Enna binnapa keLo

Composer : Shri Gopaladasaru

By Smt.Shubhalakshmi Rao

ಎನ್ನ ಬಿನ್ನಪ ಕೇಳೊ ಧನ್ವಂತ್ರಿ ದಯಮಾಡೊ
ಸಣ್ಣವನು ಇವ ಕೇವಲ |
ಬನ್ನಬಡಿಸುವ ರೋಗವನ್ನು ಮೋಚನ ಮಾಡಿ
ಚೆನ್ನಾಗಿ ಪಾಲಿಸುವದೊ ಕರುಣಿ ||ಪ||

ಆರೋಗ್ಯ ಆಯುಷ್ಯ ಐಶ್ವರ್ಯವೆಂಬೊ
ಈ ಮೂರು ವಿಧ ವಸ್ತುಗಳು,
ನಾರಾಯಣನ ಭಜಕರಾದವರ,
ಸಾಧನಕೆ ಪೂರ್ಣವಾಗಿಪ್ಪುವೊ,
ಘೋರ ವ್ಯಭಿಚಾರ ಪರನಿಂದೆ ,
ಪರವಿತ್ತಾಪಹಾರ ಮಾಡಿದ ದೋಷದಿ ,
ದರಿದ್ರರಾಗುವರು ಮೂರು ವಿಧದಿಂದಲೆ,
ಕಾರಣನು ನೀನೆ ,
ದುಷ್ಕರ್ಮ ಪರಿಹರಿಸೊ, ಸ್ವಾಮಿ ||೧||

ವಸುಮತಿಯ ಮೇಲಿನ್ನು ಅಸುರಜನರೆ ಬಹಳ,
ವಶವಲ್ಲ ಕಲಿಯ ಬಾಧೆ,
ಬಿಸಿಲಿಂದ ಪೀಡಿತವಾದ ಸಸಿಗಳಂತೆ,
ಶಿಶುಗಳು ನಾವಿಪ್ಪೆವೊ,
ಅಸುರಾರಿ ನಿನ್ನ ಕರುಣಾಮೃತದ,
ಮಳೆಗರೆದು ಕುಶಲದಲಿ ಪಾಲಿಸುವುದೊ,
ಕೆಸರಿಂದ ಕೆಸರು ತೊಳೆದಂತೆ,
ಕರ್ಮದ ಪಥವು,
ಅಸುನಾಥ ಹರಿಯೆ ಸಲಹೊ ಸ್ವಾಮಿ ||೨||

ಅನ್ಯರನು ಭಜಿಸದಲೆ ನಿನ್ನನ್ನೆ ಸ್ಮರಿಸುತ
ನಿನ್ನ ಚಿಹ್ನೆಗಳನೆ ಧರಿಸಿ ,
ನಿನ್ನ ನಾಮೋಚ್ಚರಿಸಿ ನಿನ್ನವರವನೆನಿಸಿ,
ನಿನ್ನಿಂದ ಉಪಜೀವಿಸಿ,
ಅನ್ನ ಆರೋಗ್ಯವು ಅಲ್ಪವು ಆಗೆ,
ಅನ್ಯರಿಗೆ ಇನ್ನು ಆಲ್ಪರಿಯಬೇಕೆ,
ನಿನ್ನ ಸಂಕಲ್ಪ ಭಕ್ತುರನು ಪೋಷಿಪೆನೆಂದು,
ಘನ್ನ ಬಿರುದನ್ನು ಉಳುಹೊ, ಸ್ವಾಮಿ ||೩||

ಆದಿವ್ಯಾಧಿಗಳು ಉನ್ಮಾದ ವಿಭ್ರಮ,
ನಾನಾ ಬಾಧೆಗೌಷಧವು ನೀನೆ,
ಹೇ ದೇವ ನಿನ್ನ ಕರಕಮಲದಿಂ,
ಸುಧೆಗರೆದು, ಸಾಧುಗಳ ಪಾಲಿಸುವ ನೀನೆ,
ಮೋದ ಬಡಿಸುವಿ ನಿನ್ನ ಸಾಧಿಸುವವರಿಗೆ,
ಶುಭೋದಯಂಗಳ ನೀಡಿ,
ಆದರಿಸಿ ಅವಗೆ ತವಪಾದ,
ಧ್ಯಾನವನಿತ್ತು ಸಾಧುಗಳೊಳಗಿರಿಸಿ,
ಮೋದಕೊಡು ಸರ್ವದಾ ||೪||

ನಿನ್ನವರಲಿ ಇವಗೆ ಇನ್ನು ರತಿಯನು ಕೊಡೊ,
ನಿನ್ನವನೆಂದು ಅರಿದು,
ನಿನ್ನ ಪ್ರಾರ್ಥಿಸಿದೆ ನಾನನ್ಯರಿಗೆ ಅಲ್ಪರಿಯೆ,
ಎನ್ನ ಪಾಲಿಸುವ ಧೊರೆಯೆ,
ಎನ್ನ ಮಾತಲ್ಲವಿದು ಎನ್ನ ಹಿರಿಯರ ಮಾತು,
ಮನ್ನಿಸಬೇಕು ಕರುಣಿ ,
ಅನಂತ ಗುಣಪೂರ್ಣ ಗೋಪಾಲವಿಠ್ಠಲ,
ಇನ್ನಿದನೆ ಪಾಲಿಸುವದೊ ಪ್ರಭುವೇ ||೫||


enna binnapa kELo dhanvaMtri dayamADo
saNNavanu iva kEvala |
bannabaDisuva rOgavannu mOcana mADi
cennAgi pAlisuvado karuNi ||pa||

ArOgya AyuShya aiSvaryaveMbo
I mUru vidha vastugaLu,
nArAyaNana BajakarAdavara,
sAdhanake pUrNavAgippuvo,
GOra vyaBicAra paraniMde ,
paravittApahAra mADida dOShadi ,
daridrarAguvaru mUru vidhadiMdale,
kAraNanu nIne ,
duShkarma parihariso, svAmi ||1||

vasumatiya mElinnu asurajanare bahaLa,
vaSavalla kaliya bAdhe,
bisiliMda pIDitavAda sasigaLaMte,
SiSugaLu nAvippevo,
asurAri ninna karuNAmRutada,
maLegaredu kuSaladali pAlisuvudo,
kesariMda kesaru toLedaMte,
karmada pathavu,
asunAtha hariye salaho svAmi ||2||

anyaranu Bajisadale ninnanne smarisuta
ninna cihnegaLane dharisi ,
ninna nAmOccarisi ninnavaravanenisi,
ninniMda upajIvisi,
anna ArOgyavu alpavu Age,
anyarige innu AlpariyabEke,
ninna saMkalpa Bakturanu pOShipeneMdu,
Ganna birudannu uLuho, svAmi ||3||

AdivyAdhigaLu unmAda viBrama,
nAnA bAdhegauShadhavu nIne,
hE dEva ninna karakamaladiM,
sudhegaredu, sAdhugaLa pAlisuva nIne,
mOda baDisuvi ninna sAdhisuvavarige,
SuBOdayaMgaLa nIDi,
Adarisi avage tavapAda,
dhyAnavanittu sAdhugaLoLagirisi,
mOdakoDu sarvadA ||4||

ninnavarali ivage innu ratiyanu koDo,
ninnavaneMdu aridu,
ninna prArthiside nAnanyarige alpariye,
enna pAlisuva dhoreye,
enna mAtallavidu enna hiriyara mAtu,
mannisabEku karuNi ,
anaMta guNapUrNa gOpAlaviThThala,
innidane pAlisuvado prabhuvE ||5||

Leave a Reply

You might also like

error: Content is protected !!