Composer : Shri Venkata vittala
ಬೃಂದಾವನ ನೋಡಿದೆ
ರಾಘವೇಂದ್ರರ ಬೃಂದಾವನ ನೋಡಿದೆ [ಪ]
ಬೃಂದಾವನ ನೋಡಿ ಆನಂದ ಮದವೇರಿ
ಚಂದದಿ ದ್ವಾದಶ ಪುಂಡ್ರಾಕಿಂತಗೊಂಡ ||ಅ.ಪ||
ತುಂಗಭದ್ರಾ ನದಿಯ ತೀರದಿ ಇದ್ದು
ತುಂಗಾ ಮಂಟಪ ಮಧ್ಯದಿ
ಶೃಂಗಾರ ಶ್ರೀತುಳಸಿ ಪದ್ಮಾಕ್ಷ ಸರಗಳಿಂದ
ಮಂಗಳಪರ ಮಹಿಮೆಯಿಂದೊಪ್ಪುವ ||೧||
ದೇಶದೇಶದಿ ಮೆಚ್ಚುತ ಇಲ್ಲಿಗೆ ಬಂದು
ವಾಸವಾಗಿ ಸೇವಿಪ, ಭಾಷೆ ಕೊಟ್ಟಂದದಿ
ಬಹುವಿಧ ವರಗಳ ಸೂಸುವವರ
ಮಹಾ ಮಹಿಮೆ-ಯಿಂದೊಪ್ಪುವ ||೨||
ನಿತ್ಯ ಸನ್ನಿಧಿ ಸೇವಿಪ ಭಕ್ತರಿಗೆಲ್ಲ
ಮತ್ತೆ ಅಭೀಷ್ಟವ ಕೊದುವ, ಸತ್ಯದಿ
ಗುಣಸಿಂಧು ವೆಂಕಟವಿಠಲನ ನಿತ್ಯ
ಸನ್ನಿಧಿಯಿಂದ ನಿರುತ ಪೂಜೆಯಗೊಂಬ ||೩||
bRuMdAvana nODide
rAGavEMdrara bRuMdAvana nODide [pa]
bRuMdAvana nODi AnaMda madavEri
caMdadi dvAdaSa puMDrAkiMtagoMDa ||a.pa||
tuMgaBadrA nadiya tIradi iddu
tuMgA maMTapa madhyadi
SRuMgAra SrItuLasi padmAkSha saragaLiMda
maMgaLapara mahimeyiMdoppuva ||1||
dESadESadi meccuta illige baMdu
vAsavAgi sEvipa, BAShe koTTaMdadi
bahuvidha varagaLa sUsuvavara
mahA mahime-yiMdoppuva ||2||
nitya sannidhi sEvipa Baktarigella
matte aBIShTava koduva, satyadi
guNasiMdhu veMkaTaviThalana nitya
sannidhiyiMda niruta pUjeyagoMba ||3||
Leave a Reply