Hari chitta Satya

Composer : Shri Purandara dasaru

By Smt.Shubhalakshmi Rao

ಹರಿಚಿತ್ತ ಸತ್ಯಾ ಹರಿಚಿತ್ತ ಸತ್ಯಾ
ನಮ್ಮ ನರಚಿತ್ತಕ್ಕೆ ಬಂದದ್ದು,
ಲವಲೇಶ ನಡೆಯದು [ಪ]

ಸುದತಿ ಮಕ್ಕಳ ಭಾಗ್ಯ ಬಯಸೋದು ನರಚಿತ್ತ
ಮದುವ್ಯಾಗದಿರುವುದು ಹರಿ ಚಿತ್ತವಯ್ಯ (೧)

ಕುದುರೆ ಅಂದಣ ಆನೆ ಬಯಸೋದು ನರಚಿತ್ತ
ಪದಚಾರಿಯಾಗೋದು ಹರಿ ಚಿತ್ತವಯ್ಯ (೨)

ವಿಧವಿಧ ಯಾತ್ರೆಯ ಬಯಸೋದು ನರಚಿತ್ತ
ಒದಗಿ ಬರುವ ರೋಗ ಹರಿ ಚಿತ್ತವಯ್ಯ (೩)

ಸದಾ ಅನ್ನದಾನವ ಬಯಸೋದು ನರಚಿತ್ತ
ಉದರಕ್ಕೆ ಅಳುವುದು ಹರಿ ಚಿತ್ತವಯ್ಯ (೪)

ಧರಣಿಯ ಆಳಬೇಕೆಂಬುದು ನರಚಿತ್ತ
ಪರರ ಸೇವಿಸುವುದು ಹರಿ ಚಿತ್ತವಯ್ಯ (೫)

ಪುರಂದರ ವಿಠಲನ ಬಯಸೋದು ನರಚಿತ್ತ
ದುರಿತವ ಕಳೆವುದೆ ಹರಿ ಚಿತ್ತವಯ್ಯ (೬)


haricitta satyA haricitta satyA
namma naracittakke baMdaddu,
lavalESa naDeyadu [pa]

sudati makkaLa BAgya bayasOdu naracitta
maduvyAgadiruvudu hari cittavayya (1)

kudure aMdaNa Ane bayasOdu naracitta
padacAriyAgOdu hari cittavayya (2)

vidhavidha yAtreya bayasOdu naracitta
odagi baruva rOga hari cittavayya (3)

sadA annadAnava bayasOdu naracitta
udarakke aLuvudu hari cittavayya (4)

dharaNiya ALabEkeMbudu naracitta
parara sEvisuvudu hari cittavayya (5)

puraMdara viThalana bayasOdu naracitta
duritava kaLevude hari cittavayya (6)

Leave a Reply

You might also like

error: Content is protected !!