Onde koogalate

Composer : Shri Purandara dasaru

By Smt.Shubhalakshmi Rao
Smt.Nandini Sripad

ಒಂದೇ ಕೂಗಳತೆ ಭೂ ವೈಕುಂಠ || ಪ ||
ಸಂದೇಹವಿಲ್ಲವು ಸಾಧು ಸಜ್ಜನರಿಗೆ || ಅ.ಪ ||

ಅಂಬರೀಷನು ದ್ವಾದಶಿವ್ರತವ ಮಾಡಲು
ಡೊಂಬೆಯ ಮಾಡಿದ ದುರ್ವಾಸನು
ಕುಂಭಿನೀಪತಿ ಕೃಷ್ಣ ಕಾಯಬೇಕೆನುತಲೆ
ಇಂಬಿಟ್ಟು ಚಕ್ರದಿ ಮುನಿಶಾಪ ಕಳೆದುದು || ೧ ||

ಕರಿರಾಜ ವನದಲಿ ಉಳುಹೆಂದು ಕೂಗಲು
ತ್ವರದಿಂದಲಿ ಬಂದು ಕಾಯ್ದು ತಾನು
ಕರುಣಸಾಗರ ಕೃಷ್ಣ ಕಾಯಬೇಕೆನುತಲೆ
ತರಳ ಪ್ರಹ್ಲಾದನ ಕಂಬದಿಂ ಬಂದುದು || ೨ ||

ದ್ರುಪದರಾಯನ ಪುತ್ರಿಗಾಪತ್ತು ಬರಲು
ಕೃಪೆಯಿಂದಲಿ ಅಕ್ಷಯವಿತ್ತನು
ಕಪಟನಾಟಕ ಕೃಷ್ಣ ಪುರಂದರವಿಠಲನ
ಗುಪಿತದಿ ನೆನೆವರ ಹೃದಯವೇ ವೈಕುಂಠ || ೩ ||


oMdE kUgaLate BU vaikuMTha || pa ||
saMdEhavillavu sAdhu sajjanarige || a.pa ||

aMbarIShanu dvAdaSivratava mADalu
DoMbeya mADida durvAsanu
kuMBinIpati kRuShNa kAyabEkenutale
iMbiTTu cakradi muniSApa kaLedudu || 1 ||

karirAja vanadali uLuheMdu kUgalu
tvaradiMdali baMdu kAydu tAnu
karuNasAgara kRuShNa kAyabEkenutale
taraLa prahlAdana kaMbadiM baMdudu || 2 ||

drupadarAyana putrigApattu baralu
kRupeyiMdali akShayavittanu
kapaTanATaka kRuShNa puraMdaraviThalana
gupitadi nenevara hRudayavE vaikuMTha || 3 |||

Leave a Reply

You might also like

error: Content is protected !!