಸವು
ಹರಿಯ ಕೀರ್ತನೆಯು ಕೇಳಿಸದೆನ್ನ ಕಿವಿಗೆ
ಹರಿ ಮಂತ್ರಸ್ತೋತ್ರ ಬಾರದು ಎನ್ನ ನಾಲಿಗೆಗೆ
ಹರಿಪ್ರಸಾದ ಜಿಹ್ವೆಗೆ ಸವಿಯಾಗದಯ್ಯ ||೧||

ಹರಿಪಾದ ಸೇವೆಗೆನ್ನ ಹಸ್ತಗಳು ಚಲಿಸವು
ಗುರುಹಿರಿಯರ ಅಂಘ್ರಿಗೆ ಶಿರ ಬಾಗದು
ಹರಿಯ ನಿರ್ಮಾಲ್ಯವಾ ಘ್ರಾಣಿಸದು ನಾಸಿಕವು
ಹರಿ ಯಾತ್ರೆಗಳಿಗೆನ್ನ ಕಾಲೇಳವಯ್ಯ ||೨||

ಅನಾಥಬಂಧು ಗೋಪಾಲವಿಠಲರೇಯ
ಎನ್ನ ಭಾಗದ ವೈದ್ಯ ನೀನೆಯಾಗಿ
ಅನಾದಿಕಾಲದ ಭವರೋಗ ಕಳೆಯಯ್ಯ
ನಾನೆಂದಿಗು ಮರೆಯೆ ನೀ ಮಾಡಿದ ಉಪಕಾರ ||೩||


Ava rOgavu enage dEva dhanvaMtri
sAvadhAnadi enna kai piDidu nODayya ||pa||
sAvadhAnadi kaiyya piDidu nODayya
sAvadhAnadi kaiyya piDidu nODu

hari mUrtigaLu enna kaMgaLige kANisavu
hariya kIrtaneyu kELisadenna kivige
hari maMtrastOtra bAradu enna nAligege
hariprasAda jihvege saviyAgadayya ||1||

haripAda sEvegenna hastagaLu calisavu
guruhiriyara aMGrige Sira bAgadu
hariya nirmAlyavA GrANisadu nAsikavu
hari yAtregaLigenna kAlELavayya ||2||

anAthabaMdhu gOpAlaviThalarEya
enna BAgada vaidya nIneyAgi
anAdikAlada BavarOga kaLeyayya
nAneMdigu mareye nI mADida upakAra ||3||

Leave a Reply

You might also like

error: Content is protected !!